Jailer: ಕರ್ನಾಟಕದಲ್ಲಿ ತಮಿಳಲ್ಲೇ 'ಜೈಲರ್' ಆರ್ಭಟ: ಶಿವಣ್ಣ ನೀವು ಮಾಡಿದ್ದು ನಮಗಿಷ್ಟವಿಲ್ಲ: ಅಭಿಮಾನಿಗಳು ಬೇಸರ

ರಜನಿಕಾಂತ್ ನಟನೆಯ 'ಜೈಲರ್' ಚಿತ್ರದಲ್ಲಿ ಕನ್ನಡ ನಟ ಶಿವರಾಜ್‌ಕುಮಾರ್ ಕೂಡ ನಟಿಸಿದ್ದಾರೆ. ಚಿತ್ರವನ್ನು ಕನ್ನಡಕ್ಕೂ ಡಬ್ ಮಾಡಿದ್ದಾರೆ. ಆದರೆ ಬೆಂಗಳೂರಿನಲ್ಲಿ ಬೆರಳೆಣಿಯಷ್ಟು ಕನ್ನಡ ಶೋಗಳನ್ನು ಕೊಟ್ಟು 500ಕ್ಕೂ ಹೆಚ್ಚು ತಮಿಳು ಶೋಗಳನ್ನು ಪ್ರದರ್ಶಿಸಲಾಗುತ್ತಿದೆ. ಇದು ಸಹಜವಾಗಿಯೇ ಕನ್ನಡ ಸಿನಿರಸಿಕರ ಬೇಸರಕ್ಕೆ ಕಾರಣವಾಗಿದೆ. ಇದೇ ವಿಚಾರ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಈಗಾಗಲೇ ಬೆಂಗಳೂರಿನಲ್ಲಿ 'ಜೈಲರ್' ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಅಭಿಮಾನಿಗಳು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಇನ್ನು ಪಿವಿಆರ್‌ ಹಾಗೂ ಐನಾಕ್ಸ್ ಚೈನ್‌ನಲ್ಲಿ ಮೊದಲ ದಿನ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿದೆ. ಕನ್ನಡ ಯಾವುದೇ ಚಿತ್ರಕ್ಕೂ ಇರದಷ್ಟು ಟಿಕೆಟ್ ದರ ನಿಗದಿಪಡಿಸಿದ್ದಾರೆ. ಕೆಲವರು ಟಿಕೆಟ್ ದರ ಕೇಳಿಯೇ ಎರಡು ದಿನ ತಡವಾಗಿ ಸಿನಿಮಾ ನೋಡೋಣ ಎಂದು ಸುಮ್ಮನಾಗುತ್ತಿದ್ದಾರೆ.

Shivarajkumar Fans upset for Jailer Kannada version gets less preference in state

ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ತಮಿಳು ಚಿತ್ರದಲ್ಲಿ ನಟಿಸಿದ್ದಾರೆ. 'ಜೈಲರ್' ರಜನಿಕಾಂತ್ ಜೊತೆ ನರಸಿಂಹ ಎನ್ನುವ ಪಾತ್ರದಲ್ಲಿ ಕೆಲಹೊತ್ತು ಶಿವಣ್ಣ ಕಾಣಿಸಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ನಟಿಸಿದ್ದಾರೆ ಎನ್ನುವ ಕಾರಣಕ್ಕೂ ಸಿನಿಮಾ ಕರ್ನಾಟಕದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಆದರೆ ಕನ್ನಡ ಶೋಗಳ ಸಂಖ್ಯೆ ಕಮ್ಮಿ ಇರೋದು ಬೇಸರಕ್ಕೆ ಕಾರಣವಾಗಿದೆ.

ತಮಿಳಿನಲ್ಲೇ 'ಜೈಲರ್' ದರ್ಬಾರ್

ಕನ್ನಡದಲ್ಲಿ ಡಬ್ಬಿಂಗ್ ಬೇಕು ಎಂದು ಕೆಲ ವರ್ಷಗಳ ಹಿಂದೆ ಭಾರೀ ಹೋರಾಟ ನಡೆದಿತ್ತು. ಕರ್ನಾಟಕದಲ್ಲಿ ಈಗ ಡಬ್ಬಿಂಗ್ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಇದೆ. ಇತ್ತೀಚೆಗೆ ಕೆಲ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಕನ್ನಡಕ್ಕೆ ಡಬ್ ಮಾಡಲಾಗುತ್ತಿದೆ. ಆದರೆ ಶೋಗಳನ್ನು ಮಾತ್ರ ಹೆಚ್ಚು ಕೊಡುತ್ತಿಲ್ಲ. ಆಯಾ ಭಾಷೆಯಲ್ಲೇ ಸಿನಿಮಾಗಳನ್ನು ಇಲ್ಲಿ ಹೇರುವ ಪ್ರಯತ್ನ ನಡೀತಿದೆ. 'ಜೈಲರ್' ಚಿತ್ರದಲ್ಲೂ ಅದು ಪುನರಾವರ್ತನೆ ಆಗಿದೆ. ರಜನಿಕಾಂತ್, ಶಿವಣ್ಣ ನಟಿಸಿದ್ದರು ಹೆಚ್ಚು ಕನ್ನಡ ಶೋಗಳು ಸಿಕ್ಕಿಲ್ಲ.

