Ghost: ಉಪೇಂದ್ರ ಆಯ್ತು.. ಈಗ ಶಿವಣ್ಣ ಅಭಿಮಾನಿಗಳ ತಲೆಗೆ ಹುಳ ಬಿಟ್ರು.. ಏನದು 'ಘೋಸ್ಟ್' OGM?

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಶ್ರೀನಿ ನಿರ್ದೇಶನದ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಡುಗಡೆಯಾಗಿದ್ದ ಟೀಸರ್ ಸೂಪರ್ ಹಿಟ್ ಆಗಿತ್ತು. ಇದೀಗ ಹೊಸ ಅಪ್‌ಡೇಟ್ ಬಂದಿದೆ.

ಹ್ಯಾಟ್ರಿಕ್ ಹೀರೊ ದೊಡ್ಡ ಅಭಿಮಾನಿ ಶ್ರೀನಿ. ತಮ್ಮ ನೆಚ್ಚಿನ ನಟನನ್ನು ಬಹಳ ವಿಭಿನ್ನವಾಗಿ ತೆರೆಮೇಲೆ ತೋರಿಸಬೇಕು ಅನ್ನೋದು ಶ್ರೀನಿ ಕನಸಾಗಿತ್ತು. ಆ ಕನಸು ನನಸಾಗುವ ಸಮಯ ಹತ್ತಿರ ಬರ್ತಿದೆ. ದಸರಾ ಹಬ್ಬದ ಸಂಭ್ರಮದಲ್ಲಿ 'ಘೋಸ್ಟ್' ಸಿನಿಮಾ ತೆರೆಗೆ ಬರ್ತಿದೆ. ಇದು ರೆಗ್ಯೂಲರ್ ಕಮರ್ಷಿಯಲ್ ಸಿನಿಮಾ ಖಂಡಿತ ಅಲ್ಲ. ಬಹಳ ವಿಭಿನ್ನವಾಗಿ ಸಿನಿಮಾ ಅನ್ನೋದು ಟೀಸರ್‌ನಲ್ಲೇ ಗೊತ್ತಾಗುತ್ತಿದೆ.

Shivarajkumar announces Ghost OGM Release Date

'ಘೋಸ್ಟ್' ಟೀಸರ್ ನೋಡಿದರೆ ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ ಎನಿಸುತ್ತದೆ. ಎಲ್ಲರೂ ಅದೇ ರೀತಿ ಭಾವಿಸಿದ್ದರು. ಆದರೆ ಇತ್ತೀಚೆಗೆ ಶಿವಣ್ಣ ಸ್ಪಷ್ಟನೆ ನೀಡಿದ್ದರು. ಆ ಎಪಿಸೋಡ್ ಚಿತ್ರದಲ್ಲಿ ಕೆಲ ನಿಮಿಷಗಳಷ್ಟೆ ಬರುತ್ತದೆ. ಇನ್ನುಳಿದಂತೆ ಇದು ಬೇರೆಯದ್ದೇ ಸಿನಿಮಾ ಎಂದಿದ್ದರು. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ 'ಘೋಸ್ಟ್' ಸಿನಿಮಾ ನಿರ್ಮಾಣವಾಗಿದೆ.

ಪರಭಾಷೆಯ ಘಟಾನುಘಟಿ ಕಲಾವಿದರು 'ಘೋಸ್ಟ್' ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಶಿವಣ್ಣನ ಲುಕ್ ಕೂಡ ಬಹಳ ಕುತೂಹಲ ಕೆರಳಿಸಿದೆ. ಟೈಟಲ್‌ನಿಂದಲೇ ಭಾರೀ ನಿರೀಕ್ಷೆ ಮೂಡಿಸಿರುವ 'ಘೋಸ್ಟ್' ಚಿತ್ರಕ್ಕೆ ನಿರ್ದೇಶಕ ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಇನ್ನು ಮಾಸ್ತಿ ಹಾಗೂ ಪ್ರಸನ್ನ ಸಂಭಾಷಣೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣದ ಬಲ ಚಿತ್ರಕ್ಕಿದೆ.

'ಘೋಸ್ಟ್' ಚಿತ್ರದಲ್ಲಿ ನಾಯಕಿನೂ ಇಲ್ಲ ಡ್ಯುಯೆಟ್‌ ಸಾಂಗ್ ಕೂಡ ಇರಲ್ಲ. ಇದು ಕೇವಲ 48 ಘಂಟೆಗಳಲ್ಲಿ ನಡೆಯುವ ಕಥೆ. ಶಿವರಾಜಕುಮಾರ್ ಜೊತೆಗೆ ಸತ್ಯಪ್ರಕಾಶ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮುಂತಾದವರು ಬಣ್ಣ ಹಚ್ಚಿದ್ದಾರೆ. ಮಲಯಾಳಂ ನಟ ಜಯರಾಮ್ ಬಾಲಿವುಡ್ ನಟ ಅನುಪಮ್ ಕೇರ್ ಕೂಡ ಶಿವಣ್ಣನ ಜೊತೆ ತೆರೆ ಹಂಚಿಕೊಂಡಿದ್ದಾರೆ.

