For Quick Alerts
  ALLOW NOTIFICATIONS  
  For Daily Alerts

  'ಟಗರು' ಚಿತ್ರತಂಡಕ್ಕೆ ವಿಮೆ ಮಾಡಿಸಿದ ನಿರ್ಮಾಪಕ

  By Bharath Kumar
  |
  Tagaru Movie Producer KP Srikanth has bought insurance for the team | FIlmibeat Kannada

  'ಮಾಸ್ತಿಗುಡಿ' ಚಿತ್ರದ ದುರಂತದ ನಂತರ ಎಚ್ಚೆತ್ತುಕೊಂಡಿರುವ ಸ್ಯಾಂಡಲ್ ವುಡ್ ಈಗ ಮುಂಜಾಗೃತೆ ಕ್ರಮಗಳನ್ನ ಕೈಗೊಂಡು ಶೂಟಿಂಗ್ ಮಾಡುತ್ತಿದೆ. ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುವ ಎಲ್ಲ ಕಲಾವಿದರು, ಕಾರ್ಮಿಕರಿಗೂ ವಿಮೆ ಮಾಡಿಸುವ ಮೂಲಕ ಕನ್ನಡ ಚಿತ್ರ ನಿರ್ಮಾಪಕರು ಮೆಚ್ಚುಗೆಗಳಿಸಿಕೊಳ್ಳುತ್ತಿದ್ದಾರೆ.

  ಶಿವರಾಜ್ ಕುಮಾರ್ ಅಭಿನಯದ 'ಟಗರು' ಚಿತ್ರವನ್ನ ನಿರ್ಮಾಣ ಮಾಡುತ್ತಿರುವ ಕೆ.ಪಿ.ಶ್ರೀಕಾಂತ್ ಅವರು ಈಗ 'ಟಗರು' ಚಿತ್ರತಂಡಕ್ಕೆ ವಿಮೆ ಮಾಡಿಸಿದ್ದಾರೆ. ಚಿತ್ರದಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಂಡು ಮಾಡುವ ಸಾಹಸ ದೃಶ್ಯಗಳಿರುವುದರಿಂದ ವಿಮೆ ಅಗತ್ಯವಾಗಿ ಮಾಡಿಸಿದ್ದಾರೆ.

  'ಟಗರು' ಚಿತ್ರಕ್ಕೂ ಮುಂಚೆ ಹಲವು ಚಿತ್ರತಂಡಗಳು ಕಾರ್ಮಿಕರಿಗೆ ಹಾಗೂ ಕಲಾವಿದರಿಗೆ ವಿಮೆ ಮಾಡಿಸಿದ್ದವು. ಇತ್ತೀಚೆಗಷ್ಟೇ ಯಶ್ ಅಭಿನಯದ 'ಕೆ.ಜಿ.ಎಫ್' ಚಿತ್ರದ ನಿರ್ಮಾಪಕರಾದ ಹೊಂಬಾಳೆ ಫಿಲ್ಮ್ಸ್ ಅವರು ಕೂಡ ವಿಮೆ ಮಾಡಿಸಿದ್ದರು.

  ಶಿವರಾಜ್ ಕುಮಾರ್ ಅಭಿನಯದ ಈ ಚಿತ್ರದಲ್ಲಿ ಧನಂಜಯ್, ವಸಿಷ್ಠ ಸಿಂಹ, ಮಾನ್ವಿತಾ ಹರೀಶ್, ಭಾವನಾ, ದೇವರಾಜ್ ಸೇರಿದಂತೆ ಹಲವರು ಕಾಣಿಸಿಕೊಳ್ಳುತ್ತಿದ್ದಾರೆ. ದುನಿಯಾ ಸೂರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಹರಿಕೃಷ್ಣ ಸಂಗೀತ ನೀಡಿದ್ದಾರೆ.

  English summary
  Shivarajakumar starrer 'Tagaru' Movie producer K P Srikanth has taken a precaution and has insured the team completely.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X