»   » ಗೋವಾ ಬೀಚ್ ನಲ್ಲಿ ಶಿವಣ್ಣನ ಬೆಚ್ಚಿ ಬೀಳಿಸುವ ಸಾಹಸ

ಗೋವಾ ಬೀಚ್ ನಲ್ಲಿ ಶಿವಣ್ಣನ ಬೆಚ್ಚಿ ಬೀಳಿಸುವ ಸಾಹಸ

Posted By:
Subscribe to Filmibeat Kannada
ಗೋವಾ ಬೀಚ್ ನಲ್ಲಿ ಶಿವಣ್ಣನ ಬೆಚ್ಚಿ ಬೀಳಿಸುವ ಸಾಹಸ | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ 55ನೇ ವಯಸ್ಸಿನಲ್ಲೂ ಇಂದಿಗೂ ಚಿರಯುವಕನಂತಿರುವ ನಟ. ಅಭಿನಯದಲ್ಲಾಗಲಿ, ನೃತ್ಯದಲ್ಲಾಗಲಿ ಶಿವರಾಜ್ ಕುಮಾರ್ ರನ್ನ ಮೀರಿಸುವವರಿಲ್ಲ ಅನ್ನೋದು ಅಭಿಮಾನಿಗಳು ಮತ್ತು ಇಡೀ ಸಿನಿಮಾರಂಗದವರು ಹೇಳುವ ಮಾತು.

ತಮ್ಮ 55ನೇ ವಯಸ್ಸಿನಲ್ಲೂ ಶಿವರಾಜ್ ಕುಮಾರ್ ತಮ್ಮನ್ನ ತಾವು ಹೊಸ ಹೊಸ ಎಕ್ಸ್‌ಪೆರಿಮೆಂಟ್ ಗಳಲ್ಲಿ ತೊಡಗಿಸಿಕೊಳ್ಳುತ್ತಿರುತ್ತಾರೆ ಅನ್ನೋದಕ್ಕೆ ಒಂದು ಉತ್ತಮ ಉದಾಹರಣೆ ಸಿಕ್ಕಿದೆ. ಇಂದು (ಡಿ 19) ಗೋವಾದಲ್ಲಿರುವ ಶಿವರಾಜ್ ಕುಮಾರ್ ಪ್ಯಾರಾಸೈಲಿಂಗ್ ಮಾಡಿದ್ದಾರೆ. ಸಾಮಾನ್ಯವಾಗಿ ಯುವಕರೇ ಭಯ ಬೀಳುವ ಈ ಸಾಹಸವನ್ನ ಶಿವಣ್ಣ ಮಾಡಿದ್ದಾರೆ.

Shivaraj Kumar has done a Parasailing in Goa

ಸುಮಾರು 2-30 ನಿಮಿಷಗಳ ಕಾಲ ಸಮುದ್ರ ಮೇಲ್ಭಾಗದಲ್ಲಿ ಪ್ಯಾರಾಸೈಲಿಂಗ್ ಮಾಡಿ ಎಂಜಾಯ್ ಮಾಡಿದ್ದಾರೆ. ಸಿನಿಮಾಗಳಲ್ಲಿಯೂ ಡ್ಯೂಪ್ ಬಳಸದೇ ಸಾಹಸ ಮಾಡುವ ಶಿವರಾಜ್ ಕುಮಾರ್ ನಿಜ ಜೀವನದಲ್ಲಿಯೂ ಲೈಫ್ ನ ಚೆನ್ನಾಗಿ ಎಂಜಾಯ್ ಮಾಡುತ್ತಾರೆ ಅನ್ನೋದಕ್ಕೆ ಇದೊಂದು ಉತ್ತಮ ನಿದರ್ಶನ.

Shivaraj Kumar has done a Parasailing in Goa

ಡಿಸೆಂಬರ್ 23ರಂದು ಶಿವರಾಜ್ ಕುಮಾರ್ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ಟಗರು' ಚಿತ್ರದ ಆಡಿಯೋ ರಿಲೀಸ್ ಆಗಲಿದೆ. ಕೆ.ಪಿ ಶ್ರೀಕಾಂತ್ ಸಿನಿಮಾವನ್ನ ನಿರ್ಮಾಣ ಮಾಡಿದ್ದು 'ಜಾಕಿ' ಭಾವನಾ ಹಾಗೂ ಮಾನ್ವಿತಾ ಹರೀಶ್ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರೀಕರಣದಲ್ಲಿ ಸಣ್ಣ ಬ್ರೇಕ್ ಇರುವ ಕಾರಣದಿಂದ ಶಿವಣ್ಣ ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಗೋವಾದಲ್ಲಿ ಕೆಲ ದಿನಗಳ ಕಾಲ ಪ್ರವಾಸದಲ್ಲಿದ್ದಾರೆ.

English summary
Kannada actor Shivaraj Kumar has done a Parasailing today (december 19) in Goa, 2.5 minute shivaraj kumar done Para Sailing with producer kp srikanth.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X