'ದಿ ವಿಲನ್' ಮುಗಿಯುವ ಮೊದಲೇ ಶಿವಣ್ಣ - ಪ್ರೇಮ್ ಮುಂದಿನ ಸಿನಿಮಾ ಸುದ್ದಿ ಹೊರ ಬಂತು!
ಶಿವರಾಜ್ ಕುಮಾರ್, ಸುದೀಪ್ ಹಾಗೂ ಜೋಗಿ ಪ್ರೇಮ್ ಅಭಿಮಾನಿಗಳು 'ದಿ ವಿಲನ್' ಸಿನಿಮಾ ಬರುವಿಕೆಗಾಗಿ ಕಾಯುತ್ತಿದ್ದಾರೆ. ಆದರೆ ಇದೀಗ ಈ ಚಿತ್ರ ಮುಗಿಯುವ ಮೊದಲೇ ಪ್ರೇಮ್ - ಶಿವಣ್ಣ ಜೋಡಿಯ ಮತ್ತೊಂದು ಸಿನಿಮಾದ ಸುದ್ದಿ ಕೇಳಿ ಬಂದಿದೆ.
ಈ ಹಿಂದೆಯೇ ಶಿವಣ್ಣನಿಗೆ ಪ್ರೇಮ್ 'ಜಂಗಮ' ಎನ್ನುವ ಸಿನಿಮಾ ಮಾಡುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಅದು ಈಗ ನಿಜವಾಗುವ ಲಕ್ಷಣ ಎದ್ದು ಕಾಣುತ್ತಿದೆ. ಯಾಕಂದ್ರೆ, ಈ ವಿಷಯವನ್ನು ಸ್ವತಃ ಶಿವರಾಜ್ ಕುಮಾರ್ ಹೇಳಿದ್ದಾರೆ. ನಿನ್ನೆ ಪ್ರೇಮ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಶಿವಣ್ಣ ಮುಂದಿನ ಚಿತ್ರದ ಬಗ್ಗೆಯೂ ಮಾತನಾಡಿದ್ದಾರೆ.

''ಮುಂದೆ ನಾವು 'ಜಂಗಮ' ಸಿನಿಮಾಗಾಗಿ ಮತ್ತೆ ಸೇರೋಣ. ಅದು ನನಗೆ ತುಂಬ ನಿರೀಕ್ಷಿತ ಚಿತ್ರ. ಸೋ, 'ದಿ ವಿಲನ್' ನಂತರ ಒಟ್ಟಿಗೆ 'ಜಂಗಮ' ಸಿನಿಮಾ ಮಾಡೋಣ.'' ಎಂದು ಶಿವಣ್ಣ ಮೊದಲ ಬಾರಿಗೆ 'ಜಂಗಮ' ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ 'ಜಂಗಮ' ಸಿನಿಮಾ ಬರುವುದು ಬಹುತೇಕ ಪಕ್ಕಾ ಆಗಿದೆ. ಈ ಹಿಂದೆ ಪ್ರೇಮ್ ಮತ್ತು ಶಿವಣ್ಣ 'ಜೋಗಿ' ಮತ್ತು 'ಜೋಗಯ್ಯ' ಚಿತ್ರಗಳನ್ನು ಮಾಡಿದ್ದು, 'ದಿ ವಿಲನ್' ಇವರ ಹ್ಯಾಟ್ರಿಕ್ ಚಿತ್ರವಾಗಿದೆ.


Click it and Unblock the Notifications











