For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ-ಗೀತಾ 36ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ

  |

  ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಇಂದು (ಮೇ 19 ) ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ. 1986 ಮೇ 19 ರಂದು ಶಿವರಾಜ್ ಕುಮಾರ್ ಹಾಗೂ ಗೀತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೂ ಎಷ್ಟೊಂದು ಏಳು ಬೀಳುಗಳು, ಸಂತೋಷ, ದುಃಖ ಎಲ್ಲವನ್ನು ಸಮನಾಗಿ ಸ್ವೀಕರಿಸುತ್ತಾ ಸುಂದರವಾಗಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೆ ಶಿವಣ್ಣ ಹಾಗೂ ಗೀತಾ ವಿವಾಹವಾಗಿ 36 ವರ್ಷಗಳು ಪೂರೈಸಿವೆ. ಸದ್ಯ ಇಂದು ಶಿವಣ್ಣ ಹಾಗೂ ಗೀತಾ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ.

  ಶಿವರಾಜ್ ಕುಮಾರ್‌ ಸಹೋದರ ರಾಘವೇಂದ್ರ ರಾಜಕುಮಾರ್ ಅಣ್ಣನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶಿವರಾಜ್‌ಕುಮಾರ್‌ ಹಾಗೂ ಗೀತಾರವರ ಮದುವೆಯ ಫೋಟೊವನ್ನು ಹಂಚಿಕೊಂಡು "ದೇವರು ಒಳ್ಳೆಯದು ಮಾಡಲಿ." ಎಂದು ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಿದ್ದಾರೆ.

  125 ಸಿನಿಮಾದ ಬಳಿಕ ಶಿವಣ್ಣ ಸೂಪರ್ ಹೀರೊ: ಸೆಂಚುರಿಸ್ಟಾರ್ ಲುಕ್ ಹೇಗಿರುತ್ತೆ?125 ಸಿನಿಮಾದ ಬಳಿಕ ಶಿವಣ್ಣ ಸೂಪರ್ ಹೀರೊ: ಸೆಂಚುರಿಸ್ಟಾರ್ ಲುಕ್ ಹೇಗಿರುತ್ತೆ?

  ಇತ್ತೀಚಿನ ದಿನಗಳಲ್ಲಿ ಮದುವೆಯಾದ ಕೆಲವೇ ವರ್ಷಗಳಲ್ಲಿ ಡಿವೋರ್ಸ್ ತೆಗೆದುಕೊಳ್ಳುವ ಎಷ್ಟೋ ಜೋಡಿಗಳನ್ನು ನೋಡಿರುತ್ತೇವೆ. ಆದರೆ, ಇದೂವರೆಗೂ ತಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಬೀಳದಂತೆ ಒಂದಾಗಿ ಒಟ್ಟಾಗಿ ಕೂಡಿ ಬಾಳುತ್ತಿರುವ ಶಿವಣ್ಣ ಮತ್ತು ಗೀತಾರವರ ದಾಂಪತ್ಯ ಜೀವನ ಎಲ್ಲರಿಗೂ ಸ್ಫೂರ್ತಿಯಾಗಿದೆ.

  ಪ್ರತಿ ವರ್ಷ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಕಳೆದೆರಡು ವರ್ಷದಿಂದ ಕೊರೊನಾ ಕಾರಣಕ್ಕೆ ಸರಳವಾಗಿಯೇ ಕುಟುಂಬಸ್ಥರ ಜೊತೆ ಆಚರಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಈ ಬಾರಿ ಕೂಡ ಸರಳವಾಗಿಯೇ ಆಚರಿಸಿಕೊಂಡಿದ್ದಾರೆ. ಶಿವಣ್ಣ ಹಾಗೂ ಗೀತಾಗೆ ಕುಟುಂಬಸ್ಥರು ಬಂಧುಗಳು ಹಾಗೂ ಅಭಿಮಾನಿ ದೇವರುಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯದ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಇನ್ನು ನೂರಾರು ವರ್ಷ ಹೀಗೆ ಖುಷಿಯಾಗಿರಿ ಎಂದು ಹಾರೈಸುತ್ತಿದ್ದಾರೆ.

  ಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ

  ಗೀತಾ ಶಿವರಾಜ್ ಕುಮಾರ್‌ ಅಣ್ಣಾವ್ರ ಸೊಸೆಯಾಗಿ ಬಂದ ದಿನಗಳಿಂದ ಇಲ್ಲಿಯವರೆಗೂ ಸಂಸಾರ ಹೊರತು ಪಡಿಸಿದಂತೆ ಶಿವಣ್ಣನಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳಲ್ಲೂ ಬೆಂಗಾವಲಾಗಿ ನಿಂತಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್‌ ವಿಧಿವಶರಾದ ಮೇಲೆ ಕುಟುಂಬದ ಹಿರಿಯರಾಗಿ ಶಿವಣ್ಣ ಹಾಗೂ ಗೀತಾ ಮುಂದೆ ನಿಂತು ನೋಡಿಕೊಂಡಿದ್ದಾರೆ. ಅದರಲ್ಲೂ ಶಕ್ತಿ ಧಾಮ ಸಂಸ್ಥೆಯ ಸಂಪೂರ್ಣ ಉಸ್ತುವಾರಿಯನ್ನು ಗೀತಾ ಶಿವರಾಜ್‌ ಕುಮಾರ್ ಹೊತ್ತುಕೊಂಡಿದ್ದರು. ಇದಕ್ಕೆ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಸಾಥ್ ನೀಡಿದ್ದರು. ಆದರೆ, ಅಪ್ಪು ಅಕಾಲಿಕ ನಿಧನ ಹೊಂದಿದ ಬಳಿಕ ಮತ್ತೆ ಶಿವಣ್ಣ ಹಾಗೂ ಗೀತಾರವರೇ ಈ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

  Shivarajkumar and Geetha Celebrating Their 36th Wedding Anniversary

  ಇಂದು (ಮೇ 19) ವಿವಾಹ ವಾರ್ಷಿಕೋತ್ಸವವಾಗಿರುವ ಹಿನ್ನೆಲೆ ಶಿವಣ್ಣ ಹಾಗೂ ಗೀತಾ ಮೈಸೂರಿನ ಶಕ್ತಿಧಾಮಕ್ಕೆ ಹೋಗುವ ಸಾಧ್ಯತೆ ಇದೆ. ಅಲ್ಲಿಯೇ ಮಕ್ಕಳೊಂದಿಗೆ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುವ ಸಾಧ್ಯತೆ ಇದೆ.

  ಶಿವಣ್ಣನ 'ಬೈರಾಗಿ' ಲುಕ್‌ಗೆ ಫ್ಯಾನ್ಸ್ ಬೇಸರ!ಶಿವಣ್ಣನ 'ಬೈರಾಗಿ' ಲುಕ್‌ಗೆ ಫ್ಯಾನ್ಸ್ ಬೇಸರ!

  English summary
  Shivarajkumar and Geetha Celebrating Their 36th Wedding Anniversary, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X