ಶಿವಣ್ಣನ ಅಭಿಮಾನಿಗಳಿಗೆ ಗುಡ್ ನ್ಯೂಸ್: 'ಭಜರಂಗಿ-2' ಚಿತ್ರದಿಂದ ಸಿಕ್ತಿದೆ ಸರ್ಪ್ರೈಸ್

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು ತೆರೆಮೇಲೆ ನೋಡದೆ ಅನೇಕ ತಿಂಗಳುಗಳಾಗಿದೆ. ದ್ರೋಣ ಸಿನಿಮಾ ಮೂಲಕ ಶಿವಣ್ಣ ಕೊನೆಯದಾಗಿ ತೆರೆಮೇಲೆ ಅಬ್ಬರಿಸಿದ್ದರು. ಇದೀಗ ಭಜರಂಗಿ-2 ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಗಳಲ್ಲಿ ಒಂದಾಗಿರುವ ಭಜರಂಗಿ-2 ಸಿನಿಮಾ ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ. ಫಸ್ಟ ಲುಕ್ ಮತ್ತು ಚಿತ್ರದಿಂದ ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳು ಅಭಿಮಾನಿಗಳ ಕುತೂಹಲ, ನಿರೀಕ್ಷೆ ಹೆಚ್ಚಿಸಿದ್ದು, ಭಜರಂಗಿ-2 ಯಾವಾಗ ತೆರೆಮೇಲೆ ಬರುತ್ತೆ ಎಂದು ಕಾಯುತ್ತಿದ್ದಾರೆ.

ಇದೀಗ ಚಿತ್ರತಂಡ ಭಜರಂಗಿ-2 ಸಿನಿಮಾದ ಮೋಷನ್ ಪೋಸ್ಟರ್ ಮತ್ತು ಟೈಟಲ್ ಟ್ರ್ಯಾಕ್ ರಿಲೀಸ್ ಮಾಡುವುದಾಗಿ ಹೇಳಿ ಚಿತ್ರಾಭಿಮಾನಿಗಳಿಗೆ ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಹೌದು, ಇದೇ ತಿಂಗಳು ಫೆಬ್ರವರಿ 10 ಸಂಜೆ 6 ಗಂಟೆಗೆ ಚಿತ್ರದ ಹಾಡು ಮತ್ತು ಮೋಷನ್ ಪೋಸ್ಟರ್ ರಿಲೀಸ್ ಆಗುತ್ತಿದೆ.

Shivaraj Kumar starrer Bhajarangi-2 motion poster will release on february 10th

ಅಂದಹಾಗೆ ಭಜರಂಗಿ-2 ಎ ಹರ್ಷ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸಿನಿಮಾ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಶಿವಣ್ಣ ಹಲವು ಲುಕ್ ಗಳಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳ ಗಮನ ಸೆಳೆಯುತ್ತಿವೆ. ಸದ್ಯ ರಿಲೀಸ್ ಆಗುತ್ತಿರುವ ಮೋಷನ್ ಪೋಸ್ಟರ್ ನಲ್ಲಿ ಹ್ಯಾಟ್ರಿಕ್ ಹೀರೋ ಗೆಟಪ್ ಹೇಗಿರಲಿದೆ ಎನ್ನುವುದು ಅಭಿಮಾನಿಗಳ ಕುತೂಹಲ.

ಶಿವರಾಜ್ ಕುಮಾರ್ ಸದ್ಯ ಶಿವಪ್ಪ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಟಗರು ಸಿನಿಮಾದ ಬಳಿಕ ಡಾಲಿ ಧನಂಜಯ್ ಮತ್ತೆ ಶಿವಣ್ಣ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದೆ. ಈ ನಡುವೆ ಶಿವಣ್ಣ ತಮಿಳು ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ ಸಹ ಕೇಳಿಬಂದಿತ್ತು. ಆದರೆ ಶಿವಣ್ಣ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುವ ನಿರ್ಧಾರವನ್ನು ಕೈಬಿಟ್ಟಿದ್ದಾರೆ.

Recommended Video

ಅಭಿಮಾನಿಗಳಿಗೆ ಮತ್ತೊಂದು ಸಪ್ರೈಸ್ ಕೊಟ್ಟ ಕಿಚ್ಚ ಸುದೀಪ್ | Filmibeat Kannada

More from Filmibeat

English summary
Shivaraj Kumar starrer Bhajarangi-2 motion poster will release on february 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X