ಮಗಳ ಸಾಧನೆಗೆ ಅಶ್ವಿನಿ ಪುನೀತ್ ಸಂಭ್ರಮ ಹೇಗಿತ್ತು? ದೊಡ್ಡಪ್ಪ ಶಿವಣ್ಣ ಏನಂದ್ರು?

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಆಪ್ತರು, ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇವತ್ತಿಗೂ ಪ್ರತಿ ದಿನ ಪ್ರತಿ ಕ್ಷಣ ಅಪ್ಪು ನೆನಪಿನಲ್ಲಿ ಕಾಲದೂಡುತ್ತಿದ್ದಾರೆ. ಸದ್ಯ ಪುನೀತ್ ರಾಜ್‌ಕುಮಾರ್ ಹಿರಿಯ ಮಗಳು ಧೃತಿ ವಿದೇಶದಲ್ಲಿ ಪದವಿ ಪಡೆದುಕೊಂಡಿದ್ದಾರೆ.

ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪಾರ್ಸನ್ಸ್‌ ಸ್ಕೂಲ್‌ ಆಫ್‌ ಡಿಸೈನ್‌ - ದಿ ನ್ಯೂ ಸ್ಕೂಲ್‌ನಲ್ಲಿ ಧೃತಿ ಓದುತ್ತಿದ್ದರು. ಆಗಾಗ್ಗೆ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಅಂದಹಾಗೆ ಧೃತಿ illustrator ಮತ್ತು ಡಿಸೈನರ್‌ ವಿಭಾಗದಲ್ಲಿ ಪದವಿ ಪಡೆದುಕೊಂಡಿದ್ದು ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಿದ್ದಾರೆ. ಈ ಸಂಭ್ರಮದ ಕ್ಷಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಸಹ ಸಾಕ್ಷಿ ಆಗಿದ್ದಾರೆ. 128 ವರ್ಷಗಳ ಇತಿಹಾಸವಿರುವ ಪ್ರತಿಷ್ಠಿತ ಕಾಲೇಜಿನಲ್ಲಿ ಆಕೆಗೆ ಪದವಿ ಪಡೆದುಕೊಂಡಿದ್ದಾರೆ.

Shivarajkumar congratulate for Puneeth Rajkumar s Daughter Drithi Graduates from New York collage

ಬೆಂಗಳೂರಿನ ಪ್ರತಿಷ್ಠಿತ ಸೋಫಿಯಾ ಹೈ ಸ್ಕೂಲ್‌ ಹಾಗೂ 'ವಿದ್ಯಾಶಿಲ್ಪ್‌'ನಲ್ಲಿ ಧೃತಿ ವಿದ್ಯಾಭ್ಯಾಸ ಮಾಡಿದ್ದರು. ಬಳಿಕ ಉನ್ನತಶಿಕ್ಷಣಕ್ಕಾಗಿ ಅಮೆರಿಕಾಗೆ ತೆರೆಳಿದ್ದರು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಅವರನ್ನು ಉತ್ತುಂಗದ ಸ್ಥಾನದಲ್ಲಿ ನೋಡಬೇಕು ಎಂದು ಪುನೀತ್ ರಾಜ್‌ಕುಮಾರ್ ಕನಸು ಕಾಣುತ್ತಿದ್ದರು. ಇನ್ನು ಧೃತಿ ಪದವಿ ಘಟಿಕೋತ್ಸವದಲ್ಲಿ ತಾಯಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಸಹೋದರಿ ವಂದಿತಾ ಹಾಗೂ ಅಣ್ಣ ವಿನಯ್ ರಾಜ್‌ಕುಮಾರ್ ಭಾಗಿ ಆಗಿದ್ದಾರೆ. ಅದಕ್ಕಾಗಿಯೇ ಮೂವರೂ ನ್ಯೂಯಾರ್ಕ್‌ಗೆ ತೆರಳಿದ್ದರು.

ಧೃತಿ ಪದವಿ ಪಡೆದು ವೇದಿಕೆ ಇಳಿದು ಬರುತ್ತಿದ್ದಂತೆ ತಾಯಿ ಅಶ್ವಿನಿ 'ಕಂಗ್ರಾಜುಲೇಷನ್ಸ್' ಎಂದು ಕೂಗಿ ಅಪ್ಪಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ ವೀಡಿಯೋಗಳನ್ನು ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನುಳಿದಂತೆ ಕುಟುಂಬ ಸದಸ್ಯರಾದ ದೊಡ್ಡಪ್ಪ ಶಿವರಾಜ್‌ಕುಮಾರ್, ಮಾವ ಧೀರೇನ್ ರಾಮ್‌ಕುಮಾರ್ ಕೂಡ ಅಭಿನಂದನೆ ತಿಳಿಸಿ ಪೋಸ್ಟ್ ಮಾಡಿದ್ದಾರೆ.

