'ಓಂ' ಸಿನಿಮಾ ಸಂಭ್ರಮ: ಶಿವಣ್ಣ-ಉಪೇಂದ್ರ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಗಿಫ್ಟ್

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ, ಶಿವರಾಜ್ ಕುಮಾರ್ ಅಭಿನಯದ 'ಓಂ' ಸಿನಿಮಾಗೆ 25 ವರ್ಷದ ಸಂಭ್ರಮ. ಮೇ 19ಕ್ಕೆ ಓಂ ಸಿನಿಮಾ ರಿಲೀಸ್ ಆಗಿ 25 ವರ್ಷಗಳಾಗಿದೆ. ಇಂದಿಗೂ ಈ ಸಿನಿಮಾದ ಕ್ರೇಜ್ ಕಮ್ಮಿ ಆಗಿಲ್ಲ. 1995ರಲ್ಲಿ ರಿಲೀಸ್ ಆದ ಓಂ ಸೂಪರ್ ಹಿಟ್ ಆಗಿದ್ದಲ್ಲದೆ. ಸಾಕಷ್ಟು ಹೆಗ್ಗಳಿಕೆಗೆ ಪಾತ್ರವಾಗಿದೆ.

Recommended Video

ಲಾಕ್ ಡೌನ್ ಟೈಂನಲ್ಲಿ ರಿಯಲ್ ಸಿನಿಮಾ ಮಾಡಲು ಹೊರಟಿದ್ದಾರೆ ಉಪೇಂದ್ರ | Upendra | Oneindia Kannada

25 ವರ್ಷ ಪೂರೈಸಿದ ಸ್ಯಾಂಡಲ್ ವುಡ್ ನ ಈ ಎವರ್ ಗ್ರೀನ್ ಸಿನಿಮಾದ ಸಂಭ್ರಮ ಹಂಚಿಕೊಳ್ಳಲು ಶಿವರಾಜ್ ಕುಮಾರ್ ಮತ್ತು ಉಪೇಂದ್ರ ಇಬ್ಬರು ಒಟ್ಟಿಗೆ ಫೇಸ್ ಬುಕ್ ಲೈವ್ ಬರ್ತಿದ್ದಾರೆ.

ಲಾಕ್ ಡೌನ್ ಇಲ್ಲದಿದ್ದರೆ ಓಂ ಸಿನಿಮಾದ 25ನೇ ವರ್ಷದ ಸಂಭ್ರಮ ಅದ್ದೂರಿಯಾಗಿ ಇರುತ್ತಿತ್ತೊ ಏನು. ಆದರೆ ಲಾಕ್ ಡೌನ್ ಹಿನ್ನಲೆ ಯಾವುದೆ ಸಂಭ್ರಮಾಚರಣೆ ಇಲ್ಲ. ಹಾಗಂತ ಅಭಿಮಾನಿಗಳು ಸುಮ್ಮನಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಹಬ್ಬ ಮಾಡುತ್ತಿದ್ದಾರೆ.

Shivaraj Kumar And Upendra To Come Live On Facebook For Celebrating On 25 Years

ಶಿವಣ್ಣ ಮತ್ತು ಉಪೇಂದ್ರ ಅವರ ಕಾಮನ್ ಡಿಪಿ ರಿಲೀಸ್ ಮಾಡಿ ಓಂ ಸಿನಿಮಾದ ಟ್ರೆಂಡ್ ಮಾಡುತ್ತಿದ್ದಾರೆ. ಇನ್ನೂ ಸಿನಿಮಾತಂಡ ಸಹ ಸೈಲೆಂಟ್ ಆಗಿಲ್ಲ. ಚಿತ್ರವನ್ನು ಗೆಲ್ಲಿಸಿದ ಅಭಿಮಾನಿಗಳಿಗೆ ಧನ್ಯವಾದ ಹೇಳಲು ಫೇಸ್ ಬುಕ್ ಲೈವ್ ಬರುತ್ತಿದ್ದಾರೆ.

Shivaraj Kumar And Upendra To Come Live On Facebook For Celebrating On 25 Years

ಇಂದು ಸಂಜೆ 7.30ಕ್ಕೆ ಇಬ್ಬರು ಸ್ಟಾರ್ ಫೇಸ್ ಬುಕ್ ಲೈವ್ ಮೂಲಕ ಅಭಿಮಾನಿಗಳ ಜೊತೆ ಮಾತುಕತೆಗೆ ಇಳಿಯಲಿದ್ದಾರೆ. ಓಂ ಸಿನಿಮಾದ ಬಗ್ಗೆ, ಚಿತ್ರೀಕರಣ ಸಂದರ್ಭದಲ್ಲಿ ನಡೆದ ಸ್ವಾರಸ್ಯಕರ ಘಟನೆಗಳ ಅನುಭವನ್ನು ಹಂಚಿಕೊಳ್ಳಲಿದ್ದಾರೆ. ಇಬ್ಬರು ಸ್ಟಾರ್ಸ್ ಅನ್ನು ಒಟ್ಟಿಗೆ ಲೈವ್ ನಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

More from Filmibeat

English summary
Kannada Super hit Om movie completed 25 years. Shivaraj Kumar And Upendra to come live on Facebook.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X