'ಸೈಮಾ'ದಲ್ಲಿ ಸಹೋದರರ ಪಾರುಪತ್ಯ : ಯಾವ ಯಾವ ನಟರಿಗೆ ಎಷ್ಟು ಬಾರಿ ಪ್ರಶಸ್ತಿ ಬಂದಿದೆ?

Recommended Video

ಸೈಮಾ ಪ್ರಶಸ್ತಿ ಯಾರಿಗೆಲ್ಲಾ ಸಿಕ್ಕಿದೆ ಗೊತ್ತಾ..? | Filmibeat Kannada

ನಿನ್ನೆ ತಾನೇ ಸೈಮಾ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಕನ್ನಡ ಚಿತ್ರರಂಗದ ಪೈಕಿ ಪುನೀತ್ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಕಳೆದ 7 ವರ್ಷಗಳಿಂದ ಸೈಮಾ ಪ್ರಶಸ್ತಿ ಕಾರ್ಯಕ್ರಮ ನಡೆಯುತ್ತಿದೆ. ಏಳರಲ್ಲಿ ಮೂರು ಬಾರಿ ಪುನೀತ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಜೊತೆಗೆ ಶಿವರಾಜ್ ಕುಮಾರ್ ಅವರಿಗೆ ಸಹ ಮೂರು ಬಾರಿ ಪ್ರಶಸ್ತಿಗಳು ಸಿಕ್ಕಿದೆ.ವಿಶೇಷ ಅಂದರೆ, ಸೈಮಾದಲ್ಲಿ ಸಹೋದರರ ನಡುವೆ ಪೈಪೋಟಿ ನಡೆದಿದೆ.

ಅಂದಹಾಗೆ, ಕಳೆದ ಏಳು ಬಾರಿ ನಡೆದಿರುವ ಸೈಮಾ ಪ್ರಶಸ್ತಿಗಳಲ್ಲಿ ಕನ್ನಡ ಯಾವ ಯಾವ ನಟರಿಗೆ ಪ್ರಶಸ್ತಿ ಬಂದಿದೆ ಎಂಬ ಪಟ್ಟಿ ಮುಂದೆ ಓದಿ...

ಮೂರು ಬಾರಿ ಪ್ರಶಸ್ತಿ ಪಡೆದ ಪುನೀತ್

ಮೂರು ಬಾರಿ ಪ್ರಶಸ್ತಿ ಪಡೆದ ಪುನೀತ್

ನಟ ಪುನೀತ್ ರಾಜ್ ಕುಮಾರ್ ಇದುವರೆಗೆ ಮೂರು ಬಾರಿ ಸೈಮಾ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸೈಮಾ ಶುರುವಾದ ವರ್ಷ (2012)ರಲ್ಲಿ ಮೊದಲ ಬಾರಿಗೆ ಪುನೀತ್ 'ಹುಡುಗರು' ಸಿನಿಮಾಗಾಗಿ ಪ್ರಶಸ್ತಿ ಪಡೆದಿದ್ದರು. ನಂತರ 2016ರಲ್ಲಿ 'ರಣ ವಿಕ್ರಮ' ಹಾಗೂ ಈ ಬಾರಿ 'ರಾಜಕುಮಾರ' ಚಿತ್ರಕ್ಕಾಗಿ ಅಪ್ಪು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಮೂರು ಬಾರಿ ಶಿವಣ್ಣನಿಗೆ ಪ್ರಶಸ್ತಿ

ಮೂರು ಬಾರಿ ಶಿವಣ್ಣನಿಗೆ ಪ್ರಶಸ್ತಿ

ನಟ ಶಿವರಾಜ್ ಕುಮಾರ್ ಈ ಹಿಂದೆ ಮೂರು ಬಾರಿ ಸೈಮಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. 2013 ರಲ್ಲಿ 'ಶಿವ' ಸಿನಿಮಾಗಾಗಿ ಹಾಗೂ 2014ರಲ್ಲಿ 'ಭಜರಂಗಿ' ಹಾಗೂ ಕಳೆದ ಬಾರಿ 'ಶಿವಲಿಂಗ' ಸಿನಿಮಾಗಾಗಿ ಕರುನಾಡ ಚಕ್ರವರ್ತಿಗೆ ಪ್ರಶಸ್ತಿ ಒಲಿದು ಬಂತು.

ಒಮ್ಮೆ ಪ್ರಶಸ್ತಿಗೆ ಮುತ್ತಿಕ್ಕಿದ್ದ ರಾಮಾಚಾರಿ

ಒಮ್ಮೆ ಪ್ರಶಸ್ತಿಗೆ ಮುತ್ತಿಕ್ಕಿದ್ದ ರಾಮಾಚಾರಿ

ನಟ ರಾಕಿಂಗ್ ಸ್ಟಾರ್ ಯಶ್ ಒಂದು ಬಾರಿ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕಾಗಿ 2015 ರಲ್ಲಿ ಯಶ್ ಮೊದಲ ಬಾರಿಗೆ ಅತ್ಯುತ್ತಮ ನಟ ಸೈಮಾ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಸಂಭ್ರಮದಿಂದ ಮುಗಿಯಿತು ಈ ಬಾರಿಗೆ ಸೈಮಾ

ಸಂಭ್ರಮದಿಂದ ಮುಗಿಯಿತು ಈ ಬಾರಿಗೆ ಸೈಮಾ

ಈ ಬಾರಿಗೆ ಸೈಮಾ ಕಾರ್ಯಕ್ರಮ ಮುಗಿದಿದೆ. ಕನ್ನಡ ಚಿತ್ರಗಳ ಪೈಕಿ 'ರಾಜಕುಮಾರ' ಚಿತ್ರ ಅತಿ ಹೆಚ್ಚು ಪ್ರಶಸ್ತಿ ಪಡೆದಿದೆ. ಸಂತೋಷ್ ಆನಂದ್ ರಾಮ್ ಅತ್ಯುತ್ತಮ ನಿರ್ದೇಶಕ ಹಾಗೂ ಅತ್ಯುತ್ತಮ ಗೀತ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿದರು. ಪುನೀತ್ ರಾಜ್ ಕುಮಾರ್ (ಅತ್ಯುತ್ತಮ ನಟ), ವಿ.ಹರಿಕೃಷ್ಣ (ಅತ್ಯುತ್ತಮ ಸಂಗೀತ ನಿರ್ದೇಶಕ), ಹಾಗೂ ಅತ್ಯುತ್ತಮ ಸಿನಿಮಾ ಪ್ರಶಸ್ತಿಯನ್ನು 'ರಾಜಕುಮಾರ' ಪಡೆದುಕೊಂಡಿದೆ.

More from Filmibeat

English summary
Kannada actor Shivaraj Kumar and Puneeth Rajkumar has won 3 time South Indian International movie awards.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X