ಶಿವಣ್ಣನ ಇನ್‌ಸ್ಟಾಗ್ರಾಮ್ ಖಾತೆಯನ್ನು ಟ್ಯಾಗ್‌ ಮಾಡಿ ಪತ್ನಿ ಗೀತಾ ಶಿವರಾಜ್‌ಕುಮಾರ್ ಪೋಸ್ಟ್‌ ಮಾಡಿದ್ದಾರೆ. "ಹಾಯ್ ಟೋಟೊ(ಧೃತಿ), ಅಭಿನಂದನೆಗಳು. ಈ ದಿನ ಬಹಳ ವಿಶೇಷವಾದ ದಿನ, ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ದಿನ. ನೀನು ನನ್ನನ್ನು ಮತ್ತು ದೊಡ್ಡಪ್ಪನನ್ನು ತುಂಬಾ ಹೆಮ್ಮೆಪಡುವಂತೆ ಮಾಡಿದ್ದೀರಿ. ನೀವು ನನ್ನನ್ನು ಮತ್ತು ದೊಡ್ಡಪ್ಪನನ್ನು ತುಂಬಾ ಹೆಮ್ಮೆಪಡುವಂತೆ ಮಾಡಿದ್ದೀರಿ. ಅಪ್ಪು, ಅಶ್ವಿನಿ ಹಾಗೂ ನುಕ್ಕಿ(ಪುನೀತ್ ಕಿರಿ ಮಗಳು) ಜೊತೆ ಬಹಳಷ್ಟು ಒಳ್ಳೆಯ ನೆನಪುಗಳಿವೆ. ನೀನು ನಗುವಾಗ, ನಡೆಯುವಾಗ ಅಪ್ಪು ಬಂದಂತೆ, ನಿನ್ನಲಿಯೇ ಅಪ್ಪು. ನಮ್ಮೆಲ್ಲರ ಪ್ರೀತಿಯ ಅಪ್ಪುಗೆ. ಮತ್ತೊಮ್ಮೆ ಅಭಿನಂದನೆ" ಎಂದು ಬರೆದುಕೊಂಡಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರ ಇಬ್ಬರೂ ಮಕ್ಕಳನ್ನು ಟೋಟೊ(ಧೃತಿ) ಹಾಗೂ ನುಕ್ಕಿ(ವಂದಿತಾ) ಎಂಬ ಮುದ್ದು ಹೆಸರುಗಳಿಂದ ಕುಟುಂಬ ಸದಸ್ಯರು ಕರೆಯುತ್ತಾರೆ. ಸದ್ಯ ಧೃತಿ ಸಾಧನೆಗೆ ಆಪ್ತರು ಖುಷಿಯಾಗಿದ್ದಾರೆ. ಅಪ್ಪು ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಅಭಿನಂದನೆ ತಿಳಿಸುತ್ತಿದ್ದಾರೆ.

ಅಪ್ಪು ಬಳಿಕ ಪತ್ನಿ ಅಶ್ವಿನಿ ಇಡೀ ಕುಟುಂಬ ಹಾಗೂ ವ್ಯವಹಾರಗಳ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ವಿನಯ್ ಹಾಗೂ ಯುವ ಚಿಕ್ಕಮ್ಮನ ಜೊತೆಗೆ ನಿಂತಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಮತ್ತೆ ಸಿನಿಮಾಗಳು ನಿರ್ಮಾಣವಾಗುತ್ತಿದೆ. ಯುವ ರಾಜ್‌ಕುಮಾರ್ ನಟನೆಯ 'ಎಕ್ಕ' ಚಿತ್ರವನ್ನು ಜಯಣ್ಣ ಕಂಬೈನ್ಸ್, ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಪಿಆರ್‌ಕೆ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಈ ಮೂರು ಸಂಸ್ಥೆಗಳು ಸೇರಿ ಯುವ ನಟನೆಯ 3ನೇ ಚಿತ್ರವನ್ನು ನಿರ್ಮಿಸುತ್ತಿವೆ.

ದುನಿಯಾ ಸೂರಿ ನಿರ್ದೇಶನದ ಆ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಿಲ್ಲ. ಇತ್ತೀಚೆಗೆ ಚಿತ್ರದ ಮುಹೂರ್ತ ನೆರವೇರಿತ್ತು. ದುನಿಯಾ ವಿಜಯ್ ಮಗಳು ಈ ಚಿತ್ರದಲ್ಲಿ ಯುವ ಜೋಡಿಯಾಗಿ ನಟಿಸುತ್ತಿದ್ದಾರೆ. ಮತ್ತಷ್ಟು ಚಿತ್ರಗಳ ನಿರ್ಮಾಣಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದಾರೆ.

More from Filmibeat

English summary
Shivarajkumar and Ashiwni Puneeth Rajkumar expressed heartfelt congratulations to Drithi on graduating from a prestigious college in New York;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X