'ಟಗರು' ಜೊತೆ ಕುಣಿಯಲಿದ್ದಾರೆ ಶಾನ್ವಿ, ಪಾರೂಲ್, ಮಾನ್ವಿತಾ

By Naveen

ಶಿವರಾಜ್ ಕುಮಾರ್ ಅಭಿಮಾನಿಗಳು 'ಟಗರು' ಧ್ಯಾನ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾಗಾಗಿ ಕಾಯುತ್ತಿರುವ ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ಸಿನಿಮಾವನ್ನು ತಾವೇ ಪ್ರಚಾರ ಮಾಡುತ್ತಿದ್ದಾರೆ. ಶಿವಣ್ಣ ಅಂದರೆ ಕ್ರೇಜ್.. ಕ್ರೇಜ್ ಅಂದರೆ ಶಿವಣ್ಣ.. ಎನ್ನುವುದು ಮತ್ತೆ ಸಾಬೀತು ಆಗಿದೆ.

'ಟಗರು' ರಿಲೀಸ್ ಆಗುವುದಕ್ಕೆ ಇನ್ನೂ ಎರಡು ವಾರ ಬಾಕಿ ಇದೆ. ಆದರೆ ಈಗಾಗಲೇ ಅನೇಕ ಚಿತ್ರಮಂದಿರಗಳಲ್ಲಿ ಶಿವಣ್ಣನ ಕಟ್ ಔಟ್ ರಾರಾಜಿಸುತ್ತಿದೆ. ಪೋಸ್ಟರ್ ಗಳಿಗೆ ಹಾಲಿನ ಅಭಿಷೇಕ ನಡೆಯುತ್ತಿದೆ. ಇವುಗಳ ಜೊತೆಗೆ ಈಗ ಶಿವಣ್ಣ ಅಭಿಮಾನಿಗಳು ವಿಶೇಷವಾಗಿ DJ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ಸ್ಟಾರ್ ಗಳು ಭಾಗಿಯಾಗಲಿದ್ದಾರೆ. ಮುಂದೆ ಓದಿ....

'ಟಗರು' DJ ನೈಟ್ಸ್

'ಟಗರು' DJ ನೈಟ್ಸ್

ಶಿವಣ್ಣನ ಅಭಿಮಾನಿ ಸಂಘಗಳಾದ ರಾಜ್ ಡೈನಸ್ಟಿ ಮತ್ತು ಶಿವು ಅಡ್ಡ ಕಡೆಯಿಂದ ಫೆಬ್ರವರಿ 10ರಂದು ಯಶವಂತಪುರ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ವಿಶೇಷವಾದ 'ಟಗರು' DJ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

ಕಲಾವಿದರು ಭಾಗಿ

ಕಲಾವಿದರು ಭಾಗಿ

'ಟಗರು' DJ ಕಾರ್ಯಕ್ರಮದಲ್ಲಿ ನಟಿ ಪಾರೂಲ್ ಯಾದವ್, ಶಾನ್ವಿ ಶ್ರೀವಾತ್ಸವ್, ಮಾನ್ವಿತಾ, ಕಾವ್ಯಾ ಶಾ, ನಟ ಚಿಕ್ಕಣ್ಣ, ವಿಕ್ಕಿ ವರುಣ್, ಧನಂಜಯ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಲಿದ್ದಾರೆ.

ಇದೇ ಮೊದಲು

ಇದೇ ಮೊದಲು

'ಟಗರು' ಸಿನಿಮಾದ ಹಾಡುಗಳು ಈಗಾಗಲೇ ದೊಡ್ಡ ಕ್ರೇಜ್ ಸೃಷ್ಟಿ ಮಾಡಿದೆ. DJ ನೈಟ್ ನಲ್ಲಿ ಈ ಹಾಡುಗಳಿಗೆ ಸ್ಯಾಂಡಲ್ ವುಡ್ ಸ್ಟಾರ್ ಗಳು ಕುಣಿಯಲಿದ್ದಾರೆ. ವಿಶೇಷ ಅಂದರೆ ಒಂದು ಚಿತ್ರದ ಬಿಡುಗಡೆಗೆ ಮೊದಲು DJ ನೈಟ್ ಕಾರ್ಯಕ್ರಮ ಮಾಡುತ್ತಿರುವುದು ಇದೇ ಮೊದಲು.

ಸಿನಿಮಾ ನೋಡ್ತಾರೆ ಪೂರಿ ಜಗನ್ನಾಥ್

ಸಿನಿಮಾ ನೋಡ್ತಾರೆ ಪೂರಿ ಜಗನ್ನಾಥ್

ಕನ್ನಡದ ಕಲಾವಿದರು ಮಾತ್ರವಲ್ಲದೆ 'ಟಗರು' ಚಿತ್ರದ ಬಗ್ಗೆ ಟಾಲಿವುಡ್ ನಿರ್ದೇಶಕ ಪೂರಿ ಜಗನ್ನಾಥ್ ಕೂಡ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರವನ್ನು ಮೊದಲ ದಿನ ಮೊದಲ ಶೋ ಬೆಂಗಳೂರಿನ ಮುಖ್ಯ ಚಿತ್ರಮಂದಿರದಲ್ಲಿ ಶಿವಣ್ಣನ ಅಭಿಮಾನಿಗಳ ಜೊತೆಗೆ ಪೂರಿ ಜಗನ್ನಾಥ್ ನೋಡಲಿದ್ದಾರೆ.

23ಕ್ಕೆ ಬಿಡುಗಡೆ

23ಕ್ಕೆ ಬಿಡುಗಡೆ

'ಟಗರು' ಸಿನಿಮಾದ ಬಿಡುಗಡೆಯ ದಿನಾಂಕ ನಿಗದಿ ಆಗಿದೆ. ಸಿನಿಮಾ ಫೆಬ್ರವರಿ 23ಕ್ಕೆ ರಿಲೀಸ್ ಆಗಲಿದೆ. ವಿಶೇಷ ಅಂದರೆ ಹತ್ತು ವರ್ಷದ ಹಿಂದೆ ಅದೇ ದಿನ ಸೂರಿ ನಿರ್ದೇಶನದ ಮೊದಲ ಸಿನಿಮಾ 'ದುನಿಯಾ' ಬಿಡುಗಡೆಯಾಗಿತ್ತು.

'ಟಗರು' ಚಿತ್ರದ ಬಗ್ಗೆ

'ಟಗರು' ಚಿತ್ರದ ಬಗ್ಗೆ

'ಟಗರು' ಶಿವರಾಜ್ ಕುಮಾರ್ ಮತ್ತು ದುನಿಯಾ ಸೂರಿ ಕಾಂಬಿನೇಶನ್ ನಲ್ಲಿ ಬರುತ್ತಿರುವ ಎರಡನೇ ಸಿನಿಮಾವಾಗಿದೆ. ನಟಿ ಭಾವನಾ, ಮಾನ್ವಿತಾ ಹರೀಶ್, ಧನಂಜಯ್, ವಸಿಷ್ಟ ಸಿನಿಮಾದಲ್ಲಿ ನಟಿಸಿದ್ದಾರೆ. ಚರಣ್ ರಾಜ್ ಸಂಗೀತ ಚಿತ್ರದಲ್ಲಿದೆ.

More from Filmibeat

English summary
Kannada actor Shivarajkumar fans organized Tagaru DJ Night on this saturday. 'Tagaru' movie will be releasing on February 23.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X