ಸೂಪರ್‌ಸ್ಟಾರ್ ರಜನಿ ಜೊತೆಗೆ ಸೆಂಚುರಿ ಸ್ಟಾರ್ ಶಿವಣ್ಣ ಸಿನಿಮಾ

ಇತ್ತೀಚೆಗೆ ಚಿತ್ರರಂಗದ ನಡೆ ಬದಲಾಗಿದೆ. ಪ್ಯಾನ್ ಇಂಡಿಯಾ ಚಿತ್ರಗಳು ಬರಲು ಪ್ರಾರಂಭಿಸಿದ ಮೇಲೆ ಭಾರತೀಯ ಚಿತ್ರರಂಗ ಒಂದು ಎನ್ನುವಂತಾಗಿದೆ. ಜೊತೆಗೆ ಪರಭಾಷೆಯ ಹಲವು ಸಿನಿಮಾಗಳು ಕನ್ನಡದಲ್ಲಿ, ಕನ್ನಡದ ಚಿತ್ರಗಳು ಪರಭಾಷೆಯಲ್ಲಿ ಬರುತ್ತಿವೆ.

ಸಿನಿಮಾಗಳು ಮಾತ್ರವಲ್ಲ. ಕಲಾವಿದರು ಪರಭಾಷೆಗಳಲ್ಲಿ ಅಭಿನಯಿಸುವುದು ಕೂಡ ಇತ್ತೀಚೆಗೆ ಹೆಚ್ಚಾಗಿದೆ. ಕನ್ನಡದ ಹಲವು ಕಲಾವಿದರು ಬೇರೆ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಪರಭಾಷಾ ನಟರು ಕೂಡ ಕನ್ನಡದ ಚಿತ್ರಗಳಲ್ಲಿ ಅಭಿನಯಿಸುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಈ ಸಾಲಿಗೆ ಈಗ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಸೇರಿದ್ದಾರೆ.

ಹೌದು ಕನ್ನಡದ ನಟ ಶಿವರಾಜ್ ಕುಮಾರ್ ಬೇರೆ ಭಾಷೆ ಚಿತ್ರದಲ್ಲಿ ನಟಿಸಲು ಸಜ್ಜಾಗಿದ್ದಾರಂತೆ. ತಮಿಳಿನ ದೊಡ್ಡ ಚಿತ್ರ ಒಂದರಲ್ಲಿ ನಟ ಶಿವರಾಜ್ ಕುಮಾರ್ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರ ಬಂದಿದೆ. ಯಾವ ಚಿತ್ರ, ಯಾವ ನಟನ ಜೊತೆಗೆ ತಮಿಳಿನಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಮುಂದೆ ಓದಿ...

ರಜನಿಕಾಂತ್ ಜೊತೆಗೆ ಶಿವಣ್ಣ ನಟನೆ

ರಜನಿಕಾಂತ್ ಜೊತೆಗೆ ಶಿವಣ್ಣ ನಟನೆ

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗೆ ಕನ್ನಡದ ಸ್ಟಾರ್ ನಟ ಶಿವರಾಜ್‌ಕುಮಾರ್ ಅಭಿನಯಿಸಲಿದ್ದಾರೆ ಎನ್ನಲಾಗುತ್ತಿದೆ. ರಜನಿಕಾಂತ್ ಮುಂದಿನ ಚಿತ್ರವನ್ನು ನಿರ್ದೇಶಕ ನೆಲ್ಸನ್ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'ತಲೈವರ್ 169' ಎಂದು ಹೆಸರಿಸಲಾಗಿದೆ. ಮೂಲಗಳ ಪ್ರಕಾರ, ಇದೇ ಚಿತ್ರದಲ್ಲಿ ಶಿವರಾಜ್‌ಕುಮಾರ್ ಸೂಪರ್‌ಸ್ಟಾರ್ ರಜನಿಕಾಂತ್ ಜೊತೆಗೆ ನಟಿಸಲಿದ್ದಾರಂತೆ.

