Tagaru: ಪೊಗರಿನ 'ಟಗರು' ಆರ್ಭಟಕ್ಕೆ 5 ವರ್ಷ: ಶಿವಣ್ಣ- ಸೂರಿ ಜೋಡಿ ಸಿನಿಮಾ ಬರೆದ ದಾಖಲೆಗಳೆಷ್ಟು?

ಬ್ಲಾಕ್‌ಬಸ್ಟರ್ 'ಟಗರು' ಸಿನಿಮಾ 5 ವರ್ಷ ಪೂರೈಸಿದೆ. ಇತ್ತೀಚಿನ ವರ್ಷಗಳಲ್ಲಿ ಶಿವಣ್ಣ ಸಿನಿಕರಿಯರ್‌ನಲ್ಲೇ ದೊಡ್ಡ ಹಿಟ್ ಸಿನಿಮಾ ಇದು. ಸುಕ್ಕಾ ಸೂರಿ - ಶಿವಣ್ಣ ಕಾಂಬಿನೇಷನ್‌ನಲ್ಲಿ ಬಂದಿದ್ದ ಸಿನಿಮಾ ಅಭಿಮಾನಿಗಳ ಮನಗೆದ್ದಿತ್ತು. ಬರೀ ಶಿವಣ್ಣ ಮಾತ್ರ ಅಲ್ಲ ಡಾಲಿ, ಚಿಟ್ಟೆ ಆಗಿ ಕಾಣಿಸಿಕೊಂಡಿದ್ದ ಧನಂಜಯ ಹಾಗೂ ವಸಿಷ್ಠ ಸಿಂಹಗೂ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು.

ಬಹಳ ವಿಭಿನ್ನವಾಗಿ ಈ ಪೊಲೀಸ್ ಡ್ರಾಮಾ ಚಿತ್ರವನ್ನು ಕಟ್ಟಿಕೊಟ್ಟು ಚಿತ್ರತಂಡ ಗೆದ್ದಿತ್ತು. ಸೂರಿ ಟೇಕಿಂಗ್, ಶಿವಣ್ಣ ಆಕ್ಟಿಂಗ್, ಚರಣ್‌ ರಾಜ್ ಮ್ಯೂಸಿಕ್ ಕನ್ನಡ ಸಿನಿರಸಿಕರು ಇನ್ನು ಮರೆತ್ತಿಲ್ಲ. ಸೆಂಚುರಿ ಸ್ಟಾರ್ ಅಭಿಮಾನಿಗಳಂತೂ ಇನ್ನು ಈ ಕಲ್ಟ್ ಕ್ಲಾಸಿಕ್ ಸಿನಿಮಾ ಗುಂಗಿನಿಂದ ಹೊರಬಂದಿಲ್ಲ. ಕೆ. ಪಿ ಶ್ರೀಕಾಂತ್ ನಿರ್ಮಾಣದ ಈ ಚಿತ್ರದಲ್ಲಿ ಜಾಕಿ ಭಾವನಾ ಹಾಗೂ ಮಾನ್ವಿತಾ ನಾಯಕಿಯರಾಗಿ ನಟಿಸಿದ್ದರು. ಸಿನಿಮಾ ಕ್ಲೈಮ್ಯಾಕ್ಸ್‌ ಸೀಕ್ವೆಲ್ ಬಗ್ಗೆ ಸುಳಿವು ಸಿಕ್ಕಿತ್ತು. ಸಣ್ಣ ಟೀಸರ್ ಕಟ್ ಮಾಡಿ ಸೂರಿ ಕುತೂಹಲವನ್ನು ದುಪ್ಪಟ್ಟಾಗಿಸಿದ್ದರು.

ಅಭಿಮಾನಿಗಳು 'ಟಗರು' ಚಿತ್ರಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. 'KGF'ಗೂ ಮೊದ್ಲೆ 'ಟಗರು' ಸ್ಯಾಂಡಲ್‌ವುಡ್‌ನಲ್ಲಿ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ಶುರುಮಾಡಿತ್ತು ಅಂದರೆ ತಪ್ಪಾಗಲ್ಲ.

ಪ್ರತಿಯೊಂದು ಪಾತ್ರಕ್ಕೂ ಮಹತ್ವ ಕೊಟ್ಟು ಸೂರಿ ಟಗರು ಸಿನಿಮಾ ಕತೆ, ಚಿತ್ರಕಥೆ ಸಿದ್ಧಪಡಿಸಿದ್ದರು. ಇದು ರೌಡಿಗಳು ಹಾಗೂ ಪೊಲೀಸ್ ಇಲಾಖೆ ನಡುವಿನ ಸಂಘರ್ಷದ ಕಥೆ. ಆದರೆ ಅದನ್ನು ಡಿಸೈನ್ ಮಾಡಿದ್ದ ರೀತಿ ಹೊಸತಾಗಿತ್ತು. ಪ್ರತಿಯೊಂದು ಪಾತ್ರವನ್ನು ಸೂರಿ ಡಿಸೈನ್ ಮಾಡಿದ್ದ ರೀತಿ ಮಜವಾಗಿತ್ತು. ಇನ್ನು ಸ್ಕ್ರೀನ್‌ಪ್ಲೇ, ಡೈರೆಕ್ಷನ್ ನೆಕ್ಟ್ಸ್ ಲೆವೆಲ್ ಅಂತ್ಲೇ ಹೇಳಬೇಕು. ಶಿವಣ್ಣನ ಜೊತೆಗೆ ಡಾಲಿ, ವಸಿಷ್ಠ ಅಭಿನಯವೂ ಚಿತ್ರಕ್ಕೆ ಪ್ಲಸ್ ಆಗಿತ್ತು. ಚರಣ್ ರಾಜ್ ಬಿಜಿಎಂ, ಸಾಂಗ್ಸ್ ಅರ್ಧ ಚಿತ್ರವನ್ನು ಗೆಲ್ಲಿಸಿಬಿಟ್ಟಿತ್ತು. ಮಾಸ್ತಿ- ಸೂರಿ ಸೇರಿ ಜಬರ್ದಸ್ತ್ ಡೈಲಾಗ್ಸ್ ಬರೆದಿದ್ದರು.

