For Quick Alerts
  ALLOW NOTIFICATIONS  
  For Daily Alerts

  ಹಲವು ವರ್ಷದ ನಂತರ ಒಟ್ಟಿಗೆ ಬರ್ತಿದ್ದಾರೆ 'ಕೋದಂಡರಾಮ'

  |

  ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಕೋದಂಡ ರಾಮ' ಸಿನಿಮಾ ಬಂದು ಸುಮಾರು 17 ವರ್ಷ ಕಳೆದಿದೆ. ಅದಾದ ಬಳಿಕ ಶಿವಣ್ಣ ಮತ್ತು ರವಿಚಂದ್ರನ್ ಮತ್ತೆ ಒಟ್ಟಿಗೆ ಅಭಿನಯಿಸಿಲ್ಲ.

  ಅದ್ಯಾವಾಗ ಮತ್ತೆ ಕೋದಂಡ ರಾಮ ಒಂದಾಗ್ತಾರೆ ಎಂಬ ಕುತೂಹಲ ಈಗಲೂ ಅಭಿಮಾನಿಗಳನ್ನ ಕಾಡ್ತಿದೆ. ಸದ್ಯಕ್ಕೆ ಅಂತಹ ದಿನ ಬಂದಿಲ್ಲವಾದರೂ, ಒಟ್ಟಿಗೆ ಇವರಿಬ್ಬರ ಸಿನಿಮಾ ತೆರೆಮೇಲೆ ಬರ್ತಿದೆ.

  ಹೌದು, ಒಂದೇ ದಿನ ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಅಭಿನಯದ ನಿರೀಕ್ಷೆಯ ಚಿತ್ರಗಳು ಚಿತ್ರಮಂದಿರಕ್ಕೆ ಲಗ್ಗೆಯಿಡ್ತಿದೆ. ಈ ಎರಡು ಚಿತ್ರಗಳು ಹಲವು ವಿಶೇಷತೆಗಳನ್ನ ಹೊಂದಿದ್ದು, ಎರಡು ಒಂದೇ ದಿನ ರಿಲೀಸ್ ಆಗ್ತಿರುವುದು ಸುದ್ದಿಯಾಗಿದೆ. ಅಷ್ಟಕ್ಕೂ, ಯಾವುದು ಆ ಎರಡು ಚಿತ್ರಗಳು?

  ಶಿವಣ್ಣನ ಕವಚ ಸಿನಿಮಾ

  ಶಿವಣ್ಣನ ಕವಚ ಸಿನಿಮಾ

  ಎಲ್ಲ ಅಂದುಕೊಂಡಂತೆ ಆಗಿದ್ದರೇ ಶಿವರಾಜ್ ಕುಮಾರ್ ಅಭಿನಯಿಸಿದ್ದ 'ಕವಚ' ಸಿನಿಮಾ ಇಷ್ಟೋತ್ತಿಗಾಗಲೇ ರಿಲೀಸ್ ಆಗಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಪದೇ ಪದೇ ಮುಂದಕ್ಕೆ ಹೋಗ್ತಿತ್ತು. ಇದೀಗ, ಅಂತಿಮವಾಗಿ ತೆರೆಗೆ ಬರಲು ಸಜ್ಜಾಗಿದ್ದು, ಏಪ್ರಿಲ್ 5ಕ್ಕೆ ರಿಲೀಸ್ ಆಗುತ್ತಿದೆ.

  ಹಲವು ವರ್ಷದ ನಂತರ ರೀಮೇಕ್

  ಹಲವು ವರ್ಷದ ನಂತರ ರೀಮೇಕ್

  2016ರಲ್ಲಿ ತೆರೆಕಂಡಿದ್ದು ಮಲಯಾಳಂನ 'ಒಪ್ಪಂ' ಚಿತ್ರದ ರೀಮೇಕ್ ಸಿನಿಮಾ ಇದಾಗಿದ್ದು, ಹಲವು ವರ್ಷದ ನಂತರ ಶಿವಣ್ಣ ರೀಮೇಕ್ ಮಾಡ್ತಿದ್ದಾರೆ. ಜಿವಿಆರ್ ವಾಸು ನಿರ್ದೇಶನದ ಈ ಚಿತ್ರದಲ್ಲಿ ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ನಟಿಸಿದ್ದಾರೆ. ಈಗಾಗಲೇ ನಾಲ್ಕೈದು ಬಾರಿ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗಿರುವ ಕವಚ ಈ ಸಲ ಪಕ್ಕಾ ಏಪ್ರಿಲ್ 5ಕ್ಕೆ ಬರ್ತಿದೆಯಂತೆ.

  ರವಿಚಂದ್ರನ್ 'ದಶರಥ'

  ರವಿಚಂದ್ರನ್ 'ದಶರಥ'

  ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ದಶರಥ ಸಿನಿಮಾನೂ ಏಪ್ರಿಲ್ 5ಕ್ಕೆ ತೆರೆಕಾಣುತ್ತಿದೆಯಂತೆ. ಎಂಎಸ್ ನಿರ್ದೇಶನದ ಈ ಚಿತ್ರದಲ್ಲಿ ಸೋನಿಯಾ ಅಗರ್ ವಾಲ್, ಮೇಘಶ್ರೀ ಕಾಣಿಸಿಕೊಂಡಿದ್ದಾರೆ. ಪ್ರಿಯಾಮಣಿ ಮುಖ್ಯ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೈಟಲ್ ಹಾಡಿಗೆ ಧ್ವನಿಯಾಗಿರುವುದು ಈ ಚಿತ್ರದ ವಿಶೇಷ.

  ಕವಚ ಮತ್ತು ದಶರಥ

  ಕವಚ ಮತ್ತು ದಶರಥ

  17 ವರ್ಷಗಳ ಹಿಂದೆ 'ಕೋದಂಡರಾಮ' ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರಮಂದಿರಕ್ಕೆ ಬಂದಿದ್ದ ರವಿ ಸರ್ ಮತ್ತು ಶಿವಣ್ಣ, ಈಗ ಬೇರೆ ಬೇರೆ ಸಿನಿಮಾಗಲ ಮೂಲಕ ಗಾಂಧಿನಗರಕ್ಕೆ ಎಂಟ್ರಿ ಕೊಡ್ತಿದ್ದಾರೆ. ಒಂದೇ ದಿನ ಇಬ್ಬರು ಸ್ಟಾರ್ ನಟರ ಅಭಿಮಾನಿಗಳಲ್ಲಿ ಹಬ್ಬ ನಡೆಯಲಿದೆ. ಶಿವಣ್ಣನ ವಜ್ರಕಾಯ ಚಿತ್ರದ ಹಾಡೊಂದರಲ್ಲಿ ರವಿಚಂದ್ರನ್ ಅತಿಥಿ ಪಾತ್ರ ನಿರ್ವಹಿಸಿದ್ದರು.

  English summary
  Kannada actor, hatrick hero shivaraj kumar's kavacha and ravichandran dasharatha movies are releasing on april 5th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X