ಮೀಟೂ ಬಗ್ಗೆ ಶಿವಣ್ಣ ಏನಂತಾರೆ? ಯಾರ ಪರ ನಿಲ್ತಾರೆ?

Recommended Video

ಮೀ ಟೂ ಬಗ್ಗೆ ಶಿವರಾಜ್ ಕುಮಾರ್ ಹೇಳೋದೇನು? | FILMIBEAT KANNADA

ಕನ್ನಡ ಚಿತ್ರರಂಗದಲ್ಲಿ ಶುರುವಾಗಿರುವ ಮೀಟೂ ವಿವಾದ ಸದ್ಯದ ಮಟ್ಟಿಗೆ ಕೊನೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈಗಾಗಲೇ, ಸಾಕಷ್ಟು ಮೀ ಟೂ ಪ್ರಕರಣಗಳು ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿ, ಅಘಾತ ಸೃಷ್ಟಿ ಮಾಡಿವೆ.

ಅದರಲ್ಲಿಯೂ ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಪ್ರಕರಣ ಗಂಭೀರ ಸ್ವರೂಪ ತಾಳಿದೆ. ಈ ವಿಚಾರವಾಗಿ ಚಿತ್ರರಂಗದ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ನಟ ಶಿವರಾಜ್ ಕುಮಾರ್ ಸಹ ಈ ಬಗ್ಗೆ ಮಾತನಾಡಿದ್ದಾರೆ.

ಈವರೆಗೂ ಮಾತನಾಡಿರುವ ಚಿತ್ರರಂಗ ಗಣ್ಯರು ತಮ್ಮ ಬೆಂಬಲವನ್ನು ಶ್ರುತಿ ಅಥವಾ ಸರ್ಜಾ ಇಬ್ಬರಲ್ಲಿ ಒಬ್ಬರಿಗೆ ನೀಡುತ್ತಿದ್ದರು. ಆದರೆ, ಶಿವಣ್ಣ ಸತ್ಯದ ಪರ ನಿಂತಿದ್ದಾರೆ. ಮುಂದೆ ಓದಿ..

ಶಿವರಾಜ್ ಕುಮಾರ್ ಪ್ರತಿಕ್ರಿಯೆ

ಶಿವರಾಜ್ ಕುಮಾರ್ ಪ್ರತಿಕ್ರಿಯೆ

ಚಿತ್ರರಂಗದಲ್ಲಿ ನಡೆಯುತ್ತಿರುವ ಮೀ ಟೂ ವಿವಾದ ಶಿವರಾಜ್ ಕುಮಾರ್ ಅವರ ಮನಸ್ಸಿಗೆ ನೋವುಂಟು ಮಾಡಿದೆಯಂತೆ. ಈ ರೀತಿ ಘಟನೆಗಳು, ಗಲಾಟೆಗಳು ಸಿನಿಮಾರಂಗದಲ್ಲಿ ನಡೆಯಬಾರದು ಎಂಬುದು ಶಿವರಾಜ್ ಕುಮಾರ್ ಅವರ ಅಭಿಪ್ರಾಯವಾಗಿದೆ.

ಚೆಂಬರ್ ನಲ್ಲಿ ತೀರ್ಮಾನ ಆಗಲಿ

ಚೆಂಬರ್ ನಲ್ಲಿ ತೀರ್ಮಾನ ಆಗಲಿ

ನಟ ಅರ್ಜುನ್ ಸರ್ಜಾ ಹಾಗೂ ಶ್ರುತಿ ಹರಿಹರನ್ ವಿವಾದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲ್ಲೇರಿದೆ. ''ಚೆಂಬರ್ ಬಗ್ಗೆ ನಮಗೆ ಗೌರವ ಇದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಅಲ್ಲಿಯೇ ಈ ವಿವಾದ ಅಂತ್ಯ ಕಾಣಲಿ'' ಎಂದು ಶಿವಣ್ಣ ಹೇಳಿದ್ದಾರೆ.

ಯಾರ ಭಾವನೆಗೂ ನೋವಾಗುವುದು ಬೇಡ

ಯಾರ ಭಾವನೆಗೂ ನೋವಾಗುವುದು ಬೇಡ

ಈ ಘಟನೆಯಲ್ಲಿ ಚಿತ್ರರಂಗದ ಕೆಲವರು ಅರ್ಜುನ್ ಸರ್ಜಾ ಅವರಿಗೆ ಸಾಥ್ ನೀಡಿದರೆ, ಇನ್ನು ಕೆಲವರು ಶ್ರುತಿ ಹರಿಹರನ್ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಶಿವಣ್ಣ ''ನಾನು ಯಾರ ಭಾವನೆಗೆ ನೋವುಂಟು ಮಾಡುವುದು ಬೇಡ. ಅವರದ್ದು ಸರಿ, ಇವರದ್ದು ಸರಿ ಎಂದು ಹೇಳುವುದಿಲ್ಲ''. ಎಂದು ತಿಳಿಸಿದ್ದಾರೆ.

ಎಲ್ಲರೂ ಒಳ್ಳೆಯವರು, ಯಾರೂ ಕೆಟ್ಟವರಲ್ಲ

ಎಲ್ಲರೂ ಒಳ್ಳೆಯವರು, ಯಾರೂ ಕೆಟ್ಟವರಲ್ಲ

''ಇಲ್ಲಿ ಯಾರೂ ಕೆಟ್ಟವರಲ್ಲ ಎಲ್ಲರೂ ಒಳ್ಳೆಯವರೇ. ಈ ಸಮಸ್ಯೆ ಅದಷ್ಟು ಬೇಗ ಸುಖಾಂತ್ಯ ಕಾಣಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ'' ಎಂದು ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರೊಬ್ಬರ ಪರ ಮಾತನಾಡದ ಶಿವಣ್ಣ ಸಮಸ್ಯೆ ಬಗೆಹರಿಯಲಿ ಎಂದಿದ್ದಾರೆ.

ಮೀಡಿಯಾ ಜನರಿಗೆ ಸತ್ಯ ತೋರಿಸಬೇಕು

ಮೀಡಿಯಾ ಜನರಿಗೆ ಸತ್ಯ ತೋರಿಸಬೇಕು

''ಮೀಡಿಯಾ ಜನರಿಗೆ ಸತ್ಯ ತೋರಿಸಲಿ. ಈ ಘಟನೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ನಿರ್ಧಾರ ನೀವೇ ಮಾಡಿ. ನಾವು ಹೇಳಿದಾಗ ಅದು ಸ್ವಾರ್ಥ ಎನಿಸಬಹುದು. ಆದರೆ, ನೀನು ಎಲ್ಲವನ್ನು ನೋಡುತ್ತೀರಾ ಅದಕ್ಕೆ ನೀವೇ ಉತ್ತರ ನೀಡಿ. ಇದು ನನ್ನ ಸಲಹೆ.'' - ಶಿವರಾಜ್ ಕುಮಾರ್, ನಟ

More from Filmibeat

English summary
Kannada actor Shivaraj Kumar spoke about Me Too campaign.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X