For Quick Alerts
  ALLOW NOTIFICATIONS  
  For Daily Alerts

  ಆಪರೇಷನ್ ವೇಳೆ ಶಿವಣ್ಣನ ಹಾಡು ಕೇಳಿ ಕುಣಿದ ಅಭಿಮಾನಿಯ ವಿಡಿಯೋ ವೈರಲ್

  |
  ಆಪರೇಷನ್ ವೇಳೆ ಶಿವಣ್ಣನ ಹಾಡು ಕೇಳಿ ಕುಣಿದ ಅಭಿಮಾನಿ | SHIVANNA | FILMIBEAT KANNADA

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 58ನೇ ವಯಸ್ಸಿನಲ್ಲಿಯೂ ಚಿರಯುವಕನಂತೆ ಸಖತ್ ಎನರ್ಜಿಯಿಂದ ಡ್ಯಾನ್ಸ್ ಮಾಡುವುದನ್ನು ನೋಡಿದ್ದೀರಾ. ಶಿವಣ್ಣನ ಎನರ್ಜಿಗೆ ಫಿದಾ ಆಗದವರೆ ಇಲ್ಲ. ಶಿವಣ್ಣನ ಅಪ್ಪಟ ಅಭಿಮಾನಿಗಳೂ ಅದೆ ಎನರ್ಜಿ ಎಂದರೆ ತಪ್ಪಾಗಲ್ಲ. ಯಾಕಂದರೆ ಇಲ್ಲೊಬ್ಬ ಅಭಿಮಾನಿ ಶಿವಣ್ಣನ ಹಾಡು ಕೇಳಿ ಆಪರೇಷನ್ ಥಿಯೇಟರ್ ನಲ್ಲಿಯೆ ಕುಣಿದು ಅಚ್ಚರಿ ಮೂಡಿಸಿದ್ದಾರೆ.

  ಹೌದು, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯ ಎರಡು ಕಾಲಿಗೂ ತೀವ್ರವಾಗಿ ಗಾಯವಾಗಿದೆ. ಈ ಅಭಿಮಾನಿ ಸದ್ಯ ಆಸ್ಪತ್ರೆಯ ಬೆಡ್ ನಲ್ಲಿ ಇದ್ದಾರೆ. ಮೂರ್ನಾಲ್ಕು ವೈದ್ಯರು ಅವರ ಕಾಲಿಗೆ ಸರ್ಜರಿ ಮಾಡುತ್ತಿದ್ದಾರೆ. ಆದರೆ ಅಚ್ಚರಿ ಮೂಡಿಸಿದ್ದು ಅಂದರೆ ಆ ಅಭಿಮಾನಿ ಅನಸ್ತೇಶಿಯಾ ತೆಗೆದುಕೊಳ್ಳದೆ ಶಿವಣ್ಣನ ಹಾಡು ಕೇಳುತ್ತ ಸರ್ಜರಿ ಮಾಡಿಸಿಕೊಳ್ಳುತ್ತಿದ್ದಾರೆ.

  ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಡಾ.ರಾಜ್ ಕುಟುಂಬ.!

  ಹ್ಯಾಟ್ರಿಕ್ ಹೀರೋ ಅಭಿನಯದ ಕುರುಬನ ರಾಣಿ ಚಿತ್ರದ ಹಾಡನ್ನು ಕೇಳುತ್ತ ತೀರಾ ನೋವಿನಲ್ಲಿಯೂ ಹಾಡಿನನ್ನು ಕೇಳುತ್ತಾ ಎಂಜಾಯ್ ಮಾಡುತ್ತ ಬೆಡ್ ಮೇಲೆಯೆ ಕುಣಿಯುತ್ತಿದ್ದಾರೆ. ಶಿವಣ್ಣನ ಹಾಡು ಅವರ ನೋವನ್ನು ಮರೆಸಿ ಜೋಶ್ ನೀಡುತ್ತಿರುವುದನ್ನು ನೋಡಿ ಅನೇಕರು ಬೆರಗಾಗಿದ್ದಾರೆ. ಎರಡೂ ಕಾಲಿಗೂ ಪೆಟ್ಟಾಗಿದ್ದರು ಶಿವರಾಜ್ ಕುಮಾರ್ ಹಾಡಿಗೆ ಕುಣಿಯುತ್ತ, ಚಿಕಿತ್ಸೆಗೆ ಸ್ಫಂದಿಸುತ್ತಿರುವ ರೀತಿಗೆ ವೈದ್ಯರು ಸಹ ಬೆರಗಾಗಿದ್ದಾರೆ.

  ಅಭಿಮಾನಿಯ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಶಿವಣ್ಣ ಅಭಿಮಾನಿಗಳು ಸಹ ಈ ವಿಡಿಯೋ ನೋಡಿ ಥ್ರಿಲ್ ಆಗಿ ವಿಡಿಯೋ ಶೇರ್ ಮಾಡುತ್ತಿದ್ದಾರೆ. ಅಲ್ಲದೆ ಶಿವಣ್ಣ ಸಿನಿಮಾದ ಹಾಡುಗಳು ಯಾವಾಗಲು ಮ್ಯಾಜಿಕ್ ಮಾಡುತ್ತೆ ಮತ್ತು ಅಭಿಮಾನಿಗಳಿಗೂ ಎನರ್ಜಿ ನೀಡುತ್ತೆ ಎಂದು ಬರೆದುಕೊಳ್ಳುತ್ತಿದ್ದಾರೆ. ಜೊತೆಗೆ ಅಭಿಮಾನಿಗಳು ಬೇಗ ಗುಣಮುಖರಾಗುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.

  English summary
  Kannada actor Shivaraj Kumar Fan dance in operation theatre for Kurubana Rani song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X