Exclusive: ಒಂದೇ ಚಿತ್ರದಲ್ಲಿ ಶಿವಣ್ಣ- ದುನಿಯಾ ವಿಜಯ್; ಡೈರೆಕ್ಟರ್ ಯಾರು?

ಕನ್ನಡದಲ್ಲಿ ಚಿತ್ರರಂಗದಲ್ಲಿ ಆಗೊಮ್ಮೆ ಈಗೊಮ್ಮೆ ಮಲ್ಟಿಸ್ಟಾರರ್ ಸಿನಿಮಾಗಳು ಬರುತ್ತವೆ. ಆದರೆ ಇಂತಹ ಪ್ರಯತ್ನ ಅಷ್ಟು ಸುಲಭ ಅಲ್ಲ. ದಕ್ಷ ನಿರ್ದೇಶಕರು ಇದ್ದಾಗ ಮಾತ್ರ ಇದು ಸಾಧ್ಯ. ಸದ್ಯ ಶಿವರಾಜ್‌ಕುಮಾರ್, ದುನಿಯಾ ವಿಜಯ್ ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ಚರ್ಚೆ ಶುರುವಾಗಿದೆ.

ಶಿವಣ್ಣ ಹಾಗೂ ದುನಿಯಾ ವಿಜಯ್ ಇಬ್ಬರೂ ಮಾಸ್ ಫಾಲೋಯಿಂಗ್ ಇರುವ ನಟರು. 'ಜೋಗಿ' ಚಿತ್ರದಲ್ಲಿ ದುನಿಯಾ ವಿಜಯ್ ಸಣ್ಣ ಝಲಕ್‌ನಲ್ಲಿ ಶಿವಣ್ಣ ಎದುರು ವಿಲನ್ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಹೀರೊ ಆಗಿ ಗೆದ್ದರು. ಇದೀಗ ಶಿವಣ್ಣ ಹಾಗೂ ದುನಿಯಾ ವಿಜಯ್ ಒಂದೇ ಚಿತ್ರದಲ್ಲಿ ನಟಿಸುತ್ತಾರೆ ಎನ್ನಲಾಗ್ತಿದ್ದು ದುನಿಯಾ ಸೂರಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಬಗ್ಗೆ ಮಾತುಕತೆ ನಡೆಯುತ್ತಿದೆ.

Shivarajkumar and Duniya vijay multistarrer in Discussion

ಜಯಣ್ಣ, ಭೋಗೇಂದ್ರ ಈ ಮಲ್ಟಿಸ್ಟಾರರ್ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಕಳೆದ ವರ್ಷ ಸೂರಿ ನಿರ್ದೇಶನದಲ್ಲಿ 'ಬ್ಯಾಡ್ ಮ್ಯಾನರ್ಸ್' ಸಿನಿಮಾ ಬಂದಿತ್ತು. ಜಯಣ್ಣ ಫಿಲ್ಮ್ಸ್ ಬ್ಯಾನರ್‌ನಲ್ಲೇ ಸಿನಿಮಾ ತೆರೆಗೆ ಬಂದಿತ್ತು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿತ್ತು. ಈ ಸಿನಿಮಾ ಬಿಡುಗಡೆಗೂ ಮುನ್ನವೇ ಸೂರಿ ನಿರ್ದೇಶನದಲ್ಲಿ ವಿರಾಟ್ ಹೀರೊ ಆಗಿ ಒಂದು ಸಿನಿಮಾ ಘೋಷಣೆ ಆಗಿತ್ತು.

ಅಂದಹಾಗೆ ಶಿವಣ್ಣ, ದುನಿಯಾ ವಿಜಯ್ ಹಾಗೂ ಸೂರಿ ಒಟ್ಟಾಗುತ್ತಿರುವುದು ಬೇರೆ ಚಿತ್ರಕ್ಕಾಗಿ ಅಲ್ಲ. ಅದು ವಿರಾಟ್ ನಟಿಸುವ ಸಿನಿಮಾ ಎನ್ನಲಾಗುತ್ತಿದೆ. ಸೂರಿ ನಿರ್ದೇಶನದಲ್ಲಿ ವಿರಾಟ್ ನಟಿಸಲಿರುವ ಚಿತ್ರದಲ್ಲೇ ಶಿವಣ್ಣ ಹಾಗೂ ದುನಿಯಾ ವಿಜಯ್ ಕೂಡ ನಟಿಸುವ ಸಾಧ್ಯತೆಯಿದೆ ಎಂದು ಜಯಣ್ಣ ಫಿಲ್ಮಿಬೀಟ್‌ಗೆ ಮಾಹಿತಿ ನೀಡಿದ್ದಾರೆ. "ಇನ್ನು ಈ ವಿಚಾರ ಮಾತುಕತೆ ಹಂತದಲ್ಲಿದೆ. ಯಾವುದು ಫೈನಲ್ ಆಗಿಲ್ಲ, ಮುಂದೆ ನೋಡಬೇಕು, ಎಲ್ಲಾ ಸೆಟ್ ಆದರೆ ಮಲ್ಟಿಸ್ಟಾರರ್ ಸಿನಿಮಾ ಆಗುತ್ತದೆ ಎಂದು ಜಯಣ್ಣ ಹೇಳಿದ್ದಾರೆ.

