ಸುಖವಿದ್ದಾಗ ಇರ್ತಾರೆ ನೂರಾರು ಜನ, ಕಷ್ಟದಲ್ಲಿದ್ದಾಗ ಬರ್ತಾರೆ ಶಿವಣ್ಣ
Recommended Video

ಶಿವರಾಜ್ ಕುಮಾರ್ ಸಿನಿಮಾದಲ್ಲಿ ಮಾತ್ರವಲ್ಲ ತೆರೆ ಹಿಂದೆಯೂ ಹೀರೋ. ಶಿವಣ್ಣ ಕಷ್ಟದಲ್ಲಿ ಇರುವ ಅನೇಕರಿಗೆ ಸಹಾಯ ಮಾಡಿಕೊಂಡು ಬಂದಿದ್ದಾರೆ. ಚಿತ್ರರಂಗದ ಸಾಕಷ್ಟು ಸ್ನೇಹಿತರ ಸಂಕಷ್ಟದ ಸಮಯದಲ್ಲಿ ಕೈ ಹಿಡಿದಿದ್ದಾರೆ.
ಇದೀಗ 'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿರುವ ಶಿವರಾಜ್ ಕುಮಾರ್ ತಮ್ಮ ಸ್ನೇಹಿತ ರಘುರಾಮ್ ಹಾಗೂ ತಂಡಕ್ಕೆ ಶಕ್ತಿ ತುಂಬಿದ್ದಾರೆ.
'ಮಿಸ್ಸಿಂಗ್ ಬಾಯ್' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಕೆಲ ಮಲ್ಟಿಪ್ಲೆಕ್ಸ್ ನಲ್ಲಿ ಸಿನಿಮಾ ತೆಗೆಯುತ್ತಿದ್ದರು. ಆದರೆ, ಇದೇ ವೇಳೆ ಶಿವಣ್ಣ ಸಿನಿಮಾವನ್ನು ನೋಡಿ ತಂಡಕ್ಕೆ ಹೊಸ ಚೈತನ್ಯ ನೀಡಿದ್ದಾರೆ.

ಸಿನಿಮಾ ನೋಡಿ ಮಾತನಾಡಿದ ಶಿವಣ್ಣ ''ಚಿತ್ರ ತುಂಬ ಚೆನ್ನಾಗಿದೆ. ಗುರುನಂದನ್ ಹಾಗೂ ಹೀರೋಯಿನ್ ಚೆನ್ನಾಗಿ ನಟಿಸಿದ್ದಾರೆ. ತಾಯಿಯ ಪಾತ್ರ ಮಾಡಿರುವ ಭಾಗೀರಥಿ ಭಾಯಿ ನಟನೆ ಅದ್ಭುತ. ಅವರು ನಮ್ಮ ಕಬೀರ ಸಿನಿಮಾದಲ್ಲಿ ನಟಿಸಿದ್ದರು.'' ಎಂದಿದ್ದಾರೆ.
ಜೊತೆಗೆ ''ತಾಯಿಗೆ ಸೆಂಟಿಮೆಂಟ್ ಯಾರೇ ಮಾಡಿದರೂ ಮನಸ್ಸಿಗೆ ಮುಟ್ಟುತ್ತದೆ. ಚಿತ್ರದ ಎಮೋಷನ್ಸ್ ಇಷ್ಟ ಆಗಿದೆ. ಈ ರೀತಿಯ ರಿಯಲ್ ಸಿನಿಮಾ ಮಾಡುವುದು ದೊಡ್ಡ ಸವಾಲು. ನಾನು ಯಂಗ್ ಆಗಿದ್ದರೆ ಈ ಸಿನಿಮಾದಲ್ಲಿ ನಟಿಸುತ್ತಿದ್ದೆ.'' ಎಂದು ಹೇಳಿ ಸಂತಸ ವ್ಯಕ್ತ ಪಡಿಸಿದರು.
'ಮಿಸ್ಸಿಂಗ್ ಬಾಯ್' ಸಿನಿಮಾ ನೋಡಿ ಬಾಲ್ಯದ ನೆನೆಪು ಮಾಡಿಕೊಂಡ ಶಿವಣ್ಣ ಎಲ್ಲರೂ ನೋಡಬೇಕಾದ ಸಿನಿಮಾ ಇದು ಎಂದರು.


Click it and Unblock the Notifications











