For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ ಮತ್ತು ಹರ್ಷ ಜೋಡಿಯ 4ನೇ ಸಿನಿಮಾಗೆ ಮುಹೂರ್ತ ಫಿಕ್ಸ್; ಟೈಟಲ್ ಇದೇನಾ?

  By ಫಿಲ್ಮ್ ಡೆಸ್ಕ್
  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸದ್ಯ ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಲಾಕ್ ಡೌನ್ ಬಳಿಕ ಸೆಂಚುರಿ ಸ್ಟಾರ್ ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಭಜರಂಗಿ-2 ಚಿತ್ರೀಕರಣ ಮುಗಿಯುತ್ತಿದ್ದಂತೆ ಶಿವಣ್ಣ ಶಿವಪ್ಪ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

  ಈ ನಡುವೆ ಶಿವಣ್ಣ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೌದು, ಶಿವಣ್ಣ ಮತ್ತೆ ನಿರ್ದೇಶಕ ಎ ಹರ್ಷ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ವಿಚಾರ ಈಗಾಗಲೇ ಎಲ್ಲರಿಗೂ ಗೊತ್ತಿದೆ. ವಿಶೇಷ ಎಂದರೆ ಶಿವಣ್ಣ ಮತ್ತು ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 4ನೇ ಸಿನಿಮಾ ಇದಾಗಿದೆ. ಸದ್ಯ ಭಜರಂಗಿ-2 ಮುಗಿಸಿರುವ ಈ ಜೋಡಿ ಆಗಲೇ ಮತ್ತೊಂದು ಸಿನಿಮಾಗೆ ಸಿದ್ಧತೆ ಮಾಡಿಕೊಂಡಿದೆ. ಮುಂದೆ ಓದಿ...

  'ಭಜರಂಗಿ-2' ನಂತರ ಹರ್ಷ ಜೊತೆ ಶಿವಣ್ಣನ ಹೊಸ ಚಿತ್ರ, ಟೈಟಲ್ ಫಿಕ್ಸ್'ಭಜರಂಗಿ-2' ನಂತರ ಹರ್ಷ ಜೊತೆ ಶಿವಣ್ಣನ ಹೊಸ ಚಿತ್ರ, ಟೈಟಲ್ ಫಿಕ್ಸ್

  ಸಂಕ್ರಾಂತಿಯಿಂದ ಚಿತ್ರೀಕರಣ ಪ್ರಾರಂಭ

  ಸಂಕ್ರಾಂತಿಯಿಂದ ಚಿತ್ರೀಕರಣ ಪ್ರಾರಂಭ

  ಭಜರಂಗಿ ಜೋಡಿಯ 4ನೇ ಸಿನಿಮಾ ಮುಂದಿನ ವರ್ಷ 2021 ಜನವರಿಂದ ಪ್ರಾರಂಭವಾಗಲಿದೆ. ಜನರಿಗೆ 14 ಅಥವಾ 15 ಸಂಕ್ರಾಂತಿಯಿಂದ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ ನ 4ನೇ ಸಿನಿಮಾದ ಮುಹೂರ್ತವನ್ನು ಸರಳವಾಗಿ ಮಾಡಿದ್ದಾರೆ. ಮುಂದಿನ ತಿಂಗಳು ಅಧಿಕೃತವಾಗಿ ಅನೌನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

  ಜೈಲು ಖೈದಿ ಉಡುಪಿನಲ್ಲಿ ಶಿವರಾಜ್ ಕುಮಾರ್: ಹೊಸ ಲುಕ್ ವೈರಲ್ಜೈಲು ಖೈದಿ ಉಡುಪಿನಲ್ಲಿ ಶಿವರಾಜ್ ಕುಮಾರ್: ಹೊಸ ಲುಕ್ ವೈರಲ್

