ಅಮ್ಮನ ಕಂಚಿನ ಪುತ್ಥಳಿ ನೋಡಿ ಸಂತಸಪಟ್ಟ ಶಿವಣ್ಣ ಬ್ರದರ್ಸ್
Recommended Video
ಕನ್ನಡ ಚಲನಚಿತ್ರರಂಗದ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ ಇತ್ತೀಚಿಗಷ್ಟೆ ಉದ್ಘಾಟನೆಯಾಗಿದೆ. ಬೆಂಗಳೂರಿನ ಯಡಿಯೂರು ವಾರ್ಡ್ ವ್ಯಾಪ್ತಿಯ ಡಾ. ಪಾರ್ವತಮ್ಮ ರಾಜ್ ಕುಮಾರ್ ರಸ್ತೆ ಹಾಗೂ ಸೌತ್ ಎಂಡ್ ವೃತ್ತ ಒಂದುಗೂಡುವ ಸ್ಥಳದಲ್ಲಿ ಪುತ್ಥಳಿ ನಿರ್ಮಿಸಲಾಗಿದೆ.
ಇತ್ತೀಚಿಗಷ್ಟೆ ಲೋಕಾರ್ಪಣೆಯಾದ ಪುತ್ಥಳಿಯನ್ನು ಇಂದು ಶಿವಣ್ಣ ಬ್ರದರ್ಸ್ ನೋಡಿ ಸಂತಸ ಪಟ್ಟಿದ್ದಾರೆ. ಹೌದು, ಉದ್ಘಾಟನೆ ವೇಳೆ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಬೆಂಗಳೂರಿನಲ್ಲಿ ಇರಲಿಲ್ಲ. ಚಿತ್ರೀಕರಣ ನಿಮಿತ್ತ ಶಿವಣ್ಣ ಮಂಗಳೂರನಲ್ಲಿ ಇದ್ರೆ, ಪುನೀತ್ ರಾಜ್ ಕುಮಾರ್ ಚನ್ನೈನಲ್ಲಿ ಇದ್ದರಂತೆ.
ಹಾಗಾಗಿ ಇಂದು ಪಾರ್ವತಮ್ಮ ಅವರ ಕಂಚಿನ ಪ್ರತಿಮೆ ಇರುವ ಜಾಗಕ್ಕೆ ಭೇಟಿ ನೀಡಿ, ಅಮ್ಮನ ಪ್ರತಿಮೆಯನ್ನು ನೋಡಿ ಖುಷಿ ಪಟ್ಟಿದ್ದಾರೆ. ಈ ಸಮಯದಲ್ಲಿ ಪ್ರತಿಮೆ ನಿರ್ಮಾಣದ ನೇತೃತ್ವ ವಹಿಸಿದ್ದ ಮಾಜಿ ಕಾರ್ಪೋರೇಟ್ ಎನ್ ಆರ್ ರಮೇಶ್ ಕೂಡ ಹಾಜರಿದ್ದರು.

ಡಾ. ಪಾರ್ಮತಮ್ಮ ಅವರ ಎರಡನೆ ಪುಣ್ಯ ತಿಥಿಯ ದಿನ ಈ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಕಂಚಿನ ಪ್ರತಿಮೆಯನ್ನು ಸುಮಾರು 10ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಕನ್ನಡ ಚಲನಚಿತ್ರ ಇತಿಹಾಸದಲ್ಲೆ ಮೊದಲ ಬಾರಿಗೆ ನಿರ್ಮಾಪಕಿಯೊಬ್ಬರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿರುವುದು ವಿಶೇಷ.


Click it and Unblock the Notifications











