For Quick Alerts
  ALLOW NOTIFICATIONS  
  For Daily Alerts

  'ನೀನು ಯಾವಾಗಲು ನನ್ನ ಹೃದಯದಲ್ಲಿ ಇರ್ತೀಯಾ': ಅಗಲಿದ ಅಭಿಮಾನಿಗೆ ಶಿವಣ್ಣ ಭಾವುಕ ನುಡಿ

  |
  ಶಿವಣ್ಣ ತುಂಬ ಭಾವುಕರಾಗಿದ್ದೇಕೆ ಗೊತ್ತಾ? | FILMIBEAT KANNADA

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿ ಕಶ್ಯಪ್ ಸಿಂಹ ಹೃದಯಘಾತದಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಬೆಂಗಳೂರಿನ ಶ್ರೀನಗರದ ತಮ್ಮ ನಿವಾಸದಲ್ಲಿ ಕಶ್ಯಪ್ ಕೊನೆಯುಸಿರೆಳೆದಿದ್ದಾರೆ. ಕಶ್ಯಪ್ ನಿಧನಕ್ಕೆ ಶಿವಣ್ಣನ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

  ಅಭಿಮಾನಿಗಳು ಮಾತ್ರವಲ್ಲದೆ ಶಿವಣ್ಣ ಕೂಡ ಅಪ್ಪಟ ಅಭಿಮಾನಿಯನ್ನು ಕಳೆದು ಕೊಂಡ ನೋವಿನಲ್ಲಿದ್ದಾರೆ. ಅಗಲಿದ ಅಭಿಮಾನಿಗೆ ಸಂತಾಸ ಸೂಚಿಸುವ ಜೊತೆಗೆ ಕಶ್ಯಪ್ ಬಗ್ಗೆ ಭಾವುಕ ಮಾತುಗಳನ್ನು ಆಡಿದ್ದಾರೆ.

  'ಶಿವಸೈನ್ಯ' ತಂಡದ ಅಪ್ಪಟ್ಟ ಅಭಿಮಾನಿ ನಿಧನ

  "ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ. ಒಬ್ಬ ಅಭಿಮಾನಿ ಕಳೆದು ಕೊಂಡರೆ ಅದರ ನಿಜವಾದ ನೋವು, ಪ್ರೀತಿಸಿದವರಿಗೆ ಮಾತ್ರ ಗೊತ್ತಾಗುತ್ತೆ. ನೀವು ತೋರಿಸಿದ ಪ್ರೀತಿ, ಅಭಿಮಾನ, ಸಿನಿಮಾ ನೋಡಿ ಕೊಂಡಾಡಿದ್ದನ್ನು ಯಾವಾಗಲು ಮರೆಯಲು ಸಾಧ್ಯವಿಲ್ಲ. ನೀನು ಯಾವಾಗಲು ನನ್ನ ಹೃದಯದಲ್ಲಿ ಇರುತ್ತೀಯಾ. ನಿನ್ನ ಪ್ರೀತಿ, ಅಭಿಮಾನ ಯಾವಾಗಲು ನನ್ನ ಮೇಲೆ ಇರಬೇಕು ಎಂದು ಕೇಳಿಕೊಳ್ಳುತ್ತೇನೆ. ಲವ್ ಯು. ಮಿಸ್ ಯೂ" ಎಂದು ಹೇಳುತ್ತ ಅಭಿಮಾನಿಯನ್ನು ಕಳೆದುಕೊಂಡ ದುಃಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಶಿವಣ್ಣ.

  ಶಿವರಾಜ್ ಕುಮಾರ್ ಮೇಲಿನ ಅಪಾರ ಅಭಿಮಾನದಿಂದ 'ಶಿವಸೈನ್ಯ' ಎನ್ನುವ ಅಭಿಮಾನಿ ಬಳಗವನ್ನು ಕಟ್ಟಿ ಬೆಳೆಸಿದ್ದರು. ಅದರ ಮೂಲಕ ತಮ್ಮ ಅಭಿಮಾನವನ್ನು ತೋರುತ್ತಿದ್ದರು. ಶಿವಣ್ಣನ ಯಾವುದೇ ಸಿನಿಮಾ ಬಿಡುಗಡೆಯಾದರೂ ಸಂಭ್ರಮಾಚರಣೆ ಮಾಡುತ್ತಿದ್ದರು. ಕಳೆದ ವಾರ ಬಿಡುಗಡೆಯಾದ 'ರುಸ್ತುಂ' ಸಿನಿಮಾವನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ್ದರು.

  ಕಶ್ಯಪ್ ಸಿಂಹ ಟಿವಿಎಸ್ ಮೋಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಪ್ಪ ಅಮ್ಮನಿಗೆ ಒಬ್ಬನೇ ಮಗನಾಗಿದ್ದರು. ರಾಯಲ್ ಎನ್ಫೀಲ್ಡ್ ಬೈಕ್ ರೈಡರ್ ಆಗಿದ್ದರು. ಅನೇಕ ರಾಲಿಗಳಲ್ಲಿ ಭಾಗಿಯಾಗಿದ್ದರು. ಬೈಕ್ ರೈಡ್ ಎಂದರೆ ಅವರಿಗೆ ಬಹಳ ಇಷ್ಟವಾಗಿತ್ತು. ಇಂತಹ ಅಪ್ಪಟ ಅಭಿಮಾನಿಯನ್ನು ಕಳೆದುಕೊಂಡ ನೋವು ಶಿವಣ್ಣ ಅವರನ್ನು ಕಾಡುತ್ತಿದೆ.

  English summary
  kannada actor Shivarajkumar condolence for his fan Kashyap Simha. Kashyap Simha (27) passed away of a heart attack.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X