ಶ್ರೀಗಳ ಅಂತಿಮ ದರ್ಶನ ಪಡೆಯಲು ಶಿವಣ್ಣನಿಗೆ ಸಾಧ್ಯ ಆಗಲಿಲ್ಲ
Recommended Video

ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಜಿಯವರ ಅಂತಿಮ ವಿಧಿ ವಿಧಾನಗಳು ಇಂದು ನಡೆಯುತ್ತಿದೆ. ಇಂದು ಸಂಜೆ ಐದು ಗಂಟೆಯ ನಂತರ ಲಿಂಗ ಶರೀರದ ಕ್ರಿಯಾ ಸಮಾಧಿ ಮಾಡಲಾಗುತ್ತದೆ.
ಶ್ರೀಗಳ ಸಾವಿನ ಸುದ್ದಿ ಕೇಳಿದ ಭಕ್ತಾಧಿಗಳಿಗೆ ಏನು ಮಾಡುವುದು ತಿಳಿಯದಾಗಿದೆ. ಜನರ ನಡುವೆ ದೇವರಂತೆ ಇದ್ದ ಮಹಾ ಯೋಗಿಯನ್ನು ಕಳೆದುಕೊಂಡು ಎಲ್ಲರೂ ದುಃಖದಲ್ಲಿದ್ದಾರೆ.
ಸಿದ್ದಗಂಗಾ LIVE: ರಾಜ್ಯಾದ್ಯಂತ ಹರಿಯುತ್ತಿದೆ ಕಣ್ಣೀರ ಕೋಡಿ
ಕನ್ನಡ ಚಿತ್ರರಂಗದ ಕೂಡ ಶ್ರೀಗಳ ನಿಧನಕ್ಕೆ ಕಂಬನಿ ಮಿಡಿದಿದೆ. ನಟರಾದ ಪುನೀತ್ ರಾಜ್ ಕುಮಾರ್, ದರ್ಶನ್, ಸುದೀಪ್, ಯಶ್, ಉಪೇಂದ್ರ, ಗಣೇಶ್, ಶ್ರೀಮುರಳಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪವನ್ ಒಡೆಯರ್ ಹೀಗೆ ಸಾಕಷ್ಟು ಗಣ್ಯರು ಶ್ರೀಗಳಿಗೆ ಸಂತಾಪ ಸೂಚಿಸಿದ್ದಾರೆ. ಇದೀಗ, ನಟ ಶಿವರಾಜ್ ಕುಮಾರ್ ಕೂಡ ಶ್ರೀಗಳ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿ...

ವಿದೇಶದಲ್ಲಿ ಶಿವಣ್ಣ
ನಟ ಶಿವರಾಜ್ ಕುಮಾರ್ ಅವರಿಗೆ ಶ್ರೀಗಳ ಅಂತಿಮ ದರ್ಶನ ಪಡೆಯಲು ಸಾಧ್ಯ ಆಗಲಿಲ್ಲ. ಸದ್ಯ ಒಂದು ಕಾರ್ಯಕ್ರಮ ಇರುವ ಕಾರಣ ಶಿವಣ್ಣ ವಿದೇಶಕ್ಕೆ ತೆರಳಿದ್ದಾರೆ. ಈ ಕಾರಣದಿಂದ ಶ್ರೀಗಳನ್ನು ಕೊನೆಯ ಬಾರಿ ನೋಡಲು ಅವರಿಗೆ ಆಗುತ್ತಿಲ್ಲ. ಶ್ರೀಗಳು ವಿಧಿವಶರಾದ ಸುದ್ದಿ ತಿಳಿದ ಬಳಿಕ ಅಲ್ಲಿಂದಲೇ ಶಿವಣ್ಣ ಒಂದು ವಿಡಿಯೋ ಮೂಲಕ ಸಂತಾಪ ಸೂಚಿಸಿದ್ದಾರೆ.

