For Quick Alerts
  ALLOW NOTIFICATIONS  
  For Daily Alerts

  ಶಿವಣ್ಣನ 125ನೇ ಚಿತ್ರಕ್ಕೆ ಚಾಲನೆ: 'ಗೀತಾ ಪಿಕ್ಚರ್ಸ್' ಸಂಸ್ಥೆಯಲ್ಲಿ ನಿರ್ಮಾಣ

  |

  ಕೊರೊನಾ ಸಮಸ್ಯೆಯಿಂದ ನಿಧಾನವಾಗಿ ಹೊರಬರುತ್ತಿರುವ ಚಿತ್ರರಂಗ ಮತ್ತೆ ಮೊದಲಿನಂತೆ ಕೆಲಸ ಆರಂಭಿಸಿದೆ. ಹೊಸ ಹೊಸ ಸಿನಿಮಾಗಳು ಸೆಟ್ಟೇರಿದೆ. ಅರ್ಧಕ್ಕೆ ನಿಂತಿದ್ದ ಚಿತ್ರಗಳು ಶೂಟಿಂಗ್ ಶುರು ಮಾಡಿದೆ. ಇನ್ನು ಪೋಸ್ಟ್ ಪ್ರೊಡಕ್ಷನ್, ಸಾಂಗ್ ರೆಕಾರ್ಡಿಂಗ್ ಅಂತ ಬಾಕಿ ಉಳಿಸಿಕೊಂಡಿದ್ದ ಚಿತ್ರಗಳು ತಮ್ಮ ಕೆಲಸ ಶುರು ಮಾಡಿದೆ.

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂತೂ ಸತತವಾಗಿ ಸಿನಿಮಾಗಳನ್ನು ಆರಂಭಿಸುತ್ತಿದ್ದಾರೆ. 123ನೇ ಚಿತ್ರದ ಚಿತ್ರೀಕರಣ ಮುಗಿಸಿದೆ. 124ನೇ ಚಿತ್ರೀಕರಣ ಶುರು ಮಾಡಿದರು. 126 ಮತ್ತು 127ನೇ ಚಿತ್ರಗಳನ್ನು ಘೋಷಣೆ ಮಾಡಿದರು. ಇದೆಲ್ಲದರ ನಡುವೆ ತಮ್ಮದೇ ನಿರ್ಮಾಣ ಸಂಸ್ಥೆಯಲ್ಲಿ ತಯಾರಿಸುತ್ತಿರುವ ಚಿತ್ರ ಆರಂಭಿಸಲು ಸರಿಯಾದ ಸಮಯ ನೋಡುತ್ತಿದ್ದರು. ಇದೀಗ, ಆ ಶುಭ ದಿನವೂ ಬಂದಾಗಿದೆ.

  SRK 124: ಒಂದು ಖುಷಿ ಇನ್ನೊಂದು ಬೇಸರದ ವಿಷಯ ಹಂಚಿಕೊಂಡ ಸುದೀಪ್SRK 124: ಒಂದು ಖುಷಿ ಇನ್ನೊಂದು ಬೇಸರದ ವಿಷಯ ಹಂಚಿಕೊಂಡ ಸುದೀಪ್

  ಶುಕ್ರವಾರ (ಆಗಸ್ಟ್ 27) ಸೆಂಚುರಿ ಸ್ಟಾರ್ ನಟಿಸಲಿರುವ 125ನೇ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ. ಸಿನಿಮಾ ಸಾಂಗ್ಸ್ ರೆಕಾರ್ಡಿಂಗ್ ಪೂಜೆ ಮಾಡುವ ಮೂಲಕ ತಮ್ಮ ಸ್ವಂತ ಸಂಸ್ಥೆಯಲ್ಲಿರುವ ಶುರುವಾಗುತ್ತಿರುವ ಚಿತ್ರ ಕೈಗೆತ್ತಿಕೊಂಡಿದ್ದಾರೆ. ಮುಂದೆ ಓದಿ...

  ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಪೂಜೆ

  ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಪೂಜೆ

  ಶಿವರಾಜ್ ಕುಮಾರ್ ನಟಿಸುತ್ತಿರುವ 125ನೇ ಚಿತ್ರ 'ವೇದ'. ಭಜರಂಗಿ, ಭಜರಂಗಿ 2, ವಜ್ರಕಾಯ ಅಂತಹ ಚಿತ್ರಗಳನ್ನು ನಿರ್ದೇಶಿಸಿರುವ ಹರ್ಷ ಮಾಸ್ಟರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರವನ್ನು ಗೀತಾ ಪಿಕ್ಚರ್ಸ್ ಸಂಸ್ಥೆಯಲ್ಲಿ ಸ್ವತಃ ಗೀತಾ-ಶಿವರಾಜ್ ಕುಮಾರ್ ನಿರ್ಮಿಸುತ್ತಿದ್ದಾರೆ. ಶಿವಣ್ಣ ಸಂಸ್ಥೆಯಿಂದ ತಯಾರಾಗುತ್ತಿರುವ ಮೊದಲ ಸಿನಿಮಾ ಇದು. ಶುಕ್ರವಾರ ಈ ಚಿತ್ರದ ಸಾಂಗ್ಸ್ ರೆಕಾರ್ಡಿಂಗ್ ಪೂಜೆ ಅರ್ಜುನ್ ಜನ್ಯ ಮ್ಯೂಸಿಕ್ ಸ್ಟುಡಿಯೋದಲ್ಲಿ ನೆರವೇರಿದೆ.

  ಅರ್ಜುನ್ ಜನ್ಯ ಸಂಗೀತ

  ಅರ್ಜುನ್ ಜನ್ಯ ಸಂಗೀತ

  'ವೇದ' ಚಿತ್ರದ ಫಸ್ಟ್ ಲುಕ್ ಪೊಸ್ಟರ್ ಈ ಹಿಂದೆಯೇ ಬಿಡುಗಡೆಯಾಗಿದ್ದು, ಸಖತ್ ಕುತೂಹಲ ಹುಟ್ಟಿಸಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡ್ತಿದ್ದಾರೆ. ಸಾಂಗ್ ರೆಕಾರ್ಡಿಂಗ್ ಪೂಜೆಯಲ್ಲಿ ನಟ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿರ್ದೇಶಕ ಹರ್ಷ ದಂಪತಿ, ನಿರ್ಮಾಪಕ ಕೆಪಿ ಶ್ರೀಕಾಂತ್, ಅರ್ಜುನ್ ಜನ್ಯ ಭಾಗಿಯಾಗಿದ್ದರು.

  ಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರಮುಂದುವರಿದ ಶಿವಣ್ಣನ ಸಿನಿಮಾ ಪರ್ವ: ಯುವ ನಿರ್ದೇಶಕನ ಜೊತೆ 127ನೇ ಚಿತ್ರ

  123ನೇ ಸಿನಿಮಾ 'ಬೈರಾಗಿ'

  123ನೇ ಸಿನಿಮಾ 'ಬೈರಾಗಿ'

  ತಮಿಳು ನಿರ್ದೇಶಕನ ಜೊತೆ ಮಾಡ್ತಿರುವ ಚಿತ್ರ ಬೈರಾಗಿ. ಇದು ಶಿವಣ್ಣನ 123ನೇ ಸಿನಿಮಾ. ಬಹುತೇಕ ಚಿತ್ರೀಕರಣ ಪೂರ್ಣಗೊಂಡಿದೆ. ಕೃಷ್ಣ ಸಾರ್ಥಕ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಸೆಂಚುರಿ ಸ್ಟಾರ್ ಜೊತೆ ಪ್ರಮುಖ ಪಾತ್ರದಲ್ಲಿ ಧನಂಜಯ್ ಮತ್ತು 'ದಿಯಾ' ಖ್ಯಾತಿಯ ಪೃಥ್ವಿ ಅಂಬರ್ ನಟಿಸುತ್ತಿದ್ದಾರೆ.

