twitter
    For Quick Alerts
    ALLOW NOTIFICATIONS  
    For Daily Alerts

    ಪೊಲೀಸರ ಮೇಲೆ ಹಲ್ಲೆ: ಬೇಸರ ವ್ಯಕ್ತಪಡಿಸಿದ ನಟ ಶಿವರಾಜ್ ಕುಮಾರ್

    |

    ಕೊರೊನಾ ನಿಯಂತ್ರಣಕ್ಕಾಗಿ ಬಂದೋಬಸ್ತ್ ಮಾಡಿ ಜನರನ್ನು ಕಾಯುತ್ತಿದ್ದ ಕರ್ತವ್ಯ ನಿರತ ಪೊಲೀಸರ ಮೇಲೆ ಕೆಲ ಕಿಡಿಗೇಡಿಗಳು ಹಲ್ಲೆ ಮಾಡಿ ದುರ್ವರ್ತನೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಗಿಳಿದು ಬೈಕ್ ನಲ್ಲಿ ಅಡ್ಡಾಡುತ್ತಿದ್ದ ಯುವಕರ ಗುಂಪನ್ನು ತಡೆಯಲು ಹೋದ ಪೊಲೀಸರ ಮೇಲೆಯೇ ಯುವಕರು ನಡೆಸಿದ ಹಲ್ಲೆಯನ್ನು ಅನೇಕರು ಖಂಡಿಸಿದ್ದಾರೆ.

    Recommended Video

    ಶಿವಣ್ಣ ದಯವಿಟ್ಟು ಹೀಗೆ ಮಾಡ್ಬೇಡಿ ಅಂದಿದ್ದೇಕೆ | Shivanna | Stay Home stay Safe | Filmibeat kannada

    ಈ ಬಗ್ಗೆ ನಟ ಶಿವರಾಜ್ ಕುಮಾರ್ ಸಹ ಪ್ರತಿಕ್ರಿಯಿಸಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮೇಲೆ ಕೈಮಾಡುವುದು ತುಂಬ ತಪ್ಪು, ಅವರು ನಮಗೋಸ್ಕರ ಕಷ್ಟಪಟ್ಟು ಸೇವೆ ಮಾಡುತ್ತಿದ್ದಾರೆ. ನೀವು ಸಹಕರಿಸಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.

    ಈ ಬಗ್ಗೆ ಒಂದು ವಿಡಿಯೋ ಮಾಡಿ ಶಿವಣ್ಣ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. "ಪೊಲೀಸರ ಮೇಲೆ ಕೈ ಮಾಡಿದ್ದು ತುಂಬನೆ ತಪ್ಪು. ಅವರು ಯಾರಿಗೋಸ್ಕರ ಮಾಡುತ್ತಿದ್ದಾರೆ, ನಮಗೋಸ್ಕರ ಕೆಲಸ ಮಾಡುತ್ತಿದ್ದಾರೆ. ಪರಿಸ್ಥಿತಿಗೋಸ್ಕರ ಹೀಗೆ ಮಾಡುತ್ತಿದ್ದಾರೆ. ನೀವು ಸಹಕರಿಸಬೇಕು. ಮನೆಯಲ್ಲಿಯೆ ಇದ್ದರೆ ಹೀಗೆ ಆಗಲ್ಲ. ಈ ಸಮಯದಲ್ಲಿ ಎಲ್ಲರಿಗೂ ತೊಂದರೆ ಇದೆ. ಹೀಗೆ ಮಾಡಿದರೆ ನಿಮ್ಮ ಫ್ಯಾಮಿಲಿಗೆ ಎಷ್ಟು ಕಷ್ಟ ಆಗುತ್ತೆ. ಅವರನ್ನು ಬಿಟ್ಟು ಹೊರಗೆ ಹೋಗುತ್ತೀರಾ, ಅವರಿಗೆ ಎಷ್ಟು ಕಷ್ಟ ಆಗುತ್ತೆ. ಹಾಗೆ ಪೊಲೀಸರಿಗೂ ಫ್ಯಾಮಿಲಿ ಇದೆ. ಅವರಿಗೂ ತುಂಬ ಕಷ್ಟ ಆಗುತ್ತೆ. ಇದನ್ನ ನೋಡಿ ನನಗೆ ತುಂಬ ಬೇಸರವಾಯಿತು" ಎಂದು ಹೇಳಿದ್ದಾರೆ.

    Shivaraj Kumar React About Group Attacked To Police

    ಇನ್ನು "ಸೈನಿಕ ಸಿ.ಆರ್ ಚಂದ್ರಶೇಖರ್ ಹೇಳುತ್ತಾರೆ. ಕಷ್ಟಪಟ್ಟು ನಾವು ಗಡಿ ಕಾಪಾಡುತ್ತೇವೆ. ನೀವು ಯಾಕೆ ದೇಶ ಉಳಿಸಿಕೊಳ್ಳಲು ಸಹಕಾರ ಮಾಡುತ್ತಿಲ್ಲ. ಎಂದು ಹೇಳುತ್ತಾರೆ. ಹಾಗೆ ನಾವು ಹೇಳಿಸಿಕೊಳ್ಳಬಾರದು. ನಮಗೋಸ್ಕರ ಅವರು ಅವರಿಗೋಸ್ಕರ ನಾವು ಎನ್ನುವ ಭಾವನೆ ಇರಬೇಕು. ದೇಶಕ್ಕಾಗಿ ನಾವು, ನಮಗಾಗಿ ದೇಶ. ದೇಶಗೋಸ್ಕರ್ ಏನು ಮಾಡುತ್ತೇವೆ ನಾವು. ಈ ರೀತಿಯ ತೊಂದರೆ ಬಂದರೆ ನಾವೆಲ್ಲರೂ ಸೇರಿ ಹೋರಾಡಬೇಕು" ಎಂದು ಶಿವಣ್ಣ ಹೇಳಿದ್ದಾರೆ.

    ಇನ್ನು ಶಿವಣ್ಣ ಈ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಸಹ ಬೆಂಬಲಿಸಿ, ಪೋಲೀಸರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ್ದಾರೆ. ಏಪ್ರಿಲ್ ೧೪ರ ವರೆಗೂ ಸಂಪೂರ್ಣ ಇಂಡಿಯಾ ಲಾಕ್ ಡೌನ್ ಆಗಿದ್ದು, ದೇಶದ ಜನತೆ ಸಹಕರಿಸಬೇಕೆಂದು ಅನೇಕ ಸಿನಿಮಾ ಸೆಲೆಬ್ರೆಟಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

    English summary
    Kannada Actor Shivaraj Kumar upset about group attacked to police.
    Thursday, March 26, 2020, 14:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X