»   » ಶಿವಣ್ಣನ ಮುಡಿಗೆ ಹೊಸ ಬಿರುದು

ಶಿವಣ್ಣನ ಮುಡಿಗೆ ಹೊಸ ಬಿರುದು

Posted By:
Subscribe to Filmibeat Kannada
ಶಿವಣ್ಣ ಈಗ ಕೇವಲ ಹ್ಯಾಟ್ರಿಕ್ ಹೀರೋ ಅಲ್ಲ | FIlmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಲೀಸ್ಟ್ ಸೇರುತ್ತಿದೆ. ಪ್ರತಿ ವರ್ಷದ ಆರಂಭದಲ್ಲಿ ಓಪನಿಂಗ್ ಹಿಟ್ ಸಿನಿಮಾಗಳು ಶಿವಣ್ಣನ ಅಕೌಂಟ್ ನಲ್ಲಿ ಇರುತ್ತೆ ಎನ್ನುವುದು ಖುಷಿಯ ವಿಚಾರ. ಶಿವರಾಜ್ ಕುಮಾರ್ ಅಭಿಮಾನಿಗಳು ಕೇವಲ ಜಿಲ್ಲೆ ಹಾಗೂ ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ.

ಹೊರ ದೇಶಗಳಲ್ಲೂ ಮುತ್ತಣ್ಣನ ಅಭಿಮಾನಿಗಳು ಸಾಕಷ್ಟು ಜನರಿದ್ದಾರೆ. ಸದ್ಯ ಟಗರು ಸಿನಿಮಾ ಸಂಭ್ರಮದಲ್ಲಿರುವ ಶಿವರಾಜ್ ಕುಮಾರ್ ವಿದೇಶದಲ್ಲಿರುವ ಭಾರತೀಯರ ಜೊತೆ ಚಿತ್ರ ನೋಡಲು ಪ್ರಯಾಣ ಬೆಳಸಿದ್ದಾರೆ. ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ಧನಂಜಯ ಹಾಗೂ ನಿರ್ಮಾಪಕ ಕೆ ಪಿ ಶ್ರೀಕಾಂತ್ ಮಸ್ಕಟ್ ನಲ್ಲಿ ಅಲ್ಲಿಯ ಅಭಿಮಾನಿಗಳ ಜೊತೆ ಚಿತ್ರ ನೋಡಿದ್ದಾರೆ.

Shivaraj Kumar has been honored with a Global Star

ರಿಯಾಯಿತಿ ದರದಲ್ಲಿ ಟಗರು ಸಿನಿಮಾ ಪ್ರದರ್ಶನ

ಸಿನಿಮಾ ಪ್ರದರ್ಶನದ ನಂತರ ಅಲ್ಲಿಯ ಭಾರತೀಯರು ಹ್ಯಾಟ್ರಿಕ್ ಹೀರೋಗೆ ಹೊಸ ಬಿರುದು ನೀಡಿದ್ದಾರೆ. ಗ್ಲೂಬಲ್ ಸ್ಟಾರ್ ಎಂದು ಬಿರುದು ನೀಡಿ ಸನ್ಮಾನಿಸಿದ್ದಾರೆ. ಶಿವರಾಜ್ ಕುಮಾರ್ ಅವರಿಗೆ ಸೌದಿ ಹಾಗೂ ಮಸ್ಕಟ್ ನಲ್ಲಿ ಅತೀ ಹೆಚ್ಚು ಅಭಿಮಾನಿಗಳಿದ್ದಾರೆ.

Shivaraj Kumar has been honored with a Global Star

ಶಿವಣ್ಣ ಅಭಿನಯದ ಬಹುತೇಕ ಚಿತ್ರಗಳು ಅಲ್ಲಿ ಬಿಡುಗಡೆ ಆಗುತ್ತವೆ. ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್ ಕೂಡ ಸಾಕಷ್ಟು ಬಾರಿ ವಿದೇಶಲಕ್ಕೆ ಭೇಟಿ ನೀಡಿ ಅಲ್ಲಿಯ ಜನರ ಜೊತೆಯಲ್ಲಿ ಸಿನಿಮಾ ನೋಡಿ ಅಭಿಪ್ರಾಯವನ್ನ ಪಡೆದುಕೊಳ್ಳುತ್ತಾರೆ. ಈಗಾಗಲೇ ಸಾಕಷ್ಟು ಬಿರುದುಗಳನ್ನ ಪಡೆದುಕೊಂಡಿರುವ ಶಿವಣ್ಣನ ಹೆಸರಿನ ಹಿಂದೆ ಮತ್ತೊಂದು ಬಿರುದು ಸೇರಿಕೊಂಡಿರುವುದು ಅಭಿಮಾನಿಗಳಿಗೆ ಹಾಗೂ ಚಿತ್ರರಂಗದವರಿಗೆ ಖುಷಿಯನ್ನು ಉಂಟು ಮಾಡಿದೆ.

'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದಲ್ಲಿ ರವಿಶಂಕರ್, ಪ್ರೇಮ್

English summary
Kannada actor Shivaraj Kumar has been honored with a Global Star. Muscat Kannadigas has given This Award to Shivaraj Kumar

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X