»   » ನಟ ಶಿವರಾಜ್ ಕುಮಾರ್ ಈ ವರ್ಷ ಹುಟ್ಟುಹಬ್ಬ ಆಚರಿಸುತ್ತಿಲ್ಲ

ನಟ ಶಿವರಾಜ್ ಕುಮಾರ್ ಈ ವರ್ಷ ಹುಟ್ಟುಹಬ್ಬ ಆಚರಿಸುತ್ತಿಲ್ಲ

Posted By:
Subscribe to Filmibeat Kannada

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ತಮ್ಮ ಈ ವರ್ಷದ ಹುಟ್ಟುಹಬ್ಬವನ್ನು ಆಚರಿಸದಿರಲು ನಿರ್ಧಾರ ಮಾಡಿದ್ದಾರೆ. ಪಾರ್ವತಮ್ಮ ರಾಜ್ ಕುಮಾರ್ ಅವರ ನಿಧನದ ಹಿನ್ನಲೆಯಲ್ಲಿ ಶಿವಣ್ಣ ಹುಟ್ಟುಹಬ್ಬವನ್ನು ನಿರಾಕರಿಸಿದ್ದಾರೆ.

'ಲೀಡರ್' ಆಡಿಯೋ ಕಾರ್ಯಕ್ರಮದಲ್ಲಿ ಕನ್ನಡ ಅಭಿಮಾನ ಮೆರೆದ ಬಾಲಯ್ಯ

ಇದೇ ಜುಲೈ 12ಕ್ಕೆ ಶಿವಣ್ಣ 55ನೇ ವಸಂತಕ್ಕೆ ಕಾಲಿಡಲಿದ್ದಾರೆ. ಇನ್ನೂ ಶಿವಣ್ಣ ಹುಟ್ಟುಹಬ್ಬದ ಹಣವನ್ನು ಈಗಾಗಲೇ 'ಟಗರು' ಚಿತ್ರತಂಡ ದೇಣಿಗೆಯಾಗಿ ನೀಡಿದೆ. ರಾಜ್ಯ ಸಶಸ್ತ್ರ ಮೀಸಲು ಪಡೆ ಪೊಲೀಸ್ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಲಾಗಿದೆ.

ಸೈಮಾ ಪ್ರಶಸ್ತಿ ಕಾರ್ಯಕ್ರಮದಲ್ಲಿ ತಾಯಿಯನ್ನು ನೆನೆದ ಶಿವಣ್ಣ

Shivaraj Kumar is Not Celebrating This Year's Birthday

'ಟಗರು' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಿದ್ದು, ಅದೇ ಕಾರಣದಿಂದ ಪೊಲೀಸ್ ಪರಿಹಾರ ನಿಧಿಗೆ ಹಣ ನೀಡಿದ್ದಾರೆ. ಇದೇ ವೇಳೆ 'ಟಗರು' ಚಿತ್ರದ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್ ಹಾಜರಾಗಿದ್ದರು.

English summary
Actor Shivaraj Kumar is Not Celebrating This Year's Birthday.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada