ಶಿವಣ್ಣ ಚಿತ್ರರಂಗಕ್ಕೆ ಬಂದು 34 ವರ್ಷ: ಸ್ಯಾಂಡಲ್ ವುಡ್ ಸ್ಟಾರ್ಸ್ ಶುಭಾಶಯ

Recommended Video

ಶಿವಣ್ಣನ 123 ಗೆ ಕೈ ಜೋಡಿಸಿದ ಪೊಲೀಸ್ ಕಮಿಷನರ್, ಅಪ್ಪು..! | ShivaRaj Kumar RDX | Filmibeat Kannada

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 34 ವರ್ಷಗಳು ಪೂರೈಸಿದೆ. ಯಶಸ್ವಿಯಾಗಿ 34 ವರ್ಷ ಪೂರ್ಣಗೊಳಿಸಿದ ಹ್ಯಾಟ್ರಿಕ್ ಹೀರೋಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. 1986 ರಲ್ಲಿ ಆನಂದ್ ಸಿನಿಮಾ ಮೂಲಕ ನಾಯಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ಶಿವಣ್ಣ 100ಕ್ಕು ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಅಪಾರ ಸಂಖ್ಯೆ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಆನಂದ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟ ಸೆಂಚುರಿ ಸ್ಟಾರ್ ಆನಂತರ ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಸಿನಿಮಾಗಳ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ನೀಡಿ ಹ್ಯಾಟ್ರಿಕ್ ಹೀರೋ ಆಗಿ ಹೊರಹೊಮ್ಮಿದ ಶಿವಣ್ಣ ಇಂದಿಗೂ ಅದೇ ಎನರ್ಜಿ, ಅದೇ ಜೋಶ್ ನಲ್ಲಿ ಸಿನಿಮಾ ಮಾಡುತ್ತ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 34 ವರ್ಷಗಳಿಂದ ಮನರಂಜನೆ ನೀಡುತ್ತಿರುವ ಹ್ಯಾಟ್ರಿಕ್ ಹೀರೋಗೆ ಕನ್ನಡ ಸ್ಟಾರ್ಸ್ ಶುಭಾಶಯ ತಿಳಿಸಿದ್ದಾರೆ.

ಇಂದು ಆನಂದ್ ಸಿನಿಮಾ ಮುಹೂರ್ತವಾದ ದಿನ

ಇಂದು ಆನಂದ್ ಸಿನಿಮಾ ಮುಹೂರ್ತವಾದ ದಿನ

ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್ ಕುಮಾರ್ ಪುತ್ರ ಶಿವರಾಜ್ ಕುಮಾರ್ ಮೊದಲ ಬಾರಿಗೆ ಆನಂದ್ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಆನಂದ್ 1986ರಲ್ಲಿ ಇಂದು ಫೆಬ್ರವರಿ 18ಕ್ಕೆ ಮುಹೂರ್ತ ಮಾಡಿಕೊಂಡ ದಿನ.

ಶಿವಣ್ಣನಿಗೆ ವಿಶ್ ಮಾಡಿದ ಸುನಿ

ನಿರ್ದೇಶಕ ಸುನಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಶುಭಾಶಯತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುನಿ "ಗಂಧದ ಗುಡಿಗೆ ಬಂದ ದಿನದಿಂದಲೂ ಪ್ರತಿ ವರುಷವು ಅಭಿಮಾನಿಗಳನ್ನು ರಂಜಿಸುತ್ತಿರುವ .,, ಆನಂದದಿಂದ ಚಿತ್ರರಂಗಕ್ಕೆ ಬಂದು ಚಂದನವನದ ಭಜರಂಗಿಯಾಗಿ ಬೆಳೆದಿರುವ ಸದಾಚಿರಯುವಕ #hattrichero @NimmaShivanna ರವರಿಗೆ ಹೃತ್ಪೂರ್ವಕ ವಂದನೆ ಹಾಗೂ ಶುಭಾಶಯಗಳೊಂದಿಗೆ #34YearsOfInspirationCDP ಅನಾವರಣ" ವಿಶ್ ಮಾಡಿ

