For Quick Alerts
  ALLOW NOTIFICATIONS  
  For Daily Alerts

  ಸಿನಿ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ನೀಡಿದ ಸೆಂಚುರಿ ಸ್ಟಾರ್ ಶಿವಣ್ಣ

  |

  ಕೊರೊನಾ ವೈರಸ್ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸಿನಿಕಾರ್ಮಿಕರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನೆರವು ನೀಡಿದ್ದಾರೆ. ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ಶಿವಣ್ಣ 10 ಲಕ್ಷ ರೂಪಾಯಿಯ ಚೆಕ್ ತಲುಪಿಸಿದ್ದಾರೆ ಎಂಬ ಮಾಹಿತಿ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ.

  ಪತ್ನಿಯ ಹುಟ್ಟುಹಬ್ಬದ ದಿನ ಒಂದೊಳ್ಳೆ ಕೆಲಸ ಮಾಡಿದ Shiva Rajkumar | Filmibeat Kannada

  ಪತ್ನಿ ಗೀತಾ ಅವರ ಹುಟ್ಟುಹಬ್ಬದ ಹಿನ್ನೆಲೆ ಕೇಕ್ ಕತ್ತರಿಸಿ ಸಂಭ್ರಮಿಸಿದ ನಟ ಶಿವರಾಜ್ ಕುಮಾರ್, ಈ ವಿಶೇಷ ಸಂದರ್ಭದಲ್ಲಿ ಚಿತ್ರರಂಗದ ಕಾರ್ಮಿಕರಿಗೆ ಸಹಾಯಹಸ್ತ ಚಾಚಿದ್ದಾರೆ.

  ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ನೀಡಿದ ಪುನೀತ್ ರಾಜ್‌ಕುಮಾರ್ಸಿನಿಮಾ ಕಾರ್ಮಿಕರ ನೆರವಿಗೆ 10 ಲಕ್ಷ ನೀಡಿದ ಪುನೀತ್ ರಾಜ್‌ಕುಮಾರ್

  ಶಿವರಾಜ್ ಕುಮಾರ್ ಆಪ್ತ ಹಾಗೂ ನಿರ್ಮಾಪಕ ಕೆಪಿ ಶ್ರೀಕಾಂತ್ 10 ಲಕ್ಷ ರೂಪಾಯಿಯ ಚೆಕ್‌ನ್ನು ಕಾರ್ಮಿಕರ ಒಕ್ಕೂಟಕ್ಕೆ ಹಸ್ತಾಂತರಿಸಿದ್ದಾರೆ. ಈ ವೇಳೆ ಸಾರಾ ಗೋವಿಂದು, ಒಕ್ಕೂಟದ ಕಾರ್ಯದರ್ಶಿಗಳಾದ ರವೀಂದ್ರನಾಥ್ ಪಾಲ್ಗೊಂಡಿದ್ದರು.

  ಇದಕ್ಕೂ ಮುಂಚೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಹ ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ 10 ಲಕ್ಷ ರೂಪಾಯಿ ನೀಡಿ ಸಹಾಯ ಮಾಡಿದ್ದರು. ಈಗ ಶಿವಣ್ಣ ಅವರು ಸಹ 10 ಲಕ್ಷ ಘೋಷಿಸಿದ್ದಾರೆ.

  ರಾಕಿಂಗ್ ಸ್ಟಾರ್ ಯಶ್ ನೆರವು

  ನಟ ಯಶ್ ಅವರು ಸಹ ಚಿತ್ರರಂಗದ ಕಾರ್ಮಿಕರು, ತಂತ್ರಜ್ಞರ ಕಷ್ಟಗಳಿಗೆ ಸ್ಪಂದಿಸಿದ್ದರು. ಸುಮಾರು 3 ಸಾವಿರ ಕುಟುಂಬಗಳಿಗೆ ತಲಾ 5 ಸಾವಿರ ರೂಪಾಯಿ ನೇರವಾಗಿ ಅವರ ಖಾತೆಗೆ ಜಮಾ ಮಾಡಿಸಿದ್ದರು.

  English summary
  Kannada actor ShivaRajkumar Donated 10 lakhs rupees to karnataka chalanachitra karmikara okkuta on his wife birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X