Shivarajkumar announces Ghost OGM Release Date

ಗಣೇಶ ಹಬ್ಬದ ಸಂಭ್ರಮದಲ್ಲಿ 'ಘೋಸ್ಟ್‌' ಚಿತ್ರದ ಹೊಸ ಅಪ್‌ಡೇಟ್ ಬಂದಿದೆ. ಶಿವಣ್ಣ ಸ್ಪೆಷಲ್ ವಿಡಿಯೋ ಮಾಡಿ ಮಾತನಾಡಿ ಈ ಬಗ್ಗೆ ಹೇಳಿದ್ದಾರೆ. ಇದೇ ಶುಕ್ರವಾರ(ಸೆಪ್ಟೆಂಬರ್ 22) 'ಘೋಸ್ಟ್‌' ಚಿತ್ರದ OGM ರಿಲೀಸ್ ಮಾಡೋದಾಗಿ ಹೇಳಿದ್ದಾರೆ. ಶಿವಣ್ಣ ಮಾತನಾಡಿ ಹಬ್ಬದ ದಿನ ಒಳ್ಳೆ ಸುದ್ದಿ ಹೇಳೋಣ ಅಂತ ಬಂದಿದ್ದೀನಿ. 22ರಂದು 'ಘೋಸ್ಟ್' ಫಸ್ಟ್ ಸಾಂಗ್, ಬಿಜಿಎಂ ಎರಡೂ ಅಲ್ಲ, ಮತ್ತೇನು? ಎಂದು ಕೇಳಿದ್ದಾರೆ. ಕೊನೆಗೆ OGM ಅಂತ ಅಪ್‌ಡೇಟ್ ಸಿಕ್ಕಿದೆ.

ಸಾಂಗ್ ಹಾಗೂ ಬಿಜಿಎಂ ಎರಡನ್ನು ಸೇರಿಸಿ 'ಘೋಸ್ಟ್' OGM ರಿಲೀಸ್ ಮಾಡಲು ಚಿತ್ರತಂಡ ಮುಂದಾಗಿದೆ. ಈ ಸುದ್ದಿ ಕೇಳಿ ಶಿವಣ್ಣನ ಅಭಿಮಾನಿಗಳು ಖುಷಿಯಾಗಿದ್ದಾರೆ. ನಿರ್ದೇಶಕ ಶ್ರೀನಿ ತಮ್ಮ ವಿಭಿನ್ನ ಶೈಲಿಯ ಸಿನಿಮಾ ಹಾಗೂ ಪ್ರಮೋಷನ್‌ನಿಂದ ಗಮನ ಸೆಳೆಯುತ್ತಾರೆ. ಈ ಬಾರಿಯೂ ಅಂಥದ್ದೇ ಮ್ಯಾಜಿಕ್ ನಿರೀಕ್ಷೆ ಮಾಡಲಾಗುತ್ತಿದೆ.

ಈ ಬಾರಿ ದಸರಾ ಸಂಭ್ರಮದಲ್ಲಿ ಕನ್ನಡ ಮಾತ್ರವಲ್ಲದೇ ಅಕ್ಕಪಕ್ಕದ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್‌ಗೆ ಬರ್ತಿವೆ. ಹಾಗಾಗಿ ಬಾಕ್ಸಾಫೀಸ್‌ನಲ್ಲಿ ಭಾರೀ ಕ್ಲ್ಯಾಶ್ ಆಗುವ ಸಾಧ್ಯತೆಯಿದೆ. ಕನ್ನಡದಲ್ಲಿ 'ಘೋಸ್ಟ್' ಎದುರು ರಕ್ಷಿತ್ ಶೆಟ್ಟಿ ನಟನೆಯ 'ಸಪ್ತ ಸಾಗರದಾಚೆ ಎಲ್ಲೋ' ಭಾಗ-2 ಎರಡು ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ಲಿಯೋ' ಸಿನಿಮಾ ತೆರೆಗಪ್ಪಳಿಸುತ್ತಿದೆ.

'ಲಿಯೋ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಲಿದೆ. ಇನ್ನು ತೆಲುಗಿನಲ್ಲಿ ಬಾಲಯ್ಯ ನಟನೆಯ ಭಗವಂತ್ ಕೇಸರಿ ಹಾಗೂ ರವಿತೇಜಾ ನಟನೆಯ 'ಟೈಗರ್ ನಾಗೇಶ್ವರ್‌ ರಾವ್' ಸಿನಿಮಾ ರಿಲೀಸ್ ಆಗಲಿವೆ. ಇನ್ನು 'ಘೋಸ್ಟ್' ಸಿನಿಮಾ ಕೂಡ ಏಕಕಾಲಕ್ಕೆ ತೆಲುಗು, ತಮಿಳಿಗೆ ಡಬ್ ಆಗಿ ರಿಲೀಸ್ ಆಗುತ್ತಿದೆ. ಹಾಗಾಗಿ ಕಾಲಿವುಡ್‌ ಬಾಕ್ಸಾಫೀಸ್‌ನಲ್ಲೂ ಭಾರೀ ಪೈಪೋಟಿ ಏರ್ಪಡಲಿದೆ.

More from Filmibeat

English summary
Shivarajkumar gives update about Ghost OGM;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X