For Quick Alerts
  ALLOW NOTIFICATIONS  
  For Daily Alerts

  ಶ್ರೀಯಾ ಶರಣ್ ನಟನೆಯ 'ಗಮನಂ' ಟ್ರೈಲರ್ ರಿಲೀಸ್ ಮಾಡಿದ ಶಿವರಾಜ್ ಕುಮಾರ್

  |

  ಶ್ರೀಯಾ ಶರಣ್ ಅಭಿನಯದ ಗಮನಂ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ಪ್ಯಾನ್ ಇಂಡಿಯಾ ಸಿನಿಮಾವಾಗಿ ತಯಾರಾಗಿರುವ ಈ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿನಿಮಾದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

  ನವೆಂಬರ್ 11ರಂದು ಗಮನಂ ಸಿನಿಮಾದ ಟ್ರೈಲರ್ ಐದು ಭಾಷೆಯ್ಲಲಿ ಬಿಡುಗಡೆಯಾಗಿದೆ. ಕುತೂಹಲ ಮೂಡಿಸಿರುವ ಗಮನಂ ಸಿನಿಮಾದ ಕನ್ನಡ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನೂ ಬೇರೆ ಬೇರೆ ಭಾಷೆಯಲ್ಲಿ ಆಯಾಯ ಭಾಷೆಯ ಸ್ಟಾರ್ ನಟರು ಟ್ರೈಲರ್ ರಿಲೀಸ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ..

  'ಗಮನಂ' ಚಿತ್ರದಲ್ಲಿ ಗಾಯಕಿಯಾದ ನಿತ್ಯಾ ಮೆನನ್'ಗಮನಂ' ಚಿತ್ರದಲ್ಲಿ ಗಾಯಕಿಯಾದ ನಿತ್ಯಾ ಮೆನನ್

  ಕನ್ನಡ ಟ್ರೈಲರ್ ರಿಲೀಸ್ ಮಾಡಿರುವ ಶಿವಣ್ಣ

  ಕನ್ನಡ ಟ್ರೈಲರ್ ರಿಲೀಸ್ ಮಾಡಿರುವ ಶಿವಣ್ಣ

  ಗಮನಂ ಸಿನಿಮಾದ ಕನ್ನಡ ಟ್ರೈಲರ್ ಅನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ರಿಲೀಸ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಟ್ರೈಲರ್ ಶೇರ್ ಮಾಡಿರುವ ಶಿವಣ್ಣ, 'ಗಮನಂ ಸಿನಿಮಾದ ಕನ್ನಡ ಟ್ರೈಲರ್ ಅನ್ನು ರಿಲೀಸ್ ಮಾಡಿರುವುದು ಸಂತಸ ತಂದಿದೆ. ಚಿತ್ರಕ್ಕೆ ಒಳ್ಳೆಯದಾಗಲಿ' ಎಂದು ಶುಭಹಾರೈಸಿದ್ದಾರೆ.

  ತಮಿಳಿನಲ್ಲಿ ಜಯಂ ರವಿ, ತೆಲುಗಿನಲ್ಲಿ ಪವನ್ ಕಲ್ಯಾಣ್

  ತಮಿಳಿನಲ್ಲಿ ಜಯಂ ರವಿ, ತೆಲುಗಿನಲ್ಲಿ ಪವನ್ ಕಲ್ಯಾಣ್

  ಉಳಿದಂತೆ ಬೇರೆ ಭಾಷೆಯಲ್ಲಿಯೂ ಸ್ಟಾರ್ ನಟರು ಟ್ರೈಲರ್ ರಿಲೀಸ್ ಮಾಡಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್, ತಮಿಳಿನಲ್ಲಿ ಜಯಂ ರವಿ, ಮಲಯಾಳಂ ನಲ್ಲಿ ಫಹಾದ್ ಫಾಸಿಲ್ ರಿಲೀಸ್ ಮಾಡಿದ್ರೆ, ಹಿಂದಿಯಲ್ಲಿ ಸೋನು ಸೂದ್ ಟ್ರೈಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

  ನಟಿ ಶ್ರೀಯಾ ಶರಣ್ ಬಿಕಿನಿ ಅಂಡರ್ ವಾಟರ್ ಫೋಟೋ ವೈರಲ್ನಟಿ ಶ್ರೀಯಾ ಶರಣ್ ಬಿಕಿನಿ ಅಂಡರ್ ವಾಟರ್ ಫೋಟೋ ವೈರಲ್