ಮಾನ್ವಿತಾ ಹರೀಶ್

ನಟಿ ಮಾನ್ವಿತಾ ಹರೀಶ್ ಹ್ಯಟ್ರಿಕ್ ಹೀರೋ ಜೊತೆ ಟಗರು ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಶಿವಣ್ಣ ಜೊತೆ ಅಭಿನಯಿಸಿದ ಸಂತಸವನ್ನು ಹಂಚಿಕಳ್ಳುವ ಜೊತೆಗೆ ವಿಶ್ ಮಾಡಿದ್ದಾರೆ. "34 ವರ್ಷ ಅದ್ಭುತವಾಗಿ ಪೂರೈಸಿದ ಶಿವಣ್ಣ ನಿಮಗೆ ಅಭಿನಂದನೆಗಳು. ಎನರ್ಜಿ ಎಂಬ ಪದವನ್ನು ವ್ಯಾಖ್ಯಾನಿಸಿದ್ದೀರಿ. ನಿಮ್ಮ ಜೊತೆ ಕೆಲಸ ಮಾಡಲು ನಾನು ತುಂಬ ಅದೃಷ್ಟಮಾಡಿದ್ದೀನಿ" ಎಂದು ಬರೆದುಕೊಂಡಿದ್ದಾರೆ.

ನಿರ್ಮಾಪಕ ಕೆಪಿ ಶ್ರೀಕಾಂತ್

ನಿರ್ಮಾಪಕ ಕೆಪಿ ಶ್ರೀತಾಂತ್ ಕೂಡ ವಿಶ್ ಮಾಡಿದ್ದಾರೆ. ಟಗರು ಸಿನಿಮಾ ನಿರ್ಮಾಣ ಮಾಡಿದ್ದ ಶ್ರೀಕಾಂತ್ ಶಿವಣ್ಣನಿಗೆ ಶುಭಕೋರಿದ್ದಾರೆ. ವಿಶೇಷವಾದ ಫೋಟೋ ಶೇರ್ ಮಾಡಿ ವಿಶ್ ಮಾಡಿದ್ದಾರೆ.

ರಿಷಬ್ ಶೆಟ್ಟಿ

"ಶಿವಣ್ಣ ಇಂಡಸ್ಟ್ರಿಗೆ ಬಂದು 34 ವರ್ಷ ಆಗಿದ್ದು, 34 ವರ್ಷದಿಂದ ಪ್ರತಿವರ್ಷನೂ ಸಿನಿಮಾ ಕೊಟ್ಟಿರೊ ಭಾರತೀಯ ಏಕೈಕ ಸ್ಟಾರ್ ನಟ" ಎಂದು ಟ್ವಿಟ್ಟರ್ ನಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ಪುಷ್ಕರ್ ಮಲ್ಲಿಕಾರ್ಜುನಯ್ಯ

"ಕನ್ನಡ ಚಿತ್ರರಸಿಕರ ಮನದ ಅನಭಿಷಿಕ್ತ ದೊರೆ, ಸ್ಯಾಂಡಲ್ ವುಡ್ ಸಿನಿಲೋಕದ ಹ್ಯಾಟ್ರಿಕ್ ಹೀರೋ, ಅಪರಿಮಿತ ಹುಮ್ಮಸ್ಸಿನ ಚಿರಯುವಕ ಡಾ.ಶಿವರಾಜ್ ಕುಮಾರ್ ಅವರಿಗೆ ಮನಸ್ಪೂರ್ವಕ ಶುಭಾಷಯಗಳು" ಎಂದು ಹೇಳಿದ್ದಾರೆ.

More from Filmibeat

English summary
Kannada Actor Shivaraj Kumar completed 34 years, Shivanna 34 years in Sandalwood. Sandalwood stars wish to Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X