ಶಿವರಾಜ್ ಕುಮಾರ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳಿಂದ ಪೂಜೆ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೆಚ್ಚಿನ ಚಿಕಿತ್ಸೆಗಾಗಿ ಲಂಡನ್ ಗೆ ತೆರಳಿದ್ದಾರೆ. ಬಲ ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಶಿವರಾಜ್ ಕುಮಾರ್ ಅವರಿಗೆ ಇಂದು ಸರ್ಜರಿ ಮಾಡಲಾಗಿದೆ. ಶಿವಣ್ಣ ಜೊತೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಕೂಡ ತೆರಳಿದ್ದಾರೆ. ಅಣ್ಣನನ್ನು ನೋಡಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡ ಲಂಡನ್ ತಲುಪಿದ್ದಾರೆ.
ಶಿವಣ್ಣ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಲಿ, ಬೇಗ ಗುಣಮುಖರಾಗಿ ವಾಪಸ್ ಬರಲಿ ಎಂದು ಅಭಿಮಾನಿಗಳು ಇಂದು ಹೋಮ ಹವನವನ್ನು ಮಾಡಿಸಿದ್ದಾರೆ. ಬೆಂಗಳುರಿನ ಗವಿ ಪುರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮತ್ತು ಮೃತ್ಯಂಜಯ ಹೋಮ ಮಾಡಿಸಿ ಶಿವಣ್ಣ ಅವರಿಗೆ ಉತ್ತಮ ಆರೋಗ್ಯ ಕರುಣಿಸುವಂತೆ ಅಭಿಮಾನಿಗಳು ಬೇಡಿಕೊಂಡಿದ್ದಾರೆ.

ಇನ್ನು ಈ ವಿಶೇಷ ಪೂಜೆಯಲ್ಲಿ ಅಭಿಮಾನಿಗಳ ಜೊತೆ ನಟ ರಾಘವೇಂದ್ರ ರಾಜ್ ಕುಮಾರ್ ಮತ್ತು ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡ ಭಾಗಿಯಾಗಿ ಶಿವಣ್ಣ ಬೇಗ ಗುಣಮುಖರಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಶಿವಣ್ಣ ಲಂಡನ್ ತಲುಪಿದಾಗಿನಿಂದ ಶಿವಣ್ಣ ಅವರ ಫೋಟೋಗಳು ಮತ್ತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಅಂದ್ಹಾಗೆ ಶಿವಣ್ಣ ಅವರಿಗೆ ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ಎಸ್ ಎಂ ಕೃಷ್ಣ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರೆ ಶಿವಣ್ಣ ಅವರಿಗೂ ಚಿಕಿತ್ಸೆ ನೀಡುತ್ತಿದ್ದಾರೆ. ಸರ್ಜರಿ ಬಳಿಕ ಶಿವಣ್ಣ 20 ದಿನಗಳ ಕಾಲ ಲಂಡನ್ ನಲ್ಲಿಯೆ ವಿಶ್ರಾಂತಿ ಪಡೆಯಲಿದ್ದಾರೆ. ನಂತರ ವಾಪಾಸ್ ಆದ ಬಳಿಕ ಸೆಪ್ಟಂಬರ್ ವರೆಗೂ ಶಿವಣ್ಣ ಚಿತ್ರೀಕರಣದಲ್ಲಿ ಭಾಗಿಯಾಗುವುದಿಲ್ಲ.


Click it and Unblock the Notifications