ಅಲ್ಲಿಂದಲೇ ನಮಗೆ ಆಶೀರ್ವಾದ ಮಾಡುತ್ತಾರೆ
''ಶ್ರೀಗಳು ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು ಹೇಳಲು ನಾನು ಇಷ್ಟಪಡುವುಲ್ಲ. ಅವರು ಇಲ್ಲ ಎಂದು ಉಹಿಸಿಕೊಳ್ಳಲು ಸಾಧ್ಯ ಇಲ್ಲ. ಶ್ರೀಗಳ ವಿಷಯ ಎಲ್ಲರಿಗೆ ನೋವು ತಂದಿದೆ. ಅವರು ಶಿವನ ಪಾದಕ್ಕೆ ಸೇರಿದ್ದಾರೆ. ಅಲ್ಲಿಂದಲೇ ನಮಗೆ ಆಶೀರ್ವಾದ ಮಾಡುತ್ತಾರೆ. ನಮ್ಮೆಲ್ಲರಿಗೆ ಒಳ್ಳೆಯದಾಗಲಿ ಎಂದು ಅಲ್ಲಿಂದ ಬಯಸುತ್ತಾರೆ.'' - ಶಿವರಾಜ್ ಕುಮಾರ್, ನಟ

ಮಕ್ಕಳಲ್ಲಿ ಅವರು ಇದ್ದಾರೆ
''ಅವರು ಅಷ್ಟೊಂದು ಮಕ್ಕಳಿಗೆ ತಮ್ಮ ಮಠದಲ್ಲಿ ಆಶ್ರಯ ನೀಡಿದ್ದಾರೆ. ಆ ಮಕ್ಕಳಲ್ಲಿ ಅವರು ಇದ್ದಾರೆ. ಅಕ್ಷರ, ಅನ್ನದಲ್ಲಿ ಅವರು ಇದ್ದಾರೆ. ಇಡೀ ಕರ್ನಾಟಕ ಜನರ ಹೃದಯದಲ್ಲಿ ಅವರು ಸದಾ ಇರುತ್ತಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಕಾರ್ಯಕ್ರಮ ಇರುವ ಕಾರಣ ನಾನು ಯು ಎನ್ ಎ ಯಲ್ಲಿ ಇದ್ದೀನಿ ಹೀಗಾಗಿ ಬರಲು ಆಗುತ್ತಿಲ್ಲ.'' - ಶಿವರಾಜ್ ಕುಮಾರ್, ನಟ
ಎಂದಿಗೂ ನಮ್ಮ ಜೊತೆಗೆ ಇರುತ್ತಾರೆ
''ಶ್ರೀಗಳ ಸುದ್ದಿ ಕೇಳಿದ ತಕ್ಷಣ ಬಹಳ ನೋವಾಯಿತು. ಅವರು ಮಾತನಾಡುವ ರೀತಿ ತುಂಬ ಇಷ್ಟ ಆಗುತ್ತಿತ್ತು. ಅವರ ಮಾತನ್ನು ಎಲ್ಲರೂ ನೆನೆಪು ಮಾಡಿಕೊಳ್ಳಬೇಕು. ಅವರು ಇಲ್ಲ ಎಂದಿಗೂ ನಮ್ಮ ಜೊತೆಗೆ ಇರುತ್ತಾರೆ. ನಾವು ಯಾವಾಗಲೂ ಅವರನ್ನು ನೆನಪು ಮಾಡಿಕೊಳ್ಳಬೇಕು.'' - ಶಿವರಾಜ್ ಕುಮಾರ್, ನಟ

ಇಂದು ಚಿತ್ರ ಪ್ರದರ್ಶನ ಇಲ್ಲ
ಕನ್ನಡ ಚಿತ್ರರಂಗ ಶ್ರೀಗಳ ಅಗಲಿಕೆಗೆ ಸಂತಾಪ ಸೂಚಿಸಿದೆ. ಶ್ರೀಗಳ ನಿಧನದ ಹಿನ್ನಲೆಯಲ್ಲಿ ಇಂದು ಕರ್ನಾಟಕದಲ್ಲಿ ಚಿತ್ರ ಪ್ರದರ್ಶನ, ಚಿತ್ರೀಕರಣ ಹಾಗೂ ಇತರೆ ಕೆಲಸಗಳನ್ನು ರದ್ದು ಮಾಡಲಾಗಿದೆ. ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಚಿನ್ನೆಗೌಡ ಸ್ಪಷ್ಟನೆ ನೀಡಿದ್ದಾರೆ.


Click it and Unblock the Notifications











