For Quick Alerts
  ALLOW NOTIFICATIONS  
  For Daily Alerts

  'ಸಲಗ'ದ ಬೆನ್ನಿಗೆ ನಿಂತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

  |

  ಸ್ಯಾಂಡಲ್ ವುಡ್ ನ ಕರಿಚಿರತೆ ದುನಿಯ ವಿಜಯ್ ಸದ್ಯ ಬಹು ನಿರೀಕ್ಷೆಯ 'ಸಲಗ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ವಿಜಿ ಅಭಿನಯದ ಜೊತೆಗೆ ನಿರ್ದೇಶನ ಮಾಡುತ್ತಿರುವ ಸಿನಿಮಾವಿದು. ಬ್ಲ್ಯಾಕ್ ಕೋಬ್ರ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿರುವ ಸಲಗ ಈಗಾಗಲೆ ಬಹುತೇಕ ಚಿತ್ರೀಕರಣ ಮುಗಿಸಿ, ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದೆ.

  ಇದರ ನಡುವೆ ಈಗ ಚಿತ್ರತಂಡ ಆಡಿಯೋ ರಿಲೀಸ್ ಮಾಡಲು ಭರ್ಜರಿ ತಯಾರಿ ಮಾಡಿಕೊಳ್ಳುತ್ತಿದೆ. ಹೌದು, ಸಲಗ ಚಿತ್ರದ ಆಡಿಯೋ ಮುಂದಿನ ವರ್ಷ ಅಂದರೆ 2020 ಜನವರಿ 5ಕ್ಕೆ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

  'ಸಲಗ' ಚಿತ್ರದ 'ರಾ' ಮೇಕಿಂಗ್ ನೋಡಿ ಜನ ಹಾಕಿದ್ರು ಜೈಕಾರ'ಸಲಗ' ಚಿತ್ರದ 'ರಾ' ಮೇಕಿಂಗ್ ನೋಡಿ ಜನ ಹಾಕಿದ್ರು ಜೈಕಾರ

  ವಿಶೇಷ ಅಂದರೆ ಚಿತ್ರದ ಆಡಿಯೋ ರಿಲೀಸ್ ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆಸ್ಟ್ ಆಗಿ ಆಗಮಿಸಲಿದ್ದಾರಂತೆ. ಅಂದ್ಹಾಗೆ ಸಲಗ ಬಹುತೇಕ ಟಗರು ತಂಡದಿಂದ ನಿರ್ಮಾಣವಾಗುತ್ತಿರುವ ಸಿನಿಮಾ. ಸದ್ಯ ಶಿವಣ್ಣ ಆಡಿಯೋ ಲಾಂಚ್ ನಲ್ಲಿ ಭಾಗಿಯಾಗುವ ಮೂಲಕ ಮತ್ತೊಮ್ಮೆ ಟಗರು ಟೀಂ ಸಮಾಗಮವಾಗಲಿದೆ.

  ಸಲಗ ಚಿತ್ರದ ಹಾಡುಗಳು ಎ2 ಮ್ಯೂಸಿಕ್ ಪಾಲಾಗಿದೆ. ಹಾಡುಗಳು ಎ2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಸಲಗ ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ಮಾಪಕ ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದಾರೆ.

  ಟಗರು ಟೀಮ್ ಮಾಡ್ತಿರೋ ಸಲಗ ಚಿತ್ರಕ್ಕೆ ಶಿವಣ್ಣ ಮುಕ್ತ ಕಂಠದಿಂದ ಶುಭಹಾರೈಸಿ, ಸಲಗದ ಬೆನ್ನಿಗೆ ನಿಂತಿದ್ದಾರೆ. ಇದು ಸಲಗ ತಂಡಕ್ಕೆ ಮತ್ತಷ್ಟು ಬಲ ತಂದಿದ್ದು, ಸಲಗದ ರೇಂಜ್ ದಿನೇ ದಿನೇ ದೊಡ್ಡದಾಗ್ತಿದೆ. ದುನಿಯ ವಿಜಯ್ ಸಿನಿಮಾ ರಿಲೀಸ್ ಆಗದೆ ಸುಮಾರು 2 ವರ್ಷಗಳಾಗಿದೆ. ಸಲಗ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದ್ದು ಮುಂದಿನ ವರ್ಷ ತೆರೆಗೆ ಬರಲಿದೆ.

  English summary
  Kannada actor Shivaraj Kumar will release Duniya Vijay starrer Salaga movie audio. Salaga is Duniya Vijay directorial debut film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X