15 ಥಿಯೇಟರ್‌ಗಳಲ್ಲಿ 100 ಡೇಸ್

15 ಥಿಯೇಟರ್‌ಗಳಲ್ಲಿ 100 ಡೇಸ್

ಇತ್ತೀಚಿನ ವರ್ಷಗಳಲ್ಲಿ ಶತದಿನೋತ್ಸವ ಎನ್ನುವ ಕಾನ್ಸೆಪ್ಟೇ ಹೊರಟು ಹೋಗಿದೆ. ಆದರೆ 'ಟಗರು' ಸಿನಿಮಾ ರಾಜ್ಯಾದ್ಯಂತ 15 ಥಿಯೇಟರ್‌ಗಳಲ್ಲಿ 100 ದಿನ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಮೈಸೂರಿನ ಶಾಂತಲಾ ಥಿಯೇಟರ್‌ನಲ್ಲಿ ಬರೋಬ್ಬರಿ 25 ವಾರ ಪ್ರದರ್ಶನ ಕಂಡು ಸಂಚಲನ ಸೃಷ್ಟಿಸಿತ್ತು. 'ಟಗರು' ಟೈಟಲ್ ಸಾಂಗ್, ಅದಕ್ಕೆ ಶಿವಣ್ಣ ಸ್ಟೆಪ್ಸ್ ಸಿಂಪ್ಲಿ ಸೂಪರ್. ಇವತ್ತಿಗೂ ಆ ಸಾಂಗ್, ಬಿಜಿಎಂ ಸಿನಿರಸಿಕರನ್ನು ಹಂಟ್ ಮಾಡುತ್ತಲೇ ಇದೆ.

50 ಕೋಟಿಗೂ ಅಧಿಕ ಕಲೆಕ್ಷನ್

50 ಕೋಟಿಗೂ ಅಧಿಕ ಕಲೆಕ್ಷನ್

ಇಂಗ್ಲೆಂಡ್ ಕ್ರಿಕೆಟಿಗ ಓವೈಸ್ ಶಾ ಕೂಡ 'ಟಗರು' ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಸಿನಿಮಾ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸಿನಿಮಾ ರಿಲೀಸ್ ಆಗುವವರೆಗೂ ಮಾಮೂಲಿ ಕಮರ್ಷಿಯಲ್ ಸಿನಿಮಾ ಅಂತ್ಲೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಸಿನಿಮಾ ನೋಡ ನೋಡುತ್ತಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಕೋಟಿ ಕೋಟಿ ಕೊಳ್ಳೆ ಹೊಡೆದು ಎಲ್ಲರ ಹುಬ್ಬೇರಿಸಿತ್ತು.

'ಟಗರು' ಸೀಕ್ವೆಲ್‌ ಯಾವಾಗ?

'ಟಗರು' ಸೀಕ್ವೆಲ್‌ ಯಾವಾಗ?

ಶಿವರಾಜ್‌ಕುಮಾರ್ ಹಾಗೂ ಸೂರಿ ಜೊತೆಯಾಗಿ ಮತ್ತೆ ಸಿನಿಮಾ ಮಾಡಬೇಕು ಎನ್ನುವುದು ಅಭಿಮಾನಿಗಳ ಆಸೆ. 'ಟಗರು' ಕ್ಲೈಮ್ಯಾಕ್ಸ್‌ನಲ್ಲಿ ಸಿನಿಮಾ ಕಥೆಯನ್ನು ಮುಂದುವರೆಸುವುದಾಗಿ ಹೇಳಲಾಗಿತ್ತು. ಸದ್ಯ ಸೀಕ್ವೆಲ್ ಸಿನಿಮಾಗಳ ಟ್ರೆಂಡ್ ನಡೀತಿದ್ದು ಅಭಿಮಾನಿಗಳು 'ಟಗರು' - 2 ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಆದಷ್ಟು ಬೇಗ ಶಿವಣ್ಣ- ಸೂರಿ ಕೈ ಜೋಡಿಸಿ ಮತ್ತೆ ಪೊಗರಿನ ಟಗರು ಕಥೆ ಹೇಳಲಿ ಎಂದು ಬಯಸುತ್ತಿದ್ದಾರೆ.

More from Filmibeat

English summary
Shivarajkumar and Duniya Suri's Blockbuster Tagaru Completes 5 Years of Release. Fans eagerly Waiting For Cult Classic movie sequel. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X