  ಗಮನ ಸೆಳೆಯುತ್ತಿದೆ ಗಮನಂ ಟ್ರೈಲರ್

  ಗಮನ ಸೆಳೆಯುತ್ತಿದೆ ಗಮನಂ ಟ್ರೈಲರ್

  ಅಂದಹಾಗೆ 'ಗಮನಂ'ನಲ್ಲಿ ಮೂರು ಕಥೆಗಳನ್ನು ಒಟ್ಟಿಗೆ ಸೇರಿಸಿ ಸಿನಿಮಾ ಮಾಡಲಾಗಿದೆ. ಕ್ರಿಕೆಟ್ ಆಟಗಾರನಾಗಬೇಕು ಎನ್ನುವ ಕನಸು ಕಾಣುವ ಯುವಕನ ಕಥೆ ಒಂದೆಡೆಯಾದರೆ, ಕೊಳಗೇರೆಯಲ್ಲಿ ಬದುಕುವ ಕಿವಿ ಕೇಳದ ತಾಯಿಯ ಕರುಣಾಜನಕ ಕಥೆ ಮತ್ತೊಂದೆಡೆ. ಈ ಎರಡು ಕಥೆಗಳ ಜೊತೆಗೆ ಸಾಗುವ ಇಬ್ಬರು ಅನಾಥ ಮಕ್ಕಳ ಕಥೆ, ಎಲ್ಲವನ್ನು ಗಮನಂ ಸಿನಿಮಾ ಮೂಲಕ ಕಟ್ಟಿಕೊಡಲಾಗಿದೆ.

  ಪ್ರಮುಖ ಪಾತ್ರದಲ್ಲಿ ಶ್ರೀಯಾ ಶರಣ್ ಅಭಿನಯ

  ಪ್ರಮುಖ ಪಾತ್ರದಲ್ಲಿ ಶ್ರೀಯಾ ಶರಣ್ ಅಭಿನಯ

  ಸದ್ಯ ರಿಲೀಸ್ ಆಗಿರುವ ಗಮನಂ ಟ್ರೈಲರ್ ಚಿತ್ರಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದಲ್ಲಿ ನಟಿ ಶ್ರಿಯಾ ಶರಣ್, ನಿತ್ಯಾ ಮೆನನ್, ಪ್ರಿಯಾಂಕಾ ಜವಾಲ್ಕರ್ ಹಿರಿಯ ನಟ ಚಾರು ಹಾಸನ್ ಸೇರಿದಂತೆ ಅನೇಕರು ನಟಿಸಿದ್ದಾರೆ.

  ಮನೆಯಲ್ಲೇ ಕುಳಿತು ಉಪೇಂದ್ರ, ಪ್ರಿಯಾಂಕಾ ರನ್ನು ನೆನೆಸಿಕೊಂಡ ಪ್ರಿಯಾಮಣಿ | Priyamani | Filmibeat Kannada
  ಸುಜನಾ ರಾವ್ ನಿರ್ದೇಶನ

  ಸುಜನಾ ರಾವ್ ನಿರ್ದೇಶನ

  ಗಮನಂ ಚಿತ್ರಕ್ಕೆ ಸುಜನಾ ರಾವ್ ಆಕ್ಷನ್ ಕಟ್ ಹೇಳಿದ್ದಾರೆ. ಫ್ಯಾಷನ್ ಡಿಸೈನಿಂಗ್ ಕಲಿತು, ಎಡಿಟಿಂಗ್ ಕೋರ್ಸ್ ಮಾಡಿರುವ ಸುಜನಾ ರಂಗಭೂಮಿಯಲ್ಲೂ ಕೆಲಸ ಮಾಡಿದ್ದಾರೆ. ಸಾಕಷ್ಟು ಜಾಹೀರಾತುಗಳನ್ನು ನಿರ್ದೇಶನ ಮಾಡಿರುವ ಸುಜನಾ ಗಮನಂ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಗಮನ ಸೆಳೆಯುತ್ತಿದ್ದಾರೆ. ಅಂದ್ಹಾಗೆ ಚಿತ್ರಕ್ಕೆ ಸಂಗೀತ ಮಾಂತ್ರಿಕ ಇಳಯರಾಜ ಸಂಗೀತ ಸಂಯೋಜನೆ ಮಾಡಿದ್ದಾರೆ.

  English summary
  Kannada Actor Shivaraj Kumar release Gamanam Kannada trailer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X