For Quick Alerts
  ALLOW NOTIFICATIONS  
  For Daily Alerts

  ಶಿವಣ್ಣ30 ವಿಶೇಷ: ಶಿವಣ್ಣ ಅವರ 20 ಉತ್ತಮ ಚಿತ್ರಗಳ List

  By Suneetha
  |

  ಎಲ್ಲಕ್ಕಿಂತ ಹೆಚ್ಚಾಗಿ ಸಿನಿಮಾಗಳು ಸೋತ್ರೂ, ಗೆದ್ರೂ ಶಿವಣ್ಣನ ಮಾರ್ಕೇಟ್ ಮಾತ್ರ ಯಾವತ್ತೂ ಕಮ್ಮಿ ಆಗಿಲ್ಲ. ಹ್ಯಾಟ್ರಿಕ್ ಹೀರೊನ ಪ್ರೀತಿಸುವ ಅಭಿಮಾನಿ ದೇವರುಗಳ ಭಕ್ತಿ ಕಡಿಮೆಯಾಗಿಲ್ಲ. ಯಾಕಂದ್ರೆ ಶಿವರಾಜ್ ಕುಮಾರ್ ಇರೋದೆ ಹಾಗೆ. ಇವ್ರು ಎಲ್ರಿಗೂ ಬೇಕು. ಡಾ.ರಾಜ್ ಆವತ್ತು ಹೇಗಿದ್ರೋ ಇವತ್ತು ಹಾಗೇ ಬದುಕಿ ಬಾಳ್ತಿದಾರೆ ಶಿವಣ್ಣ.

  'ಮನಮೆಚ್ಚಿದ ಹುಡುಗಿ'ಯ ಮನ ಕದಿಯಲು ಮುದ್ದು ಮುಖದ ಹುಡುಗನಾಗಿ 'ಆನಂದ'ದಿಂದ ಬಂದು ಕನ್ನಡಿಗರ ಮನಗೆದ್ದ ನಟ ಶಿವರಾಜ್ ಕುಮಾರ್. 'ಟುವ್ವಿ ಟುವ್ವಿ' ಅಂತ್ಲೇ ಕುಣಿಯುತ್ತಾ 'ರಥಸಪ್ತಮಿ' ಏರಿದ ಶಿವಣ್ಣ, ಕನ್ನಡ ಚಿತ್ರರಂಗದಲ್ಲೇ ಮೂರು ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟು ಹ್ಯಾಟ್ರಿಕ್ ಹೀರೋ ಪಟ್ಟಕೇರಿದ ಶಿವಣ್ಣ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ನಿನ್ನೆಗೆ (ಫೆಬ್ರವರಿ 19) ಭರ್ಜರಿ 30 ವರ್ಷಗಳು ಆಯ್ತು.[ಶಿವಣ್ಣನ ಮೊದಲ ಚಿತ್ರ 'ಆನಂದ್' ಶೂಟಿಂಗ್ ಅನುಭವ ಹೇಗಿತ್ತು ಗೊತ್ತಾ?]

  'ಗಂಡುಗಲಿ ಕುಮಾರರಾಮ'ನಾಗಿ, ನಲ್ಲೆಯನ್ನ ಮೆಚ್ಚಿಸೋ ಜಗ ಮೆಚ್ಚಿದ ಹುಡುಗನಾಗಿರೋ ಶಿವಣ್ಣ ಅಭಿಮಾನಿಗಳ ಪಾಲಿಗೆ ನೆಚ್ಚಿನ ನಟ. ಕೈಲಿ ರೆಡ್ ರೋಸ್ ಹಿಡಿದು ಎಲ್ರ ಮನಗೆದ್ದ ಶಿವ, ಕೈಲಿ ಲಾಂಗು ಹಿಡಿದ್ರೆ ಅಕ್ಷರಶಃ ಸಿಂಹದ ಮರಿ. ತನ್ನ ಸಿಗ್ನೇಚರ್ ಸ್ಟೈಲಲ್ಲಿ ಶಿವಣ್ಣ ಲಾಂಗ್ ಹಿಡಿದು ನಡೆದು ಬರ್ತಿದ್ರೆ, ಆ ಗತ್ತು...ಆ ಗೈರತ್ತಿಗೆ ಶಿವಣ್ಣನಿಗೆ, ಶಿವಣ್ಣನೇ ಸರಿಸಾಟಿ.[ಶಿವಣ್ಣನ 'ಶಿವತಾಂಡವ'ಕ್ಕೆ ಬೆಚ್ಚಿ ಬಿದ್ದ ಬಾಕ್ಸಾಫೀಸ್]

  ಅಂದಹಾಗೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಭರ್ತಿ 30 ವರ್ಷ ಪೂರೈಸಿದ್ದು, ಇದರ ವಿಶೇಷವಾಗಿ ಶಿವಣ್ಣ ಅವರ 20 ಉತ್ತಮ ಸಿನಿಮಾಗಳ ಲಿಸ್ಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  ಮೊದಲ ಸಿನಿಮಾ 'ಆನಂದ್'

  ಮೊದಲ ಸಿನಿಮಾ 'ಆನಂದ್'

  ಈಗ ಅಭಿಮಾನಿಗಳ ಬಾಯಲ್ಲಿ ಹ್ಯಾಟ್ರಿಕ್ ಹೀರೋ ಎಂದು ಕರೆಸಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಅವರ ಮೊದಲ ಸಿನಿಮಾ 'ಆನಂದ್'. ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿ ಶಿವಣ್ಣ ಅವರಿಗೆ ಹೊಸ ಇಮೇಜ್ ತಂದುಕೊಟ್ಟಿತ್ತು. ಇವರ ಜೊತೆ ನಾಯಕಿಯಾಗಿ ಸುಧಾರಾಣಿ ಮಿಂಚಿದ್ದರು. 1986ರ ಈ ಚಿತ್ರಕ್ಕೆ ನಿರ್ದೇಶಕ ಸಿಂಗೀತಮ್ ಶ್ರೀನಿವಾಸ ರಾವ್ ನಿರ್ದೇಶನ ಮಾಡಿದ್ದರು. ಸುಮಾರು 38 ವಾರಗಳ ಕಾಲ ಚಿತ್ರಮಂದಿರಗಳಲ್ಲಿ ನಾಗಾಲೋಟದಿಂದ ಓಡಿದ ಈ ಸಿನಿಮಾ ಬಾಕ್ಸಾಫೀಸ್ ನಲ್ಲೂ ಒಳ್ಳೆ ಕಲೆಕ್ಷನ್ ಮಾಡಿತ್ತು.[ವರ್ಮಾ ಅವರ 'ವೀರಪ್ಪನ್' 10 ದಿನದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?]

  'ರಥಸಪ್ತಮಿ'

  'ರಥಸಪ್ತಮಿ'

  ಶಿವಣ್ಣ ಅವರು ನಟಿಸಿದ ಎರಡನೇ ಸಿನಿಮಾ 'ರಥಸಪ್ತಮಿ' 1986ರಲ್ಲಿ, ನಿರ್ದೇಶಕ ಎಮ್ ಎಸ್ ರಾಜಶೇಖರ್ ಅವರೇ ಆಕ್ಷನ್-ಕಟ್ ಹೇಳಿದ್ದ ಈ ಸಿನಿಮಾದಲ್ಲಿ ಶಿವಣ್ಣನ ಜೊತೆ ನಟಿ ಆಶಾ ರಾಣಿ ಎಂಬ ಹೊಸ ಪ್ರತಿಭೆ ನಾಯಕಿಯಾಗಿ ಮಿಂಚಿದ್ದರು. ಈ ಸಿನಿಮಾ ಕೂಡ ಹಿಟ್ ಲಿಸ್ಟ್ ಗೆ ಸೇರಿದೆ.

  'ಮನಮೆಚ್ಚಿದ ಹುಡುಗಿ'

  'ಮನಮೆಚ್ಚಿದ ಹುಡುಗಿ'

  1987ರಲ್ಲಿ ನಿರ್ದೇಶಕ ಎಮ್.ಎಸ್ ರಾಜಶೇಖರ್ ಆಕ್ಷನ್-ಕಟ್ ಹೇಳಿದ್ದ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿಯ 'ಮನಮೆಚ್ಚಿದ ಹುಡುಗಿ' ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು. ಮತ್ತೆ ಅದೇ ಜೋಡಿ ತೆರೆಯ ಮೇಲೆ ಕಮಾಲ್ ಮಾಡಿತ್ತು. ಈ ಮೂರು ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆಗಿ ಶಿವಣ್ಣ ಹ್ಯಾಟ್ರಿಕ್ ಹೀರೋ ಆದರು.