  124ನೇ ಸಿನಿಮಾ 'ನೀ ಸಿಗೋವರೆಗೂ'

  124ನೇ ಸಿನಿಮಾ 'ನೀ ಸಿಗೋವರೆಗೂ'

  ಆಗಸ್ಟ್ 17 ರಂದು ಶಿವರಾಜ್ ಕುಮಾರ್ ನಟನೆಯ 124ನೇ ಸಿನಿಮಾ ಅಧಿಕೃತವಾಗಿ ಸೆಟ್ಟೇರಿತ್ತು. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಶುಭಹಾರೈಸಿದರು. 'ನೀ ಸಿಗೋವರೆಗೂ' ಸಿನಿಮಾದಲ್ಲಿ ಶಿವರಾಜ್ ಕುಮಾರ್ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತೆಲುಗು ನಟಿ ಮೆಹ್ರೀನ್ ಫಿರ್ಝಾದಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಚರಣ್ ರಾಜ್ ಸಂಗೀತ ನಿರ್ದೇಶಿಸುತ್ತಿದ್ದಾರೆ. ರಾಮ್ ಧುಲಿಪುಡಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ನಾರಾಲ ಶ್ರೀನಿವಾಸ ರೆಡ್ಡಿ, ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ, ಕುಡುಪುಡಿ ವಿಜಯಕುಮಾರ್ ಬಂಡವಾಳ ಹಾಕುತ್ತಿದ್ದಾರೆ.

  126-127ನೇ ಚಿತ್ರಗಳ ವಿವರ

  126-127ನೇ ಚಿತ್ರಗಳ ವಿವರ

  ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದಲ್ಲಿ ಶಿವಣ್ಣ ನಟಿಸುತ್ತಿದ್ದು, ಈ ಚಿತ್ರಕ್ಕೆ ಜಯಣ್ಣ-ಬೋಗೇಂದ್ರ ಬಂಡವಾಳ ಹಾಕ್ತಿದ್ದಾರೆ. ಇದು 126ನೇ ಸಿನಿಮಾ ಎನ್ನುವುದು ವಿಶೇಷ. ಲೋಹಿತ್ ಎಚ್ ನಿರ್ದೇಶನದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ. ಇದು ಶಿವಣ್ಣನ 127ನೇ ಸಿನಿಮಾ. ಈ ಪ್ರಾಜೆಕ್ಟ್‌ಗೆ 'ಸತ್ಯಮಂಗಳ' ಎಂದು ಹೆಸರಿಡಲಾಗಿದೆ.

  ಸೆಪ್ಟೆಂಬರ್ 10ಕ್ಕೆ ಭಜರಂಗಿ 2?

  ಸೆಪ್ಟೆಂಬರ್ 10ಕ್ಕೆ ಭಜರಂಗಿ 2?

  ಹರ್ಷ ನಿರ್ದೇಶನದಲ್ಲಿ ತಯಾರಾಗಿರುವ 'ಭಜರಂಗಿ-2 ಸಿನಿಮಾ ಸೆಪ್ಟೆಂಬರ್ 10ಕ್ಕೆ ಚಿತ್ರಮಂದಿರಕ್ಕೆ ಬರಲಿದೆ ಎಂದು ಹೇಳಲಾಗಿದೆ. ಸೆಪ್ಟೆಂಬರ್ 1 ರಂದು ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದ್ದು, ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಿನಿಮಾ ಪ್ರೇಕ್ಷಕರೆದುರು ಬರಲಿದೆ.

  English summary
  Dr Shiva rajkumar's First Home production movie 'Vedha' songs recording pooja done today at Arjun Janya studio.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X