ಸುಕ್ಕಾ ಸೂರಿ ಮೇಲೆ ಶಿವಣ್ಣನ ಅಭಿಮಾನಿಗಳ ಬೇಸರ
Recommended Video

ವರ್ಷದ ಭಾರಿ ನಿರೀಕ್ಷೆ ಮೂಡಿಸಿದ ಸಿನಿಮಾ ಟಗರು ಬಿಡುಗಡೆ ಆಗಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ನೋಡಿದ ಪ್ರೇಕ್ಷಕರು ಥಿಯೇಟರ್ ನಿಂದ ನಗು ಮುಖದಲ್ಲಿ ಹೊರ ಬರುತ್ತಿದ್ದಾರೆ. ಶಿವಣ್ಣನ ಖದರು, ಡಾಲಿಯ ಪೊಗರನ್ನ ನೋಡಿ ಸ್ಕ್ರೀನ್ ಪ್ಲೇ ಚೆನ್ನಾಗಿದೆ ಎನ್ನುತ್ತಿದ್ದಾರೆ.
ಸಿನಿಮಾಗೆ ಬಿಗ್ ಓಪನಿಂಗ್ ಪಡೆದುಕೊಂಡ ಹಿನ್ನಲೆಯಲ್ಲೇ ಶಿವಣ್ಣನ ಕೆಲ ಅಭಿಮಾನಿಗಳು ಮಾತ್ರ ನಿರ್ದೇಶಕ ಸೂರಿಯ ವಿರುದ್ದ ಕೋಪಗೊಂಡಿದ್ದಾರೆ. ಅದ್ಯಾಕೋ ಸೂರಿ ಅವರು ಮಾಡಿದ್ದು ಸರಿಯಾಗಿಲ್ಲ ಎನ್ನುತ್ತಿದ್ದಾರೆ.
ಅರೆ ಚಿತ್ರದ ಭರ್ಜರಿಯಾಗಿ ಓಪನಿಂಗ್ ಪಡೆದುಕೊಂಡಿದೆ ಈ ವಿಚಾರ ಕೇಳಿ ಖುಷಿ ಪಡಬೇಕಾದ ಅಭಿಮಾನಿಗಳು ಬೇಸರ ಯಾಕೆ ಮಾಡಿಕೊಳ್ಳುತ್ತಾರೆ? ಅನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡಿರಬೇಕು? ಅದಕ್ಕೆ ಉತ್ತರ ಇಲ್ಲಿದೆ ಮುಂದೆ ಓದಿ

ಸೂರಿ ಮೇಲೆ ಅಭಿಮಾನಿಗಳ ಬೇಸರ
ಟಗರು ಸಿನಿಮಾ ನೋಡಿದ ಅಭಿಮಾನಿಗಳು ನಿರ್ದೇಶಕ ಸೂರಿ ಮೇಲೆ ಕೋಪಗೊಂಡಿದ್ದಾರೆ. ಚಿತ್ರದ ಸಂಭಾಷಣೆಯಲ್ಲಿ ತಪ್ಪಾಗಿದೆ ಎನ್ನುವ ಅಭಿಪ್ರಾಯವನ್ನ ಫೇಸ್ ಬುಕ್ ನಲ್ಲಿ ವ್ಯಕ್ತ ಪಡಿಸುತ್ತಿದ್ದಾರೆ.

ಸಂಭಾಷಣೆ ಮ್ಯೂಟ್ ಮಾಡಿಲ್ಲ
ಟಗರು ಸಿನಿಮಾದಲ್ಲಿ ಶಿವಣ್ಣನ ಪಾತ್ರಕ್ಕೆ ಖಳ ನಾಯಕರಾದ ಧನಂಜಯ ಹಾಗೂ ವಸಿಷ್ಠ ಅವ್ಯಾಚ ಪದಗಳಿಂದ ನಿಂದನೆ ಮಾಡುವ ದೃಶ್ಯಗಳಿದೆ. ಈ ದೃಶ್ಯಗಳಲ್ಲಿ ಬಳಸುವ ಪದಗಳಿಗೆ ಬಿಪ್ ಸೌಂಡ್ ಹಾಕಬಹುದಾಗಿತ್ತು ಎನ್ನುವುದು ಅಭಿಮಾನಿಗಳ ಅಭಿಪ್ರಾಯ.

ಫೇಸ್ ಬುಕ್ ನಲ್ಲಿ ಅಭಿಮಾನಿಗಳ ಆಕ್ರೋಶ
ನಿನ್ನೆಯಿಂದ ಸಿನಿಮಾ ನೋಡಿಕೊಂಡು ಬಂದ ಅಭಿಮಾನಿಗಳು ನಿರ್ದೇಶಕ ಸೂರಿ ಹಾಗೂ ಡಾಲಿ ಪಾತ್ರಗಳ ಹೆಸರನ್ನ ಹಾಕಿ ಸಿನಿಮಾದಲ್ಲಿರುವ ಸಂಭಾಷಣೆಯನ್ನೇ ಬಳಸಿ ಸ್ಟೇಟಸ್ ಪೋಸ್ಟ್ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ಶಿವಣ್ಣ ಪಾತ್ರವಷ್ಟೇ
ನಿರ್ದೇಶಕ ಹಾಗೂ ಚಿತ್ರತಂಡದ ಮೇಲೆ ಕೋಪಗೊಂಡಿರುವ ಅಭಿಮಾನಿಗಳು ಒಂದು ವಿಚಾರವನ್ನ ತಿಳಿದುಕೊಳ್ಳಬೇಕಾಗಿದೆ. ಟಗರು ಚಿತ್ರವನ್ನ ನಿರ್ಮಾಣ ಮಾಡಿರುವುದು ಶಿವಣ್ಣನ ಅಪ್ಪಟ ಅಭಿಮಾನಿ ಕೆ ಪಿ ಶ್ರೀಕಾಂತ್, ನಿರ್ದೇಶಕ ಸೂರಿ ಕೂಡ ಶಿವಣ್ಣನ ಅಭಿಮಾನಿ. ಇನ್ನೂ ಚಿತ್ರದಲ್ಲಿ ಟಗರು ಶಿವ ಪಾತ್ರ ಮಾತ್ರ ಆದ್ದರಿಂದ ಚಿತ್ರದಲ್ಲೇ ಡೈಲಾಗ್ ಹಾಗೆಯೇ ಇರಲಿ ಎಂದು ಒತ್ತಾಯ ಮಾಡಿರುವುದು ಶಿವರಾಜ್ ಕುಮಾರ್ ಅಂತೆ.


Click it and Unblock the Notifications