  'ಶಿವ ಮೆಚ್ಚಿದ ಕಣ್ಣಪ್ಪ'

  'ಶಿವ ಮೆಚ್ಚಿದ ಕಣ್ಣಪ್ಪ'

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರು 'ಶಿವ ಮೆಚ್ಚಿದ ಕಣ್ಣಪ್ಪ' ಸಿನಿಮಾದಲ್ಲಿ 'ಬೇಡರ ಕಣ್ಣಪ್ಪ'ನ ಪಾತ್ರ ವಹಿಸಿದ್ದರು. ಈ ಸಿನಿಮಾದಲ್ಲಿ ಶಿವಣ್ಣ ಅವರ ಅಪ್ಪಾಜಿ ಡಾ.ರಾಜ್ ಕುಮಾರ್ ಅವರು ಮಿಂಚಿದ್ದು, ದೇವರು ಶಿವನ ಪಾತ್ರದಲ್ಲಿ ಮಿಂಚಿದ್ದರು.

  'ರಣರಂಗ'

  'ರಣರಂಗ'

  1988ರಲ್ಲಿ ನಿರ್ದೇಶಕ ವಿ.ಸೋಮಶೇಖರ್ ಆಕ್ಷನ್-ಕಟ್ ಹೇಳಿದ್ದ 'ರಣರಂಗ' ಸಿನಿಮಾದಲ್ಲಿ ಮತ್ತೆ 'ಆನಂದ್' ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿತ್ತು. ಹೌದು ಮತ್ತೆ ಶಿವಣ್ಣ ಮತ್ತು ಸುಧಾರಾಣಿ ಜೋಡಿಯಾಗಿದ್ದರು. ಇವರ ಜೊತೆ ನಟಿ ತಾರಾ ಕೂಡ ಮಿಂಚಿದ್ದರು.

  ಸೂಪರ್-ಡೂಪರ್ ಹಿಟ್ 'ಓಂ'

  ಸೂಪರ್-ಡೂಪರ್ ಹಿಟ್ 'ಓಂ'

  ಶಿವರಾಜ್ ಕುಮಾರ್ ಹಾಗೂ ನಟಿ ಪ್ರೇಮಾ ಅವರು ಒಂದಾಗಿ ಕಾಣಿಸಿಕೊಂಡಿದ್ದ 'ಓಂ' ಸಿನಿಮಾ ಇಡೀ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಭಯಂಕರ ಸೌಂಡ್ ಮಾಡಿತ್ತು. ಇದೀಗ ರಿಯಲ್ ಸ್ಟಾರ್ ಉಪೇಂದ್ರ ಅಂತಾನೇ ಖ್ಯಾತಿ ಗಳಿಸಿರುವ ನಟ ಕಮ್ ನಿರ್ದೇಶಕ ಉಪೇಂದ್ರ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅಂದಹಾಗೆ ಈ ಸಿನಿಮಾ ಉಪೇಂದ್ರ ಅವರಿಗೆ ದೊಡ್ಡ ಬ್ರೇಕ್ ನೀಡಿತ್ತು.

  ರೋಮ್ಯಾಂಟಿಕ್ 'ನಮ್ಮೂರ ಮಂದಾರ ಹೂವೆ'

  ರೋಮ್ಯಾಂಟಿಕ್ 'ನಮ್ಮೂರ ಮಂದಾರ ಹೂವೆ'

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಟ ರಮೇಶ್ ಅರವಿಂದ್ ಅವರು ಒಂದಾಗಿ ಮಿಂಚಿದ್ದ ಲವ್ಲಿ ರೋಮ್ಯಾಂಟಿಕ್ ಸಿನಿಮಾ 'ನಮ್ಮೂರ ಮಂದಾರ ಹೂವೆ' ಕೂಡ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಇವರಿಬ್ಬರಿಗೆ ನಾಯಕಿಯಾಗಿ ನಟಿ ಪ್ರೇಮಾ ಅವರು ಮಿಂಚಿದ್ದರು.

