ಶಿವಣ್ಣ-ಉಪೇಂದ್ರ ಕಾಂಬಿನೇಷನ್ ನ 'ಓಂ' ಚಿತ್ರಕ್ಕೆ 26 ವರ್ಷದ ಸಂಭ್ರಮ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ 'ಓಂ' ಸಿನಿಮಾಗೆ 26 ವರ್ಷದ ಸಂಭ್ರಮ. ಇದೇ ದಿನ 26 ವರ್ಷಗಳ ಹಿಂದೆ ಅಂದರೆ ಮೇ 19ಕ್ಕೆ ಓಂ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿತ್ತು. ಇಂದಿಗೂ ಈ ಸಿನಿಮಾದ ಕ್ರೇಜ್ ಕಮ್ಮಿ ಆಗಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಓಂ ಚಿತ್ರದ ಪೋಸ್ಟರ್ ಗಳನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ. ಕಳೆದ ಬಾರಿ 25 ವರ್ಷ ತುಂಬಿದ ಸಂಭ್ರಮದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಸಂಭ್ರಮ ಆಚರಿಸಿದ್ದರು. ಇಬ್ಬರು ಒಟ್ಟಿಗೆ ಲೈವ್ ಬರುವುದಾಗಿ ಹೇಳಿ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಹೆಚ್ಚಿಸಿದ್ದರು. ಆದರೆ ತಾಂತ್ರಿಕ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ.

1995ರಲ್ಲಿ ರಿಲೀಸ್ ಆದ ಓಂ ಸೂಪರ್ ಹಿಟ್ ಆಗಿದ್ದಲ್ಲದೆ. ಸಾಕಷ್ಟು ಹೆಗ್ಗಳಿಕೆಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಶಿವರಾಜ್ ಕುಮಾರ್ 'ಸತ್ಯ' ಪಾತ್ರ ಮತ್ತು 'ಮಧು' ಪಾತ್ರದಲ್ಲಿ ಪ್ರೇಮಾ ಮಿಂಚಿದ್ದರು. ಇಬ್ಬರೂ ಅತ್ಯುತ್ತಮ ನಟ, ನಟಿ ಪ್ರಶಸ್ತಿ ಪಡೆದುಕೊಂಡರು. ಒಂದೇ ಚಿತ್ರದ ಅಭಿನಯಕ್ಕೆ ನಾಯಕ-ನಾಯಕಿಯರಿಬ್ಬರೂ ಪ್ರಶಸ್ತಿ ಪಡೆದುಕೊಂಡ ಅಪರೂಪದ ಸಾಧನೆ ಇದು.

Shivaraj Kumar and Upendra combinations Om movie Completed 26th year

ಇನ್ನು ಉಪೇಂದ್ರ ಅವರಿಗೆ ಅತ್ಯುತ್ತಮ ಚಿತ್ರಕಥೆ, ಬಿ.ಸಿ. ಗೌರಿಶಂಕರ್ ಅವರಿಗೆ ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಕೂಡ ಲಭಿಸಿತು. ಈ ಚಿತ್ರ ಹಿಂದಿ ಮತ್ತು ತೆಲುಗಿಗೂ ರಿಮೇಕ್ ಆಗಿತ್ತು.

Shivaraj Kumar and Upendra combinations Om movie Completed 26th year

ಚಿತ್ರದ ಮತ್ತೊಂದು ವಿಶೇಷತೆ ಎಂದರೆ ನಿಜ ಜೀವನದಲ್ಲಿ ರೌಡಿಗಳಾಗಿದ್ದ ಅನೇಕರು 'ಓಂ' ಚಿತ್ರದಲ್ಲಿ ನಟಿಸಿದ್ದರು. ಇಂತಹ ಪ್ರಯೋಗ ಮಾಡಿದ ಮೊದಲ ಸಿನಿಮಾ ಇದು. ಕಪಾಲಿ ಚಿತ್ರಮಂದಿರದಲ್ಲಿಯೇ ಇದು 30 ಬಾರಿ ಬಿಡುಗಡೆಯಾಗಿದೆ. ಸಿನಿಮಾವೊಂದು ಒಂದೇ ಚಿತ್ರಮಂದಿರದಲ್ಲಿ ಇಷ್ಟು ಬಾರಿ ಬಿಡುಗಡೆಯಾದ ಬೇರೆ ನಿದರ್ಶನವಿಲ್ಲ.

Recommended Video

Fake! Fake!! ಇದು ನಾನಲ್ಲ ಹುಷಾರಾಗಿರಿ ಎಂದ ಸೋನು ಸೂದ್ | Filmibeat Kannada

More from Filmibeat

English summary
Shivaraj Kumar and Upendra combination's Om movie Completed 26th year.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X