ತಮಿಳು ಚಿತ್ರದಲ್ಲಿ ಶಿವಣ್ಣ ಫಿಕ್ಸ್

ತಮಿಳು ಚಿತ್ರದಲ್ಲಿ ಶಿವಣ್ಣ ಫಿಕ್ಸ್

ರಜನಿಕಾಂತ್ ಜೊತೆಗೆ ಶಿವರಾಜ್‌ಕುಮಾರ್ ನಟಿಸುತ್ತಾರೆ ಎನ್ನುವ ಬಗ್ಗೆ ಅಧಿಕೃತ ಮಾಹಿತಿ ಚಿತ್ರತಂಡ ದೃಢಪಡಿಸಿಲ್ಲ. ಆದರೆ ಈ ಚಿತ್ರಕ್ಕಾಗಿ ನಿರ್ದೇಶಕ ನೆಲ್ಸನ್, ಶಿವಣ್ಣ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಸೆಂಚುರಿ ಸ್ಟಾರ್ ಜೊತೆಗೆ ಹೆಚ್ಚಿನ ಚರ್ಚೆ ನಡೆಸಲು ನಿರ್ದೇಶಕ ಶೀಘ್ರದಲ್ಲೇ ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ರಾಜ್ ಕುಟುಂಬದೊಂದಿಗೆ ರಜನಿ ಬಾಂಧವ್ಯ!

ರಾಜ್ ಕುಟುಂಬದೊಂದಿಗೆ ರಜನಿ ಬಾಂಧವ್ಯ!

ರಜನಿಕಾಂತ್ ಕರ್ನಾಟಕದ ಜನರು ಮತ್ತು ಸ್ಯಾಂಡಲ್‌ವುಡ್‌ ಜೊತೆಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್‌ಕುಮಾರ್ ಕುಟುಂಬದೊಂದಿಗೆ ಉತ್ತಮ ಬಾಂಧವ್ಯ ಇದೆ. ಹಾಗಾಗಿ ರಜನಿಕಾಂತ್ ಜೊತೆಗೆ ನಟಿಸುವ ವಿಚಾರವನ್ನು ಶಿವರಾಜ್ ಕುಮಾರ್ ಅಷ್ಟು ಸುಲಭವಾಗಿ ತಳ್ಳಿ ಹಾಕುವುದಿಲ್ಲ ಎನ್ನುವ ಅಭಿಪ್ರಾಯಗಳು ವ್ಯಕ್ತವಾಗಿವೆ. ಹಾಗಾಗಿ ಈ ಬಗ್ಗೆ ಈಗ ತಮಿಳು, ಕನ್ನಡದಲ್ಲಿ ಚರ್ಚೆ ಶುರುವಾಗಿದೆ.

ಹೇಗಿರಲಿದೆ ಶಿವಣ್ಣ ರಜನಿ ಕಾಂಬಿನೇಶನ್?

ಹೇಗಿರಲಿದೆ ಶಿವಣ್ಣ ರಜನಿ ಕಾಂಬಿನೇಶನ್?

ರಜನಿಕಾಂತ್ ಮತ್ತು ಶಿವಣ್ಣ ಕಾಂಬಿನೇಷನ್ ಹೇಗೆ ಇರಲಿದೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ. ತಮಿಳು ಮತ್ತು ಕನ್ನಡದ ಸ್ಟಾರ್ ನಟರು ಒಂದೇ ಚಿತ್ರದಲ್ಲಿ ಇದ್ದರೆ, ಅದರಲ್ಲೂ ಶಿವಣ್ಣ ಮತ್ತು ರಜನಿಕಾಂತ್ ಜೊತೆಯಾಗಿ ಬಿಗ್ ಸ್ಕ್ರೀನ್ ಮೇಲೆ ಬರಲಿದ್ದಾರೆ ಎಂದರೆ ಅದು ಹೆಚ್ಚಿನ ನಿರೀಕ್ಷೆ ಮತ್ತು ಪ್ರಾಮುಖ್ಯತೆ ಇರುವ ಪಾತ್ರಗಳೇ ಆಗಿರುತ್ತವೆ. ಸದ್ಯ ಶಿವರಾಜ್‌ಕುಮಾರ್ 'ಬೈರಾಗಿ' ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಪ್ರಸ್ತುತ ಹರ್ಷ ನಿರ್ದೇಶನದ ಅವರ 125 ನೇ ಚಿತ್ರ 'ವೇದಾ'ದಲ್ಲಿ ಶಿವರಾಜ್‌ಕುಮಾರ್ ಬ್ಯುಸಿಯಾಗಿದ್ದಾರೆ.

More from Filmibeat

English summary
Shivarajkumar To Act Super Star Rajinikanth, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X