  'ಜನುಮದ ಜೋಡಿ'

  'ಜನುಮದ ಜೋಡಿ'

  ಶಿವರಾಜ್ ಕುಮಾರ್ ಮತ್ತು ನಟಿ ಶಿಲ್ಪಾ ಹಾಗೂ ನಟಿ ಚಿಪ್ಪಿ ಅವರು ಕಾಣಿಸಿಕೊಂಡಿದ್ದ 1996ರ 'ಜನುಮದ ಜೋಡಿ' ಸಿನಿಮಾ ಭಾರಿ ಹಿಟ್ ಆಗಿತ್ತು. ಅದರಲ್ಲೂ ವಿಶೇಷವಾಗಿ 'ಮಣಿ ಮಣಿ ಮಣಿಗೊಂದು ದಾರ' ಹಾಡಂತೂ ಎಲ್ಲರ ಬಾಯಲ್ಲೂ ಫೇಮಸ್ ಆಗಿತ್ತು.

  'ಜೋಡಿ ಹಕ್ಕಿ'

  'ಜೋಡಿ ಹಕ್ಕಿ'

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಜೊತೆ 'ಜೋಡಿ ಹಕ್ಕಿ' ಎಂಬ ರೋಮ್ಯಾಂಟಿಕ್ ಸಿನಿಮಾದಲ್ಲಿ ಅವರ ಜೊತೆ ಇಬ್ಬರು ನಾಯಕಿಯರಾದ ನಟಿ ಚಾರುಲತಾ ಮತ್ತು ನಟಿ ವಿಜಯಲಕ್ಷ್ಮಿ ಅವರು ಮಿಂಚಿದ್ದರು.

  'ಅಂಡಮಾನ್'

  'ಅಂಡಮಾನ್'

  ಶಿವರಾಜ್ ಕುಮಾರ್ ಅವರು 1998ರಲ್ಲಿ ಪಿ.ಹೆಚ್. ವಿಶ್ವನಾಥ್ ನಿರ್ದೇಶನದ 'ಅಂಡಮಾನ್' ಎಂಬ ಸೂಪರ್ ಹಿಟ್ ಸಿನಿಮಾ ಮಾಡಿದ್ದು, ಈ ಚಿತ್ರದಲ್ಲಿ ಅವರ ಮಗಳು ನಿವೇದಿತಾ ಕೂಡ ಮಿಂಚಿದ್ದರು. ಅಪ್ಪ-ಮಗಳ ಪವಿತ್ರ ಸಂಬಂಧದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿತ್ತು.

  'A.K 47'

  'A.K 47'

  ನಿರ್ದೇಶಕ ಓಂ ಪ್ರಕಾಶ್ ರಾವ್ ನಿರ್ದೇಶನ ಮಾಡಿದ್ದ ಶಿವರಾಜ್ ಕುಮಾರ್ ಅವರ ಜೂನ್ 1999ರ ಮತ್ತೊಂದು ಹಿಟ್ ಸಿನಿಮಾ 'A.K 47'. ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್, ಓಂ ಪುರಿ ಪ್ರಕಾಶ್ ಅವರು ಮುಖ್ಯ ಭೂಮಿಕೆಯಲ್ಲಿ ಮಿಂಚಿದ್ದರು.

  'ಹೃದಯಾ ಹೃದಯಾ'

  'ಹೃದಯಾ ಹೃದಯಾ'

  1999ರಲ್ಲಿ ನಿರ್ದೇಶಕ ಎಮ್.ಎಸ್ ರಾಜಶೇಖರ ಅವರು ಆಕ್ಷನ್-ಕಟ್ ಹೇಳಿದ್ದ 'ಹೃದಯಾ ಹೃದಯಾ' ಸಿನಿಮಾ ಸೂಪರ್ ಹಿಟ್ ಆಗಿದ್ದು, ಚಿತ್ರದಲ್ಲಿ ಶಿವರಾಜ್ ಕುಮಾರ್, ನಟ ರಮೇಶ್ ಅರವಿಂದ್ ಮತ್ತು ನಟಿ ಅನುಪ್ರಭಾಕರ್ ಮಿಂಚಿದ್ದರು. ಈ ಚಿತ್ರದ ನಟನೆಗೆ ಶಿವಣ್ಣನಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ಲಭಿಸಿತ್ತು.

  'ಪ್ರೀತ್ಸೆ'

  'ಪ್ರೀತ್ಸೆ'

  ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ನಟಿ ಸೊನಾಲಿ ಬೇಂದ್ರೆ ಅವರು ನಟಿಸಿದ್ದ ಸೈಕೋಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಪ್ರೀತ್ಸೆ' ಸೂಪರ್ ಹಿಟ್ ಆಗಿತ್ತು. ನಿರ್ದೇಶಕ ಡಿ.ರಾಜೇಂದ್ರ ಬಾಬು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದರು. ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿದ್ದರು. 1993ರ ರಲ್ಲಿ ತೆರೆಕಂಡ ಹಿಂದಿ 'ಡರ್' ಚಿತ್ರದ ರೀಮೇಕ್ ಈ 'ಪ್ರೀತ್ಸೆ' ಸಿನಿಮಾ.

