For Quick Alerts
  ALLOW NOTIFICATIONS  
  For Daily Alerts

  ಚಿಕಿತ್ಸೆ ಬಳಿಕ ಮತ್ತೆ ವರ್ಕೌಟ್ ನಲ್ಲಿ ಬ್ಯುಸಿಯಾದ ಶಿವರಾಜ್ ಕುಮಾರ್

  |
  Shivaraj Kumar hits the gym after a long break |Filmibeat kannada

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಫಿಟ್ ಅಂಡ್ ಸ್ಟ್ರಾಂಗ್ ಆಗಿರುವ ನಟ. 57ನೇ ವಯಸ್ಸಿನಲ್ಲಿಯೂ ಚಿರಯುವಕರಂತೆ ಕಂಗೊಳಿಸುವ ಶಿವಣ್ಣ ಫಿಟ್ ನೆಸ್ ಸೀಕ್ರೆಟ್ ಜಿಮ್ ಮತ್ತು ಯೋಗ. ಸೆಂಚುರಿ ಸ್ಟಾರ್ ಎನರ್ಜಿ, ಡ್ಯಾನ್ಸ್ ಗೆ ಫಿದಾ ಆಗದವರೆ ಇಲ್ಲ. ಪ್ರತಿ ಸಿನಿಮಾದಲ್ಲೂ ಯಂಗ್ ಅಂಡ್ ಎನರ್ಜಿಟಿಕ್ ಆಗಿ ಕಾಣಿಸಿಕೊಳ್ಳುವ ಶಿವಣ್ಣ ಶಸ್ತ್ರ ಚಿಕಿತ್ಸೆ ನಂತರ ವರ್ಕೌಟ್ ಗೆ ಕೊಂಚ ಬ್ರೇಕ್ ಹಾಕಿದ್ದರು.

  ಈಗ ಮತ್ತೆ ಜಿಮ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಲಗು ವರ್ಕೌಟ್ ಮಾಡುತ್ತಿರುವ ಶಿವಣ್ಣ ಒಂದಿಷ್ಟು ಫೋಟೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಶಿವಣ್ಣ ಜಿಮ್ ಜೊತೆಗೆ ಯೋಗ ಕೂಡ ಮಾಡುತ್ತಿದ್ದಾರೆ. ವರ್ಕೌಟ್ ಮಾಡುವ ಫೋಟೋ ಶೇರ್ ಮಾಡಿ, "ಮಾನಸಿಕವಾಗಿ ಮತ್ತು ದೈಹಿಕವಾಗಿ ಫಿಟ್ ಮತ್ತು ಸ್ಟ್ರಾಂಗ್ ಆಗಿರಿ"ಎಂದು ಬರೆದುಕೊಂಡಿದ್ದಾರೆ.

  ಅಭಿಮಾನಿಗಳಿಗೆ ಕ್ಷಮೆ ಕೇಳಿದ ಶಿವರಾಜ್ ಕುಮಾರ್ಅಭಿಮಾನಿಗಳಿಗೆ ಕ್ಷಮೆ ಕೇಳಿದ ಶಿವರಾಜ್ ಕುಮಾರ್

  ಶಿವಣ್ಣ ಸದ್ಯ ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಹರ್ಷ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಭಜರಂಗಿ-2 ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿ ಸದ್ಯ ಬೆಂಗಳೂರಿನ ಅರಮನೆ ಮೈದಾನದಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಹರ್ಷ ಮತ್ತು ಶಿವಣ್ಣ ಕಾಂಬಿನೇಶನ್ ನ ಭಜರಂಗಿ ಸೂಪರ್ ಹಿಟ್ ಆಗಿತ್ತು. ಹಾಗಾಗಿ ಭಜರಂಗಿ-2 ಚಿತ್ರದ ಮೇಲಿನ ನಿರೀಕ್ಷೆ ಕೂಡ ಹೆಚ್ಚಾಗಿದೆ.

  ಭಜರಂಗಿ-2 ಚಿತ್ರದಿಂದ ಫಸ್ಟ್ ಪೋಸ್ಟರ್ ರಿಲೀಸ್ ಮಾಡಿದ್ದು ಬಿಟ್ಟರೆ ಚಿತ್ರದಿಂದ ಯಾವುದೆ ಮಾಹಿತಿ ಬಹಿರಂಗವಾಗಿಲ್ಲ. ಚಿತ್ರದಲ್ಲಿ ಶಿವಣ್ಣ ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೇರ್ ಸ್ಟೈಲ್, ಕಾಸ್ಟ್ಯೂಮ್ ಎಲ್ಲಾ ವಿಭಿನ್ನವಾಗಿರಲಿದೆಯಂತೆ. ಚಿತ್ರದಲ್ಲಿ ಶಿವಣ್ಣಗೆ ನಾಯಕಿಯಾಗಿ ಭಾವನಾ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ಭಜರಂಗಿ-2 ಪ್ಯಾನ್ ಇಂಡಿಯ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಹಾಗಾಗಿ ಚಿತ್ರದ ಮೇಲೆ ಮತ್ತು ಮೇಕಿಂಗ್ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

  English summary
  Kannada actor Shivaraj Kumar Shared a Workout and Yoga Photos in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X