ಆಷಾಢದಲ್ಲಿ ಬರ್ತಿರೋ ಶಿವಣ್ಣನ ಹುಟ್ಟು'ಹಬ್ಬ'ದಂದು ಕಾಯ್ತಿದೆ ಭಾರೀ ಸರ್‌ಪ್ರೈಸ್‌

ಕನ್ನಡ ಚಿತ್ರರಂಗದ ಬ್ಯುಸಿಯೆಸ್ಟ್ ಆಕ್ಟರ್ ಅಂದ್ರೆ ಅದು ಒನ್ ಅಂಡ್ ಓನ್ಲಿ ಶಿವರಾಜ್‌ಕುಮಾರ್. ವಯಸ್ಸು 60 ದಾಟಿದ್ರು ಶಿವಣ್ಣನ ಎನರ್ಜಿ 20ರ ಹುಡುಗರನ್ನು ನಾಚಿಸುವಂತಿರುತ್ತದೆ. ಸದಾ ಐದಾರು ಸಿನಿಮಾಗಳು ಶಿವಣ್ಣನ ಕೈಯಲ್ಲಿರುತ್ತವೆ. ಚುನಾವಣೆ ಪ್ರಚಾರಕ್ಕಾಗಿ ಕೊಂಚ ಬಿಡುವು ಪಡೆದಿದ್ದ ಶಿವಣ್ಣ ಮತ್ತೆ ಬ್ಯುಸಿಯಾಗಿದ್ದಾರೆ.

ಸದ್ಯ ಎರಡ್ಮೂರು ಸಿನಿಮಾಗಳಲ್ಲಿ ಸೆಂಚುರಿ ಸ್ಟಾರ್ ಕೆಲಸ ಮಾಡುತ್ತಿದ್ದಾರೆ. 'ಬೈರತಿ ರಣಗಲ್' ಚಿತ್ರೀಕರಣ ಮುಗಿಸಿದ್ದಾರೆ. ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮತ್ತೊಂದು ಕಡೆ 'ಉತ್ತರಕಾಂಡ' ಚಿತ್ರದ ಮುಖ್ಯ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶೀಘ್ರದಲ್ಲೇ ಹೇಮಂತ್‌ ರಾವ್ ಕಾಂಬಿನೇಷನ್ ಸಿನಿಮಾ ಶುರುವಾಗಲಿದೆ.

Shivarajkumar Birthday his next film Makers planning to Surprise Fans

ಜುಲೈ 12ಕ್ಕೆ ನಟ ಶಿವರಾಜ್‌ಕುಮಾರ್ 62ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಈಗಾಗಲೇ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ಈ ಬಾರಿ ಶಿವಣ್ಣ ಹುಟ್ಟುಹಬ್ಬಕ್ಕೆ ಸಾಕಷ್ಟು ಸರ್‌ಪ್ರೈಸ್‌ಗಳು ಕಾದಿವೆ ಎನ್ನಲಾಗ್ತಿದೆ. ಸೆಂಚುರಿ ಸ್ಟಾರ್ ನಟನೆಯ ಮುಂದಿನ ಸಿನಿಮಾಗಳ ಬಗ್ಗೆ ಅಪ್‌ಡೇಟ್, ಪೋಸ್ಟರ್, ಟೀಸರ್‌ ರಿಲೀಸ್ ಆಗಿ ಅಭಿಮಾನಿಗಳಿಗೆ ಕಿಕ್ ಕೊಡಲಿದೆ.

ಭೈರತಿ ರಣಗಲ್

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್ 15ಕ್ಕೆ 'ಭೈರತಿ ರಣಗಲ್' ಸಿನಿಮಾ ತೆರೆಗೆ ಬರಬೇಕಿತ್ತು. ಆದರೆ ಪೋಸ್ಟ್ ಪ್ರೊಡಕ್ಷನ್ ತಡವಾಗುತ್ತಿದ್ದು ರಿಲೀಸ್ ಡೇಟ್ ಬದಲಾಗಿದೆ. ಎರಡ್ಮೂರು ವಾರ ಸಿನಿಮಾ ರಿಲೀಸ್ ಮುಂದೂಡಲು ಚಿತ್ರತಂಡ ನಿರ್ಧರಿಸಿದೆ. ನರ್ತನ್ ನಿರ್ದೇಶನದ ಈ ಚಿತ್ರವನ್ನು ಗೀತಾ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ನಿರ್ಮಿಸಲಾಗುತ್ತಿದೆ. 'ಮಫ್ತಿ' ಪ್ರೀಕ್ವೆಲ್ ಇದು. ಜುಲೈ 12ಕ್ಕೆ ಟೀಸರ್ ಸಮೇತ ಚಿತ್ರದ ರಿಲೀಸ್ ಡೇಟ್ ಘೋಷಣೆ ಆಗಲಿದೆ.