  'ತವರಿಗೆ ಬಾ ತಂಗಿ'

  'ತವರಿಗೆ ಬಾ ತಂಗಿ'

  2002ರಲ್ಲಿ ತೆರೆ ಕಂಡ ಶಿವಣ್ಣ ಮತ್ತು ನಟಿ ರಾಧಿಕಾ ಅವರು ಮಿಂಚಿದ್ದ 'ತವರಿಗೆ ಬಾ ತಂಗಿ' ಸಿನಿಮಾ ಬ್ಲಾಕ್ ಬಸ್ಟರ ಹಿಟ್ ಆಗಿತ್ತು. ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರ ನಿರ್ದೇಶನದ ಈ ಚಿತ್ರದಲ್ಲಿ ನಟಿ ಅನು ಪ್ರಭಾಕರ್ ಮತ್ತು ಕಾಮಿಡಿ ನಟ ಕೋಮಲ್ ಅವರು ಮಿಂಚಿದ್ದರು. ಈ ಸಿನಿಮಾ ಹೆಂಗಳೆಯರ ಹಾಟ್ ಫೇವರಿಟ್ ಆಗಿತ್ತು. ತದನಂತರ ಶಿವಣ್ಣ ಅವರು ಎಲ್ಲರಿಗೂ ಪ್ರೀತಿಯ ಅಣ್ಣನಾದರು.

  'ಚಿಗುರಿದ ಕನಸು'

  'ಚಿಗುರಿದ ಕನಸು'

  2003ರಲ್ಲಿ ನಿರ್ದೇಶಕ ಟಿ.ಎಸ್ ನಾಗಾಭರಣ್ ಅವರು ನಿರ್ದೇಶನ ಮಾಡಿದ್ದ 'ಚಿಗುರಿದ ಕನಸು' ಸೂಪರ್ ಡೂಪರ್ ಹಿಟ್ ಆಗಿತ್ತು. ಕರಾವಳಿ ಪ್ರದೇಶ ಮಂಗಳೂರು ಮತ್ತು ಬಂಗಾಡಿ ಎಂಬ ಊರಿನಲ್ಲಿ ಚಿತ್ರೀಕರಣಗೊಂಡ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಒಳ್ಳೆ ಗಳಿಕೆ ಮಾಡಿತ್ತು. ಚಿತ್ರದಲ್ಲಿ ವಿದ್ಯಾ ವೆಂಕಟೇಶ್ ಮತ್ತು ರೇಖಾ ಉನ್ನಿಕೃಷ್ಣನ್ ಎಂಬ ಇಬ್ಬರು ನಾಯಕಿಯರು ಶಿವಣ್ಣನ ಜೊತೆ ಮಿಂಚಿದ್ದರು. ಈ ಚಿತ್ರದ ನಟನೆಗೂ ಶಿವಣ್ಣ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತ್ತು.

  'ಜೋಗಿ'

  'ಜೋಗಿ'

  'ಓಂ' ಚಿತ್ರ ಭರ್ಜರಿ ಬ್ರೇಕ್ ಕೊಟ್ಟ ಮೇಲೆ ಶಿವಣ್ಣ ಅವರು 2005ರಲ್ಲಿ ನಿರ್ದೇಶಕ ಪ್ರೇಮ್ ಅವರ 'ಜೋಗಿ' ಚಿತ್ರದಲ್ಲಿ ರೌಡಿಯಾಗಿ ಮಿಂಚಿದ್ದರು. ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಜೆನ್ನಿಫರ್ ಕೊತ್ವಾಲ್ ಮಿಂಚಿದ್ದರು. ಇದು ತಾಯಿ ಮಗನ ಪ್ರೀತಿಯನ್ನು ಸಾರುವ ಚಿತ್ರವಾಗಿದ್ದು, ಅಮ್ಮನಾಗಿ ಅರುಂಧತಿ ನಾಗ್ ಮಿಂಚಿದ್ದರು.

