For Quick Alerts
  ALLOW NOTIFICATIONS  
  For Daily Alerts

  ಬೆಕ್ಕಿನ ಕಣ್ಣು ಶಿವಣ್ಣ.. ಡಿಫ್‌ರೆಂಟ್ ಹೇರ್‌ ಸ್ಟೈಲ್.. 'ಘೋಸ್ಟ್' ಕಥೆ ಏನು?

  |

  'ಬೀರ್‌ಬಲ್', 'ಶ್ರೀನಿವಾಸ ಕಲ್ಯಾಣ', 'ಓಲ್ಡ್ ಮಾಂಕ್' ಖ್ಯಾತಿಯ ನಿರ್ದೇಶಕ, ನಟ ಶ್ರೀನಿ ನಿರ್ದೇಶನದ 5ನೇ ಸಿನಿಮಾ 'ಘೋಸ್ಟ್'. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಈ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದಾರೆ. ಬಹಳ ಹಿಂದೆಯೇ ಅನೌನ್ಸ್ ಆಗಿದ್ದ ಸಿನಿಮಾ ಇಂದು(ಅಕ್ಟೋಬರ್ 12) ಸೆಟ್ಟೇರಿದೆ. ಟೈಟಲ್‌ನಿಂದಲೇ ಕುತೂಹಲ ಕೆರಳಿಸಿರೋ ಈ ಸಿನಿಮಾದಲ್ಲಿ ಘಟಾನುಘಟಿ ಕಲಾವಿದರು ನಟಿಸ್ತಿದ್ದಾರೆ.

  ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಸಂದೇಶ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ, ಈ ಚಿತ್ರಕ್ಕೆ ಸಂದೇಶ್ ಎನ್ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ಮಿನರ್ವ ಮಿಲ್ ನಲ್ಲಿ ನೆರವೇರಿತು. ಚಿತ್ರದ ಮೊದಲ ಸನ್ನಿವೇಶಕ್ಕೆ ಗೀತಾ ಶಿವರಾಜಕುಮಾರ್ ಆರಂಭ ಫಲಕ ತೋರಿದರು. ಬೃಂದಾ ಜಯರಾಂ ಕ್ಯಾಮೆರಾ ಚಾಲನೆ ಮಾಡಿದರು. ಚಿತ್ರತಂಡದ ಸದಸ್ಯರು ಹಾಗೂ ಗಣ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.

  ಬಹುಕೋಟಿ ವೆಚ್ಚದ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್?ಬಹುಕೋಟಿ ವೆಚ್ಚದ ತಮಿಳಿನ 'ಕ್ಯಾಪ್ಟನ್ ಮಿಲ್ಲರ್' ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್?

  ಬಹಳ ಅದ್ಧೂರಿಯಾಗಿ 'ಘೋಸ್ಟ್' ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಸಂಭಾಷಣೆ ಜವಾಬ್ದಾರಿಯನ್ನು ಮಾಸ್ತಿ ಹಾಗೂ ಪ್ರಸನ್ನ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ ಈ ಚಿತ್ರಕ್ಕಿದೆ.

  15 ಸೆಟ್‌ಗಳನ್ನು ಸಿನಿಮಾ ಚಿತ್ರೀಕರಣ

  15 ಸೆಟ್‌ಗಳನ್ನು ಸಿನಿಮಾ ಚಿತ್ರೀಕರಣ

  ವಿಭಿನ್ನ ಕಥಾಹಂದರ ಹೊಂದಿರುವ 'ಘೋಸ್ಟ್' ಚಿತ್ರಕ್ಕೆ ಅದ್ದೂರಿ ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಮಿನರ್ವ ಮಿಲ್‌ನಲ್ಲಿ 15 ಬೇರೆ ಬೇರೆ ತರಹದ ಸೆಟ್‌ಗಳನ್ನು ಕಲಾ ನಿರ್ದೇಶಕ ಮೋಹನ್ ಬಿ ಕೆರೆ ನಿರ್ಮಿಸಿದ್ದಾರೆ. ಇನ್ನು ಮೈಸೂರಿನಲ್ಲಿ 4 ತರಹದ ಸೆಟ್‌ಗಳು ನಿರ್ಮಾಣವಾಗಿದೆ. ಮಿನರ್ವ ಮಿಲ್‌ನಲ್ಲಿ ನಿರ್ಮಿಸಲಾಗಿರುವ ಜೈಲ್ ಸೆಟ್‌ನಲ್ಲೇ 24 ದಿನಗಳ ಚಿತ್ರೀಕರಣ ನಡೆಯಲಿದೆ.

  ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?

  3 ಕೋಟಿ ವೆಚ್ಚದಲ್ಲಿ ಸೆಟ್‌ಗಳ ನಿರ್ಮಾಣ

  3 ಕೋಟಿ ವೆಚ್ಚದಲ್ಲಿ ಸೆಟ್‌ಗಳ ನಿರ್ಮಾಣ

  ಬಹಳ ಅದ್ಧೂರಿಯಾಗಿ 'ಘೋಸ್ಟ್' ಸಿನಿಮಾ ನಿರ್ಮಾಣವಾಗಲಿದೆ. ಸದ್ಯ 3 ಕೋಟಿ ವೆಚ್ಚದಲ್ಲಿ 19 ಸೆಟ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಶಿವಣ್ಣನನ್ನು ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನ ನಡೀತಿದೆ. ಬಹಳ ವರ್ಷಗಳಿಂದ ಶಿವಣ್ಣನ ಜೊತೆ ಸಿನಿಮಾ ಮಾಡುವ ಆಸೆ ಶ್ರೀನಿಗೆ ಇತ್ತು. ಕೊನೆಗೂ ಆ ಆಸೆ ಈಡೇರುತ್ತಿದೆ.

  48 ಗಂಟೆಗಳಲ್ಲಿ ನಡೆಯುವ ಕಥೆ

  48 ಗಂಟೆಗಳಲ್ಲಿ ನಡೆಯುವ ಕಥೆ

  'ಘೋಸ್ಟ್' ಚಿತ್ರದಲ್ಲಿ ಶಿವರಾಜಕುಮಾರ್, ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಬಣ್ಣ ಹಚ್ಚುತ್ತಿದ್ದಾರೆ. ನಾಯಕಿ ಯಾರು ಎಂದು ಕೇಳುವಂತಿಲ್ಲ. ಯಾಕೆಂದರೆ 48 ಗಂಟೆಗಳಲ್ಲಿ ನಡೆಯುವ ಈ ಕಥೆಯಲ್ಲಿ ನಾಯಕಿ, ಡ್ಯುಯೆಟ್ ಯಾವುದು ಇರುವುದಿಲ್ಲವಂತೆ. ಆದರೆ ಮಲಯಾಳಂ ನಟ ಜಯರಾಮ್ ಪೊಲೀಸ ಆಫೀಸರ್ ರೋಲ್‌ನಲ್ಲಿ ನಟಿಸಲಿದ್ದಾರೆ.

  ಕಿಂಗ್ ಆಫ್ ಆಲ್‌ ಮಾಸಸ್ ಶಿವಣ್ಣ

  ಕಿಂಗ್ ಆಫ್ ಆಲ್‌ ಮಾಸಸ್ ಶಿವಣ್ಣ

  ಇನ್ನು 'ಘೋಸ್ಟ್' ಪೋಸ್ಟರ್‌ನಲ್ಲೇ ಕಿಂಗ್ ಆಫ್ ಆಲ್‌ ಮಾಸಸ್ ಎಂದು ಶ್ರೀನಿ ಬರೆದಿದ್ದಾರೆ. ಶಿವಣ್ಣ ಈಗಾಗಲೇ ಸಾಕಷ್ಟು ಮಾಸ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೆಲ್ಲಕ್ಕಿಂತ ಇದು ಬಹಳ ವಿಭಿನ್ನವಾದ ಸಿನಿಮಾ. ಹೊಸ ರೀತಿಯಲ್ಲಿ ಸೆಂಚುರಿ ಸ್ಟಾರ್‌ನ ತೋರಿಸೋದು ಅಷ್ಟೇ ಅಲ್ಲ, ಸಿನಿಮಾ ಆಕ್ಷನ್ ಸೀನ್ಸ್‌ ಕೂಡ ಸಖತ್ ಮಜವಾಗಿರುತ್ತದೆ ಎಂದು ಹೇಳಲಾಗ್ತಿದೆ. ಪೋಸ್ಟರ್‌ನಲ್ಲಿ ಶಿವಣ್ಣನ ಲುಕ್‌ ಕೂಡ ಅಭಿಮಾನಿಗಳ ಮನಗೆದ್ದಿದೆ.

  English summary
  Shivarajkumar And Director Srini Combination Ghost Movie Officially Launched. Know More.
  Wednesday, October 12, 2022, 17:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X