'ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ': 'ರುಸ್ತುಂ' ಟ್ರೈಲರ್ ನೋಡಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ರುಸ್ತುಂ' ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಸೆಂಚುರಿ ಸ್ಟಾರ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. 'ರುಸ್ತುಂ' ಪಕ್ಕಾ ಆಕ್ಷನ್ ಸಿನಿಮಾ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಹೊಡಿ ಬಡಿ ದೃಶ್ಯಗಳೇ ಹೈಲೆಟ್ಸ್. 'ಟಗರು' ಚಿತ್ರದಲ್ಲಿ ಪೊಲೀಸ್ ಆಗಿ ಕಾಣಿಸಿ ಕೊಂಡಿದ್ದ ಶಿವಣ್ಣ 'ರುಸ್ತುಂ' ಮೂಲಕ ಮತ್ತೆ ಖಾಕಿ ಧರಿಸಿ ಅಬ್ಬರಿಸಿದ್ದಾರೆ.

ಸದ್ಯ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ಶಿವಣ್ಣ ಗನ್ ಜೊತೆಗೆ ಲಾಂಗ್ ಕೂಡ ಹಿಡಿದಿದ್ದಾರೆ. "ತುಂಬಾ ದಿನದ ಹಿಂದೆನೇ ರೌಡಿಸಂನ ಕಾಂಟ್ರಾಕ್ಟ್ ಗೆ ತೆಗೆದು ಕೊಂಡಿದ್ದೀನಿ" ಅಂತ ಮಾಸ್ ಡೈಲಾಗ್ ಹೊಡೆಯುತ್ತಾ ರೌಡಿಗಳನ್ನು ಅಟ್ಟಾಡಿಸಿಕೊಂಡು ಹೊಡೆಯುವ ಶಿವಣ್ಣನ ಸ್ಟೈಲ್ ಅಭಿಮಾನಿಗಳಿಗೆ ಕಿಕ್ ಏರಿಸುತ್ತಿದೆ.

shivaraj kumar starrer rustum kannada movie trailer released

'ಅರೆಸ್ಟ್ ಅಂದ್ರೆ ಅಲರ್ಜಿ, ಎನ್ ಕೌಂಟರ್ ಅಂದ್ರೆ ಎನರ್ಜಿ' ಎಂದು ಶಿವಣ್ಣ ಹೇಳುವ ಡೈಲಾಗ್ ಈಗಾಗಲೆ ಟ್ರೆಂಡ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ವಿಶೇಷ ಅಂದ್ರೆ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಓಬೆರಾಯ್ ಕೂಡ ಪೊಲೀಸ್ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬರುತ್ತಿರುವ ವಿವೇಕ್ ಟ್ರೈಲರ್ ನಲ್ಲೇ ಕನ್ನಡಿಗರ ಗಮನ ಸೆಳೆದಿದ್ದಾರೆ.

ಅಂದ್ಹಾಗೆ 'ರುಸ್ತುಂ' ಸಾಹಸ ನಿರ್ದೇಶಕ ರವಿ ವರ್ಮಾ ಸಾರಥ್ಯದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ. ಮೊದಲ ಸಿನಿಮಾದ ಟ್ರೈಲರ್ ಮೂಲಕವೇ ಚಿತ್ರಾಭಿಮಾನಿಗಳ ಮನ ಗೆದ್ದಿರುವ ರವಿ ವರ್ಮಾ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಇನ್ನು ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಶ್ರದ್ಧಾ ಶ್ರೀನಾಥ್ ಬಣ್ಣ ಹಚ್ಚಿದ್ದಾರೆ. ನಟಿ ಮಯೂರಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆ.

More from Filmibeat

English summary
Kannada actor Hatrick Hero Shivaraj Kumar starrer 'Rustum' Kannada movie trailer released. This movie is directed by Ravi Varma.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X