ಈ ಸಿನಿಮಾ ಟೈಟಲ್ ಹೇಳಲು ಶಿವಣ್ಣನಿಗೆ ಭಯವಂತೆ
Recommended Video

"ಹೇ ಜಲೀಲಾ..ಕನ್ವರ್ ಲಾಲ" ಸದ್ಯ ಎಲ್ಲರ ಮೊಬೈಲ್ ನಲ್ಲಿ ಕೇಳಿ ಬರುತ್ತಿರುವ ಹಾಡು ಇದು. 'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾದ ಈ ಹಾಡು ಎಲ್ಲರಿಗೂ ತುಂಬಾ ಇಷ್ಟವಾಗಿದೆ. ಚಿತ್ರದ ಲಿರಿಕ್ಸ್ ಮತ್ತು ಟ್ಯೂನ್ ಗೆ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಇತ್ತೀಚಿಗಷ್ಟೆ ಸಿನಿಮಾದ ನಿರ್ದೇಶಕ ಗುರುದತ್ತ್ ಹಾಗೂ ನಿರ್ಮಾಪಕ ಜಾಕ್ ಮಂಜು ಶಿವರಾಜ್ ಕುಮಾರ್ ಅವರಿಗೆ ಹಾಡನ್ನು ತೋರಿಸಿದ್ದಾರೆ. ನಂತರ ಶಿವಣ್ಣನ ಅಭಿಪ್ರಾಯವನ್ನು ಪಡೆದುಕೊಂಡಿದ್ದಾರೆ. ಹಾಡನ್ನು ಮೆಚ್ಚಿಕೊಂಡ ಶಿವಣ್ಣ ಸಿನಿಮಾ ಟೈಟಲ್ ಮಾತ್ರ ಹೇಳುವುದಿಲ್ಲ ಎಂದಿದ್ದಾರೆ.

ಯಾಕಂದ್ರೆ ಅಂಬಿ ಮಾಮನಿಗೆ ವಯಸ್ಸು ಆಗಲ್ಲ. ಅವರು ಎಂದೆಂದಿಗೂ ಯಂಗ್ ಆಗಿಯೇ ಇರಬೇಕು. ಈ ಟೈಟಲ್ ಹೇಳುವುದಕ್ಕೆ ಭಯ ಆಗುತ್ತೆ ಎಂದಿದ್ದಾರೆ. ಅದರ ಜೊತೆಯಲ್ಲಿ ಹಾಡಿಗೆ ಹಾಕಿರುವ ಟ್ಯೂನ್ಸ್ ತುಂಬಾ ಚೆನ್ನಾಗಿದೆ ಎಂದಿದ್ದಾರೆ.

'ಅಂಬಿ ನಿಂಗ್ ವಯಸ್ಸಾಯ್ತೋ' ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಆಗಿ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನು ಪೂರ್ತಿ ಮಾಡಿದ್ದಾರೆ. ಸದ್ಯ ಒಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುತ್ತಿರುವ ನಿರ್ದೇಶಕರು ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಸಿದ್ದತೆಗಳನ್ನು ಮಾಡುತ್ತಿದ್ದಾರೆ.


Click it and Unblock the Notifications











