For Quick Alerts
  ALLOW NOTIFICATIONS  
  For Daily Alerts

  ಸುಪ್ರೀಂ ಹೀರೋ ಶಶಿ ಕುಮಾರ್ ಪುತ್ರನಿಗೆ ಸಾಥ್ ನೀಡಿದ ಶಿವರಾಜ್ ಕುಮಾರ್

  |

  ಸುಪ್ರೀಂ ಹೀರೋ ಶಶಿ ಕುಮಾರ್ ಪುತ್ರ ಅಕ್ಷಿತ್ 'ಸೀತಾಯಣ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಸೀತಾಯಣ ಸಿನಿಮಾದ ಚಿತ್ರೀಕರಣ ಮುಗಿಸಿರುವ ಅಕ್ಷಿತ್ ಅಭಿಮಾನಿಗಳ ಮುಂದೆ ಬರಲು ಕಾಯುತ್ತಿದ್ದಾರೆ.

  ಅಂದಹಾಗೆ ಅಕ್ಷಿತ್ ಅಭಿನಯದ ಚೊಚ್ಚಲ ಸಿನಿಮಾ 'ಸೀತಾಯಣ'ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಾಥ್ ನೀಡಿದ್ದಾರೆ. ಹೌದು, ಅಕ್ಷಿತ್ ಅಭಿನಯದ ಮೊದಲ ಸಿನಿಮಾದ ಟೀಸರ್ ಅನ್ನು ಶಿವಣ್ಣ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

  ಶ್ರೀಯಾ ಶರಣ್ ನಟನೆಯ 'ಗಮನಂ' ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್ಶ್ರೀಯಾ ಶರಣ್ ನಟನೆಯ 'ಗಮನಂ' ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

  ಟೀಸರ್ ರಿಲೀಸ್ ಸಮಯದಲ್ಲಿ ಶಶಿ ಕುಮಾರ್ ಮತ್ತು ಪುತ್ರ ಅಕ್ಷಿತ್ ಸೇರಿದಂತೆ ಚಿತ್ರತಂಡ ಹಾಜರಿತ್ತು. ವಿಶೇಷ ಎಂದರೆ ಸಿನಿಮಾ ಮೂರು ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಚೊಚ್ಚಲ ಸಿನಿಮಾದಲ್ಲೇ ಅಕ್ಷಿತ್ ಏಕಕಾಲಕ್ಕೆ ಮೂರು ಭಾಷೆಯಲ್ಲಿ ಲಾಂಚ್ ಆಗುತ್ತಿರುವುದು ವಿಶೇಷ.

  ಟೀಸರ್ ರಿಲೀಸ್ ಮಾಡಿ ಮಾತನಾಡಿದ ಶಿವಣ್ಣ, 'ಶಶಿಕುಮಾರ್ ನನಗೆ ಸೋದರ ಸಮಾನ. ಅವರ ಮಗ ಮೂರು ಭಾಷೆಯಲ್ಲಿ ಏಕಕಾಲಕ್ಕೆ ಹೀರೋ ಆಗಿ ಪರಿಚಯವಾಗುತ್ತಿರುವುದು ನಿಜವಾಗಿಯೂ ಗೌರವ ಪಡುವಂತ ವಿಷಯ. ಚಿತ್ರದ ಟೀಸರ್ ನನ್ನ ಕೈಯಿಂದ ರಿಲೀಸ್ ಆಗುತ್ತಿರುವುದು ಸಂತಸವಾಗುತ್ತಿದೆ. ಟೀಸರ್ ಪ್ರೋಮಿಸಿಂಗ್ ಆಗಿದೆ, ಸಿನಿಮಾ ಕಂಡಿತ ಹಿಟ್ ಆಗುತ್ತೆ' ಎಂದು ಹೇಳಿದ್ದಾರೆ.

  ಕನ್ನಡ, ತಮಿಳು ಮತ್ತು ತೆಲುಗು ಮೂರು ಭಾಷೆಯಲ್ಲೂ ಸಿನಿಮಾ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ಸೀತಾಯಣ ಚಿತ್ರಕ್ಕೆ ಪ್ರಭಾಕರ್ ಆರಿಪಾಕ್ ಆಕ್ಷನ್ ಕಟ್ ಹೇಳಿದ್ದಾರೆ. ಲಲಿತಾ ರಾಜ್ಯಲಕ್ಷ್ಮೀ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚಿತ್ರದಲ್ಲಿ ಅಕ್ಷತ್ ಗೆ ಜೋಡಿಯಾಗಿ ಅನಾಹಿತ್ ಭೂಷಣ್ ಕಾಣಿಸಿಕೊಂಡಿದ್ದಾರೆ.

  ಲೇಡಿ ಸೂಪರ್ ಸ್ಟಾರ್ ಆದ್ರೂ Priyanka Upendra | Kaimara | Filmibeat Kannada

  ಉಳಿದಂತೆ ಚಿತ್ರದಲ್ಲಿ ಅಜೇಯ್ ಘೋಷ್, ಕಾಮಿಡಿ ಕಿಲಾಡಿ ಖ್ಯಾತಿಯ ಹಿತೇಶ್, ಮಧು ಸುಧನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸದ್ಯ ಟೀಸರ್ ಮೂಲಕ ಅಭಿಮಾನಿಗಳ ಮುಂದೆ ಬಂದಿರುವ ಸೀತಾಯಣ ಸದ್ಯದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ.

  English summary
  Shivaraj Kumar release Shashi Kumar son Akshith starrer Seethayana movie teaser.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X