Shivarajkumar Birthday his next film Makers planning to Surprise Fans

'ಜೋಗಿ' ರೀ ರಿಲೀಸ್

ಶಿವಣ್ಣ ಹಾಗೂ ಪ್ರೇಮ್ ಜೋಡಿಯ ಸೂಪರ್ ಹಿಟ್ ಸಿನಿಮಾ 'ಜೋಗಿ'. ಸದ್ಯ ಚಿತ್ರರಂಗದಲ್ಲಿ ಹಿಟ್ ಸಿನಿಮಾಗಳನ್ನು ರೀ-ರಿಲೀಸ್ ಮಾಡುವ ಟ್ರೆಂಡ್ ನಡೀತಿದೆ. ಈಗಾಗಲೇ ಒಂದಷ್ಟು ಸಿನಿಮಾಗಳು ಮತ್ತೆ ತೆರೆಗೆ ಬಂದು ಪ್ರೇಕ್ಷಕರನ್ನು ರಂಜಿಸಿವೆ. ಅಭಿಮಾನಿಗಳು 'ಜೋಗಿ' ಸಿನಿಮಾ ರೀ ರಿಲೀಸ್ ಮಾಡುವಂತೆ ಮನವಿ ಮಾಡುತ್ತಿದ್ದರು. ಶಿವಣ್ಣ ಹುಟ್ಟುಹಬ್ಬದ 'ಜೋಗಿ' ಮತ್ತೆ ಬರುವ ಬಗ್ಗೆ ಹೆಚ್ಚಿನ ಮಾಹಿತಿ ಸಿಗಲಿದೆ.

ಉತ್ತರಕಾಂಡ

ಧನಂಜಯ್ ಹಾಗೂ ರೋಹಿತ್ ಪದಕಿ ಕಾಂಬಿನೇಷನ್ 'ಉತ್ತರಕಾಂಡ' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. ಉತ್ತರ ಕರ್ನಾಟಕ ಭಾಗದ ಕತೆ ಇರುವ ಈ ಚಿತ್ರದಲ್ಲಿ ಶಿವಣ್ಣ ಒಂದು ಖಡಕ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಪಾತ್ರ ಪರಿಚಯದ ಟೀಸರ್ ಬರುವ ಸಾಧ್ಯತೆಯಿದೆ.

'45' ಟೀಸರ್

ಅರ್ಜುನ್ ಜನ್ಯಾ ನಿರ್ದೇಶನದ '45' ಚಿತ್ರದಲ್ಲಿ ಉಪೇಂದ್ರ, ಶಿವಣ್ಣ, ರಾಜ್‌. ಬಿ ಶೆಟ್ಟಿ ನಟಿಸುತ್ತಿದ್ದಾರೆ. ಸದ್ದಿಲ್ಲದೇ ಸಿನಿಮಾ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಮೂವರ ಪಾತ್ರಗಳು ಏನು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆ ಕುತೂಹಲ ತಣಿಸಲು ಬರ್ತ್‌ಡೇ ಸಂಭ್ರಮದಲ್ಲಿ ಶಿವಣ್ಣನ ಪಾತ್ರ ಪರಿಚಯದ ಟೀಸರ್ ಬರಬಹುದು.

ಆರ್‌ಸಿ16 ಪೋಸ್ಟರ್

ಶಿವಣ್ಣ ಇತ್ತೀಚೆಗೆ ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ರಾಮ್‌ಚರಣ್ ಜೊತೆ ನಟಿಸೋಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಸಿನಿಮಾ ಚಿತ್ರೀಕರಣ ಇನ್ನು ಶುರುವಾಗಿಲ್ಲ. ಆದರೆ ಚಿತ್ರತಂಡ ಶಿವಣ್ಣನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟರ್ ಬಿಡುಗಡೆ ಮಾಡುವ ಸುಳಿವು ಸಿಕ್ತಿದೆ.

ಇನ್ನೆರಡು ದಿನಗಳಲ್ಲಿ ಶಿವಣ್ಣ- ಹೇಮಂತ್ ರಾವ್ ಸಿನಿಮಾ ಟೈಟಲ್ ಘೋಷಣೆ ಆಗಲಿದೆ. ಇನ್ನು ಜುಲೈ 12ಕ್ಕೆ 'ಪ್ರೊಡಕ್ಷನ್ಸ್ ನಂಬರ್ 1' ಸಿನಿಮಾ ಝಲಕ್ ಕೂಡ ರಿವೀಲ್ ಆದರೆ ಅಚ್ಚರಿ ಪಡಬೇಕಿಲ್ಲ.

More from Filmibeat

English summary
Bhairathi Ranagal, 45, Uttharakanda teasers unveiled on 21th July;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X