ನಟ ಶಿವರಾಜ್‌ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಲು ಒಲವು ತೋರಿದ್ದಾರೆ. ಇನ್ನು ಲೋಕಸಭಾ ಚುನಾವಣೆಯಲ್ಲಿ ಪತ್ನಿ ಗೀತಾ ಪರ ಪ್ರಚಾರವನ್ನು ನಡೆಸುತ್ತಿದ್ದಾರೆ. 'ಕರಟಕ ದಮನಕ' ಬಳಿಕ ಅರ್ಜುನ್ ಜನ್ಯಾ ನಿರ್ದೇಶನ್ '45' ಚಿತ್ರದಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದಾರೆ.

Shivarajkumar and Duniya vijay multistarrer in Discussion

ಮತ್ತೊಂದು ಕಡೆ ದುನಿಯಾ ವಿಜಯ್ 'ಭೀಮ'ನಾಗಿ ಅಬ್ಬರಿಸಲು ಸಿದ್ಧತೆ ನಡೆಸಿದ್ದಾರೆ. 'ಸಲಗ' ಬಳಿಕ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿ ನಟಿಸಿದ್ದಾರೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ವರ್ಕ್ ಚಾಲ್ತಿಯಲ್ಲಿದೆ. ಚುನಾವಣೆ ಬಳಿಕ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ. ಇನ್ನು ವಿರಾಟ್ ನಟನೆಯ 'ರಾಯಲ್' ಸಿನಿಮಾ ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ದಿನಕರ್ ತೂಗುದೀಪ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ಬಳಿಕ ಸೂರಿ ಯಾವುದೇ ಸಿನಿಮಾ ಕೈಗೆತ್ತಿಕೊಂಡಿಲ್ಲ. 'ಪಾಪ್‌ಕಾರ್ನ್ ಮಂಕಿಟೈಗರ್' ಬಳಿಕ ಬಹಳ ಗ್ಯಾಪ್ ಆಗಿತ್ತು. ಅಭಿಮಾನಿಗಳು ಸೂರಿ ಹೆಚ್ಚು ಹೆಚ್ಚು ಸಿನಿಮಾ ಮಾಡಬೇಕು ಎಂದು ಬಯಸುತ್ತಾರೆ. ಇತ್ತೀಚೆಗೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಜಾಕಿ' ಸಿನಿಮಾ ರೀ- ರಿಲೀಸ್ ಆಗಿ ಸದ್ದು ಮಾಡಿತ್ತು. ಸೂರಿ ನಿರ್ದೇಶನವನ್ನು ಸಿನಿರಸಿಕರು ಮತ್ತೊಮ್ಮೆ ಕೊಂಡಾಡಿದ್ದರು. 'ಬ್ಯಾಡ್ ಮ್ಯಾನರ್ಸ್' ನಂತರ ಈಗ ಮಲ್ಟಿಸ್ಟಾರರ್ ಚಿತ್ರಕ್ಕೆ ಮುಂದಾಗಿದ್ದಾರೆ.

ಇನ್ನು ಶಿವಣ್ಣ ಹಾಗೂ ದುನಿಯಾ ವಿಜಯ್ ಇಬ್ಬರೂ ಸೂರಿ ನಿರ್ದೇಶನದಲ್ಲಿ ನಟಿಸಿದ್ದಾರೆ. 'ದುನಿಯಾ' ಹಾಗೂ 'ಜಂಗ್ಲಿ' ಸಿನಿಮಾಗಳಲ್ಲಿ ವಿಜಿ ಕಾಣಿಸಿಕೊಂಡಿದ್ದರು. ಸೂರಿ ನಿರ್ದೇಶನದ 'ಕಡ್ಡಿಪುಡಿ' ಹಾಗೂ 'ಟಗರು' ಚಿತ್ರಗಳಲ್ಲಿ ಶಿವಣ್ಣ ನಟಿಸಿ ಗೆದ್ದಿದ್ದರು. ಒಟ್ನಲ್ಲಿ ಸೆಟ್ಟೇರುವ ಮುನ್ನವೇ ಈ ಕ್ರೇಜಿ ಕಾಂಬಿನೇಷನ್ ಸಿನಿಮಾ ಕುತೂಹಲ ಮೂಡಿಸುತ್ತಿದೆ.

More from Filmibeat

English summary
Shivarajkumar to do a multistarrer again?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X