  'ಭಜರಂಗಿ'

  'ಭಜರಂಗಿ'

  ನಿರ್ದೇಶಕ ಎ.ಹರ್ಷ ಅವರು ಆಕ್ಷನ್-ಕಟ್ ಹೇಳಿದ್ದ 'ಭಜರಂಗಿ' ಸಿನಿಮಾ ಶಿವಣ್ಣ ಅವರಿಗೆ ಮತ್ತೊಂದು ಬ್ರೇಕ್ ತಂದುಕೊಡುವಲ್ಲಿ ಯಶಸ್ವಿಯಾಯಿತು. ಮರುಜನ್ಮಾಧರಿತ ಕಥೆಯಾದ 'ಭಜರಂಗಿ' ಸಿನಿಮಾದಲ್ಲಿ ನಟಿ ಐಂದ್ರಿತಾ ರೈ ಅವರು ಶಿವಣ್ಣನ ಜೊತೆ ನಾಯಕಿಯಾಗಿ ಮಿಂಚಿದ್ದರು.

  'ವಜ್ರಕಾಯ'

  'ವಜ್ರಕಾಯ'

  ಮತ್ತೊಮ್ಮೆ ಎ.ಹರ್ಷ ಮತ್ತು ಶಿವಣ್ಣ ಅವರ ಜುಗಲ್ ಬಂದಿಯಲ್ಲಿ 2015ರಲ್ಲಿ ಮೂಡಿಬಂದಿದ್ದ 'ವಜ್ರಕಾಯ' ಸಿನಿಮಾ ಕೂಡ ಶಿವಣ್ಣ ಅವರಿಗೆ ಭರ್ಜರಿ ಹಿಟ್ ತಂದುಕೊಟ್ಟಿತ್ತು. ನಟಿ ಜಯಸುಧಾ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರದಲ್ಲಿ ಶಿವಣ್ಣ ಜೊತೆ ಮೂವರು ನಾಯಕಿಯರು ಮಿಂಚಿದ್ದರು.

  'ಕಿಲ್ಲಿಂಗ್ ವೀರಪ್ಪನ್'

  'ಕಿಲ್ಲಿಂಗ್ ವೀರಪ್ಪನ್'

  ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಆಕ್ಷನ್-ಕಟ್ ಹೇಳಿದ್ದ 'ಕಿಲ್ಲಿಂಗ್ ವೀರಪ್ಪನ್' ಸಿನಿಮಾ 2016ರ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ. ನಾಲ್ಕು ಭಾಷೆಗಳಲ್ಲಿ ತೆರೆಕಂಡ ಈ ಚಿತ್ರ ಶಿವಣ್ಣ ಅವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತ್ತು. ಕಾಡುಗಳ್ಳ ವೀರಪ್ಪನ್ ನಿಜಕಥೆಯಾಧರಿತ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಬಾಚಿತ್ತು.

  'ಶಿವಲಿಂಗ'

  'ಶಿವಲಿಂಗ'

  ಶಿವರಾಜ್ ಕುಮಾರ್ ಮತ್ತು ನಟಿ ವೇದಿಕಾ ಅಭಿನಯದ ರೀಸೆಂಟ್ ಹಿಟ್ ಸಿನಿಮಾ 'ಶಿವಲಿಂಗ' ಕೂಡ ಶಿವಣ್ಣನ ಮತ್ತೊಂದು ಸೂಪರ್ ಡೂಪರ್ ಹಿಟ್ ಸಿನಿಮಾ. ಹಾರರ್-ಥ್ರಿಲ್ಲರ್ ನಿರ್ದೇಶಕ ಪಿ.ವಾಸು ಆಕ್ಷನ್-ಕಟ್ ಹೇಳಿರುವ ಈ ಸಿನಿಮಾ ಸದ್ಯಕ್ಕೆ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಂದಹಾಗೆ 'ವಜ್ರಕಾಯ', 'ಕಿಲ್ಲಿಂಗ್ ವೀರಪ್ಪನ್' ಮತ್ತು 'ಶಿವಲಿಂಗ' ಸಿನಿಮಾಗಳು ಭರ್ಜರಿ ಹಿಟ್ ಆಗಿರುವುದರಿಂದ ಈ ಬಾರಿ ಕೂಡ ಶಿವಣ್ಣ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

  English summary
  Hatrick Hero Shivarajkumar, eldest son of Dr Rajkumar completes 30 years in Kannada film industry. Here is the complete list of Best movies of Shiva Rajkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X