For Quick Alerts
  ALLOW NOTIFICATIONS  
  For Daily Alerts

  ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟ ಶಿವರಾಜ್ ಕುಮಾರ್ ಪತ್ನಿ ಗೀತಾ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿ ಸಮೇತರಾಗಿ ತಿರುಪತಿಗೆ ಭೇಟಿ ನೀಡಿ ತಿಮ್ಮನ ದರ್ಶನ ಪಡೆದಿದ್ದಾರೆ. ಶಿವಣ್ಣ ಕುಟುಂಬ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆಯುವುದು ಇದೆ ಮೊದಲೇನಲ್ಲ. ಶಿವಣ್ಣ ಈಗಾಗಲೆ ಅನೇಕ ಬಾರಿ ತಿರುಪತಿಗೆ ಭೇಟಿ ನೀಡಿದ್ದಾರೆ.

  ಆದರೆ ಈ ಬಾರಿ ಶಿವಣ್ಣ ಯಾವುದೊ ಹರಿಕೆ ತೀರಿಸಲು ತಿರುಪತಿಗೆ ಭೇಟಿ ಕೊಟ್ಟಹಾಗೆ ಅನಿಸುತ್ತೆ. ಯಾಕೆಂದರೆ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್ ತಿರುಪತಿಯಲ್ಲಿ ಮುಡಿ ಕೊಟ್ಟಿದ್ದಾರೆ. ಗೀತಾ ಅವರು ಸಂಪೂರ್ಣ ಕೂದಲನ್ನು ತೆಗೆಸಿದ್ದಾರೆ. ತಿಮ್ಮಪ್ಪನ ದರ್ಶನ ಪಡೆದು ಬರುತ್ತಿರುವ ಶಿವಣ್ಣ ಮತ್ತು ಗೀತಾ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ.

  ಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಡಾ.ರಾಜ್ ಕುಟುಂಬಪರಿಸರದ ಮಹಾಶತ್ರು ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುತ್ತಿದೆ ಡಾ.ರಾಜ್ ಕುಟುಂಬ

  ಮೊದಲ ಬಾರಿಗೆ ಗೀತಕ್ಕ ಸಂಪೂರ್ಣವಾಗಿ ಮುಡಿಕೊಟ್ಟಿದ್ದಾರೆ. ಶಿವಣ್ಣ ದಂಪತಿಯ ಜೊತೆಗೆ ನಿರ್ದೇಶಕ ಮತ್ತು ನಟ ರಘುರಾಮ್ ಹಾಗೂ ಸ್ನೇಹಿತರು ಕೂಡ ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಂದ್ಹಾಗೆ ಸದ್ಯ ಶಿವಣ್ಣ ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ಭಜರಂಗಿ-2 ಚಿತ್ರದ ಜೊತೆಗೆ ಧ್ರೋಣ, ಎಸ್ ಆರ್ ಕೆ ಚಿತ್ರಗಳು ಸಹ ಸಾಲಿನಲ್ಲಿ ಇವೆ. ಶಿವಣ್ಣ ಇತ್ತೀಚಿಗಷ್ಟೆ ಆಯುಷ್ಮಾನ್ ಭವ ಸಿನಿಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಿವಣ್ಣ ದಂಪತಿ ನಿನ್ನೆ ತಿರುಪತಿಗೆ ತೆರಳಿದ್ದು ಇಂದು ಪೂಜೆ ಎಲ್ಲಾ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗುವ ಸಾದ್ಯತೆ ಇದೆ.

  English summary
  Kannada actor Shivarajkumar wife Geetha Shivaraj kumar's hair Tonsure offering at Thirumala Tirupati Temple.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X