For Quick Alerts
  ALLOW NOTIFICATIONS  
  For Daily Alerts

  ಕೃಷಿ ಮೇಳದಲ್ಲಿ ಶಿವಣ್ಣ ರಂಗು: ಹಾಡಿ, ಡ್ಯಾನ್ಸ್ ಮಾಡಿ ರಂಜಿಸಿದ ಹ್ಯಾಟ್ರಿಕ್ ಹೀರೋ, ವಿಡಿಯೋ ವೈರಲ್

  |

  ರಾಜ್ಯಮಟ್ಟದ ಕೃಷಿಮೇಳ ಹೊನ್ನಾಳಿಯಲ್ಲಿ ನಡೆಯುತ್ತಿದೆ. ಡಾ. ಶಿವರಾಜ್ ಕುಮಾರ್, ಯೋಗ ಗುರು ಬಾಬಾ ರಾಮದೇವ್, ಕಾಶಿ ಜಗದ್ಗುರು ಕೃಷಿ ಮೇಳಕ್ಕೆ ಅದ್ದೂರಿ ಚಾಲನೆ ನೀಡಿದರು. ಮುಖ್ಯ ಮಂತ್ರಿಗಳ ಸಂಸದೀಯ ಕಾರ್ಯದರ್ಶಿ ರೇಣುಕಾಚಾರ್ಯ ನೇತೃತ್ವದಲ್ಲಿ ಮೂರು ದಿನಗಳ ಕಾಲ ಕೃಷಿ ಮೇಳ ನಡೆಯಲಿದೆ.

  ಕೃಷಿ ಮೇಳದಲ್ಲಿ ಶಿವಣ್ಣ ರಂಗು | ಹಾಡಿ, ಡ್ಯಾನ್ಸ್ ಮಾಡಿ ರಂಜಿಸಿದ ಹ್ಯಾಟ್ರಿಕ್ ಹೀರೋ

  ಚಾಲನೆ ನೀಡಿ ಮಾತನಾಡಿದ ಶಿವಣ್ಣ "ಗಡಿಯಲ್ಲಿ ಯೋಧ ದೇಶ ಕಾಪಾಡುತ್ತಾರೆ. ಹಾಗೆ ರೈತ ಕೃಷಿ ಮಾಡುತ್ತಾರೆ. ಯೋಧ ಮತ್ತು ರೈತ ಎರಡು ಕಣ್ಣುಗಳಿದ್ದಂತೆ. ಯಾವುದೆ ಕಣ್ಣಿಗೆ ನೋವಾದರು ಕಷ್ಟವಾಗುತ್ತೆ. ಎಂದು ಹೇಳಿದರು. ಇನ್ನು ಅಪ್ಪಾಜಿ ಬಂಗಾರದ ಮನುಷ್ಯ ಸಿನಿಮಾದಲ್ಲಿ ರೈತನಾಗಿದ್ದರು. ರೈತರ ಬಗ್ಗೆ ಅಪಾರವಾದ ಗೌರವಿದೆ. ಯಾವುದೆ ಕಾರಣಕ್ಕೂ ರೈತ ಸಾಯೋ ಮಾತಾನಾಡಬಾರದು" ಎಂದರು.

  ಅಯ್ಯಪ್ಪ ಮಾಲೆ ಧರಿಸಿದ ನಟ ಶಿವರಾಜ್ ಕುಮಾರ್, ನಿರ್ದೇಶಕ ರಘುರಾಮ್ಅಯ್ಯಪ್ಪ ಮಾಲೆ ಧರಿಸಿದ ನಟ ಶಿವರಾಜ್ ಕುಮಾರ್, ನಿರ್ದೇಶಕ ರಘುರಾಮ್

  ಜೊತೆಗೆ 'ಆಗದು ಎಂದು ಕೈಕಟ್ಟಿಕುಳಿತರೆ' ಹಾಡಿನ ಮೂಲಕ ರೈತರಿಗೆ ಮತ್ತಷ್ಟು ಧೈರ್ಯ ತುಂಬಿದರು. ಶಿವಣ್ಣ ಮಾತಿನ ಜೊತೆಗೆ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು. ಜೊತೆಗೆ ಟಗರು ಹಾಡಿಗೆ ಹೆಜ್ಜೆ ಹಾಕಿದ ಶಿವಣ್ಣ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು.

  ಶಿವಣ್ಣ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಬಾಬಾ ರಾಮ್ ದೇವ ಮಾತನಾಡಿ, ಕರ್ನಾಟಕ ಜನ ರಾಷ್ಟ್ರಭಕ್ತಿ ಹಾಗೂ ಆಧ್ಯಾತ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ ಎಂದು ಕನ್ನಡದಲ್ಲಿಯೇ ಮಾತು ಪ್ರಾರಂಭಿಸಿದರು.

  ದೇಶದಾದ್ಯಂತ ಕೊರೊನಾ ಭೀತಿ ಇದೆ. ಆದರೆ ಗ್ರಾಮೀಣ ಭಾಗದಲ್ಲಿ ಕೊರೊನಾ ಬರೋದಿಲ್ಲ. ಅರಿಶಿಣ, ಕಾಳಿ ಮೆಣಸು, ತುಳುಸಿ, ಶುಂಠಿ ಸೇವಿಸುವುದರಿಂದ ಯಾವುದೆ ರೋಗ ಬರುವುದಿಲ್ಲ ಎಂದು ಹೇಳಿದರು.

  English summary
  Kannada Actor shivaraj Kumar spech in Krishi Mela in Honnali. Shivaraj Kumar Tagaru dance in Krishi Mela at Honnali.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X