  ಆಂಜನೇಯನ ಹೆಸರಿನಿಂದ ಹೊರಬಂದ ಹರ್ಷ

  ಆಂಜನೇಯನ ಹೆಸರಿನಿಂದ ಹೊರಬಂದ ಹರ್ಷ

  ಸಿನಿಮಾ ಚಿತ್ರೀಕರಣದ ನಡುವೆಯೂ ಶಿವಣ್ಣ ಇತ್ತೀಚಿಗೆ ಆಭರಣ ಜಾಹೀರಾತಿನ ಚಿತ್ರೀಕರಣದಲ್ಲೂ ಭಾಗಿಯಾಗಿದ್ದರು. ಹರ್ಷ ಮತ್ತು ಶಿವಣ್ಣ ಕಾಂಬಿನೇಷನ್ 4ನೇ ಸಿನಿಮಾದಲ್ಲಿ ಆಂಜನೇಯನ ಹೆಸರು ಇಲ್ಲ. ವಜ್ರಕಾಯ, ಭಜರಂಗಿ, ಭಜರಂಗಿ-2 ಎಂದು ಆಂಜನೇಯನ ಹಿಂದೆ ಹೊರಟಿದ್ದ ಹರ್ಷ ಈ ಬಾರಿ ಆಂಜನೇಯ ಹೆಸರು ಹೊರತು ಪಡಿಸಿ ಟೈಟಲ್ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

  ಚಿತ್ರದ ಶೀರ್ಷಿಕೆ ಮುತ್ತುರಾಯ?

  ಚಿತ್ರದ ಶೀರ್ಷಿಕೆ ಮುತ್ತುರಾಯ?

  ಮೂಲಗಳ ಪ್ರಕಾರ ಚಿತ್ರಕ್ಕೆ ಮುತ್ತುರಾಯ ಎನ್ನುವ ಹೆಸರು ಇಡಲಾಗಿದೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ವಾಗಿಲ್ಲ. ಮುತ್ತುರಾಯ ಟೈಟಲ್ ಜೊತೆಗೆ ಮತ್ತೊಂದ ಟೈಟಲ್ ಸಹ ಇದೆಯಂತೆ. ಈ ಶೀರ್ಷಿಕೆ ಸೂಕ್ತವೆನಿಸದೆ ಹೋದರೆ ಬೇರೆ ಟೈಟಲ್ ಬಳಸಲು ನಿರ್ಧರಿಸಿದ್ದಾರೆ.

  ಬಿರಿಯಾನಿ ವ್ಯಾಪಾರ ಶುರು ಮಾಡಿದ ನಟ ಚಂದನ್; ಸಾಥ್ ನೀಡಿದ ಶಿವಣ್ಣಬಿರಿಯಾನಿ ವ್ಯಾಪಾರ ಶುರು ಮಾಡಿದ ನಟ ಚಂದನ್; ಸಾಥ್ ನೀಡಿದ ಶಿವಣ್ಣ

  ಸಲಾರ್ ನಂತರ ಮತ್ತೊಂದು ಸಿನಿಮಾ ಘೋಷಣೆ ಮಾಡಲಿದೆ ಹೊಂಬಾಳೆ ಫಿಲಂಸ್ | Filmibeat Kannada
  125ನೇ ಸಿನಿಮಾ ಭೈರತಿ ರಣಗಲ್

  125ನೇ ಸಿನಿಮಾ ಭೈರತಿ ರಣಗಲ್

  ವಿಶೇಷ ಎಂದರೆ ಇದು ಶಿವಣ್ಣ ಅಭಿನಯದ 124ನೇ ಸಿನಿಮಾ. ಸಂಪೂರ್ಣ ವಿಭಿನ್ನವಾದ ಸಿನಿಮಾ ಇದಾಗಿರಲಿದೆಯಂತೆ. ಈ ಸಿನಿಮಾ ಬಳಿಕ ಶಿವಣ್ಣ 125ನೇ ಸಿನಿಮಾ ಭೈರತಿ ರಣಗಲ್ ಪ್ರಾರಂಭಿಸಲಿದ್ದಾರೆ ಎನ್ನುವ ಮಾಹಿತಿ ಕೇಳಿಬರುತ್ತಿದೆ. ಮಫ್ತಿ ಸಿನಿಮಾದ ಪಾತ್ರದ ಹೆಸರು ಇದಾಗಿದ್ದು, ಇದೇ ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ.

  English summary
  Kannada Actor Shivaraj Kumar’s next movie with director Harsha to start rolling from mid-January.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X