'ಮಿಸ್ಸಿಂಗ್ ಬಾಯ್' ಹುಡುಕಲು ಹೊರಟ ಶಿವರಾಜ್ ಕುಮಾರ್
ರಘುರಾಮ್ ನಿರ್ದೇಶನದ 'ಮಿಸ್ಸಿಂಗ್ ಬಾಯ್' ಸಿನಿಮಾ ಕಳೆದ ವಾರವಷ್ಟೇ ಬಿಡುಗಡೆಯಾಗಿತ್ತು. ನೈಜ ಘಟನೆಯಾಧರಿತ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಚಿತ್ರಪ್ರಿಯರು ಮೆಚ್ಚಿಕೊಂಡಿರುವ ಚಿತ್ರವನ್ನ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೋಡುತ್ತಿದ್ದಾರೆ.
ರಘುರಾಮ್ ಸಾರಥ್ಯದಲ್ಲಿ ಮೂಡಿಬಂದ ಚೊಚ್ಚಲ ಚಿತ್ರವನ್ನು ಇಂದು ಶಿವಣ್ಣ ವೀಕ್ಷಿಸುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಸಂಜೆ 6.30ಕ್ಕೆ ಬೆಂಗಳೂರಿನ ಓರಿಯನ್ ಮಾಲ್ ನಲ್ಲಿ ಚಿತ್ರತಂಡದ ಜೊತೆ ಶಿವಣ್ಣ ಸಿನಿಮಾ ವೀಕ್ಷಿಸುತ್ತಿದ್ದಾರೆ. ದೊಡ್ಡ ನಟರು ಉತ್ತಮ ಸಿನಿಮಾಗಳನ್ನು ನೋಡಿ ಹೊಸಬರ ಬೆನ್ನುತಟ್ಟುತ್ತಿರುವುದು ಚಿತ್ರತಂಡ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.

ಶಿವಣ್ಣ ಸಿನಿಮಾ ವೀಕ್ಷಿಸುತ್ತಿರುವ ಸಂತಸವನ್ನು ನಿರ್ದೇಶ ರಘುರಾಮ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 'ಕನ್ನಡ ಚಿತ್ರರಂಗವೆಂಬ ಕಳಶಕ್ಕೆ ಕವಚ. ನನ್ನಂತ ಸೋತವರಿಗೆ ರಕ್ಷಾ ಕವಚ. ಸಂತಸದಲ್ಲಿ ಎಲ್ಲರೂ ಒಂದು ಸಂಭ್ರಮಿಸುವುದು ಪದ್ದತಿ, ಆದ್ರೆ ಸೋತಾಗ ಕೈ ಹಿಡಿದು ಸ್ಪಂದಿಸುವುದು ಕರುನಾಡ ಚಕ್ರವರ್ತಿ ಸಂಸ್ಕೃತಿ' ಎಂದು ಶಿವಣ್ಣ ಅವರ ಸಹಾಯದ ಮನೋಭಾವವನ್ನು ಹೊಗಳಿ ಬರೆದುಕೊಂಡಿದ್ದಾರೆ.
ಹಳ್ಳಿಯಿಂದ ಕಾಣೆಯಾದ ಯುವಕನೊಬ್ಬ ವಿದೇಶದಲ್ಲಿ ನೆಲೆಸಿ ನಂತರ ತನ್ನ ಊರಿಗೆ ವಾಪಸ್ ಬಂದು ತಾಯಿಯನ್ನು ಹುಡುಕುವ ಕಥೆಯೇ 'ಮಿಸ್ಸಿಂಗ್ ಬಾಯ್'. 'ಮಿಸ್ಸಿಂಗ್ ಬಾಯ್' ಆಗಿ ನಟ ಗುರುನಂದನ್ ಕಾಣಿಸಿಕೊಂಡಿದ್ದಾರೆ. ಈ ಮನಮಿಡಿಯುವ ಕಥೆಗೆ ಪ್ರೇಕ್ಷಕರು ಮನಸೋತಿದ್ದರು. ಈಗ ಈ ಸಿನಿಮಾವನ್ನು ಶಿವಣ್ಣ ವೀಕ್ಷಿಸುತ್ತಿದ್ದಾರೆ.


Click it and Unblock the Notifications