ಸಂತೋಷ್‌ ಥಿಯೇಟರ್‌ನಲ್ಲಿ ತೆಲುಗು

ಸದ್ಯ ಕನ್ನಡದ ಯಾವುದೇ ದೊಡ್ಡ ಸಿನಿಮಾ ಥಿಯೇಟರ್‌ಗಳಲ್ಲಿ ಇಲ್ಲ. ಇದು 'ಜೈಲರ್' ಚಿತ್ರಕ್ಕೆ ವರದಾನವಾಗಿದೆ. ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಿಂದ ಹಿಡಿದು ಎಲ್ಲಾ ಕಡೆ ಮುಂದಿನ ವಾರ 'ಜೈಲರ್' ಕಾರುಬಾರು ನಡೆಯಲಿದೆ. ಗಾಂಧೀನಗರದ ಸಂತೋಷ್ ಚಿತ್ರಮಂದಿರದಲ್ಲಿ 'ಜೈಲರ್' ತೆಲುಗು ವರ್ಷನ್ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಇನ್ನುಳಿದಂತೆ ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್‌ನಲ್ಲಿ ತಮಿಳು ವರ್ಷನ್ ಹಾಕಿದ್ದಾರೆ.

Shivarajkumar Fans upset for Jailer Kannada version gets less preference in state

ಶಿವಣ್ಣ ಅಭಿಮಾನಿಗಳ ಬೇಸರ

'ಜೈಲರ್' ಚಿತ್ರದಲ್ಲಿ ಶಿವಣ್ಣ ನಟಿಸಿದ್ದರೂ ಸಿನಿಮಾ ಕನ್ನಡಕ್ಕೆ ಡಬ್ ಆಗಿದ್ದರೂ ಈ ರೀತಿ ಕಡಿಮೆ ಶೋ ಕೊಟ್ಟಿರೋದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನ ತೋಡಿಕೊಳ್ಳುತ್ತಿದ್ದಾರೆ. "ಶಿವಣ್ಣ ಅಭಿಮಾನಿಗಳ ಕಡೆಯಿಂದ ನಿಮಗೊಂದು ಮನವಿ , ಬೇರೆ ಭಾಷೆ ಚಿತ್ರಗಳಲ್ಲಿ ನೀವು ನಟಿಸಿದ್ದು ನಮಗೆ ಇಷ್ಟವಿಲ್ಲ , ನೀವು ನಟಿಸಿದ ಮೇಲೆ ಆ ಚಿತ್ರ ಕರ್ನಾಟಕದಲ್ಲಿ ಕನ್ನಡದಲ್ಲಿ ಬರಬೇಕು . ಆದರೆ ಈಗ ಬರುತ್ತಿರುವ 'ಜೈಲರ್' ಚಿತ್ರ ಕರ್ನಾಟಕದಲ್ಲಿ ತಮಿಳಿನಲ್ಲಿ ಒಂದು ಕನ್ನಡ ಚಿತ್ರಕ್ಕೆ ಸಿಗದಷ್ಟು ಶೋಸ್ ಕೊಟ್ಟಿದ್ದಾರೆ. ಇದರಿಂದ ಕನ್ನಡಕ್ಕೆ ಹಾನಿ, ಇದನ್ನು ಬಳಸಿಕೊಂಡು ನಿಮ್ಮನ್ನು ಟ್ರೋಲ್ ಮಾಡಲಾಗುತ್ತಿದೆ. ಇದು ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ , ಆ ಟ್ರೊಲ್ ಅನ್ನು ನಮಗೆ ನೋಡಲು ಆಗುತಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

ರಜನಿ ಕನ್ನಡದಲ್ಲಿ ಡಬ್ ಮಾಡಿಲ್ಲ

ನೆಲ್ಸನ್ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ 'ಜೈಲರ್' ಚಿತ್ರದಲ್ಲಿ ಮೋಹನ್‌ ಲಾಲ್ ಸಹ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ರಮ್ಯಾಕೃಷ್ಣ, ತಮನ್ನಾ, ಜಾಕಿ ಶ್ರಾಫ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಚಿತ್ರ ಕನ್ನಡಕ್ಕೆ ಡಬ್ ಆಗಿದ್ದರೂ ರಜನಿಕಾಂತ್ ತಮ್ಮ ಪಾತ್ರಕ್ಕೆ ಕನ್ನಡದಲ್ಲಿ ಡಬ್ಬಿಂಗ್ ಮಾಡಿಲ್ಲ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಕರ್ನಾಟಕದಲ್ಲಿ ತಮಿಳಿನಲ್ಲಿ 'ಜೈಲರ್' ಅಬ್ಬರ ಕನ್ನಡ ಸಿನಿರಸಿಕರಿಗೆ ಬೇಸರ ತಂದಿದೆ.

More from Filmibeat

English summary
Shivarajkumar Fans upset for Jailer Kannada version gets less preference in state.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X