'ಸೈರಾ' ಸಿನಿಮಾವನ್ನು ಮೊದಲ ದಿನ ನೋಡ್ತಾರೆ ಶಿವಣ್ಣ
Recommended Video
ನಿನ್ನೆ (ಸಪ್ಟೆಂಬರ್ 29) ರಂದು 'ಸೈರಾ ನರಸಿಂಹ ರೆಡ್ಡಿ' ತೆಲುಗು ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಿನಿಮಾದ ಬಗ್ಗೆ ಮಾತನಾಡಿದ ಶಿವರಾಜ್ ಕುಮಾರ್, ''ನಾನು ಸೈರಾ ಸಿನಿಮಾವನ್ನು ಮೊದಲ ದಿನವೇ ನೋಡುತ್ತೇನೆ'' ಎಂದು ಹೇಳಿದರು. ಸಿನಿಮಾದ ಟ್ರೇಲರ್ ನೋಡಿ ತುಂಬ ಖುಷಿ ಪಟ್ಟ ಶಿವರಾಜ್ ಕುಮಾರ್ ಸಿನಿಮಾ ನೋಡುವ ಬಯಕೆ ವ್ಯಕ್ತಪಡಿಸಿದರು.
'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಕನ್ನಡದಲ್ಲಿಯೂ ಬರುತ್ತಿದ್ದು, ನೀವು ಕೂಡ ಕನ್ನಡದಲ್ಲಿ ಸಿನಿಮಾ ನೋಡಿ ಎಂದು ಅಭಿಮಾನಿಗಳಿಗೆ ತಿಳಿಸಿದರು. ಅಮಿತಾಭ್ ಬಚ್ಚನ್, ಚಿರಂಜೀವಿ, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ನಯನ ತಾರ, ತಮನ್ನಾ ನಟನೆಯನ್ನು ಹೊಗಳಿದರು.

ಇಡೀ ಸಿನಿಮಾ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ ಶಿವಣ್ಣ, ಚಿರಂಜೀವಿ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದರು. ಅಕ್ಟೋಬರ್ 2 ರಂದು ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೊದಲ ದಿನವೇ ಒರಾಯನ್ ಮಾಲ್ ನಲ್ಲಿ ಸಿನಿಮಾ ನೋಡುತ್ತಿದ್ದಾರೆ.
ತೆಲುಗು, ಕನ್ನಡ, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ರಾಮ್ ಚರಣ್ ತೇಜ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸುರೇಂದ್ರ ರೆಡ್ಡಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ.


Click it and Unblock the Notifications











