#AskNimmaShivanna: "ನನ್ನ ಕ್ಯಾರೆಕ್ಟರ್ ನೀವು ಅರ್ಥ ಮಾಡ್ಕೊಂಡಿಲ್ಲ.. ನಾನು ಒಳ್ಳೆವ್ನ, ಕೆಟ್ಟವ್ನ ನನಗೆ ಗೊತ್ತಿಲ್ಲ": ಶಿವಣ್ಣ
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ಘೋಸ್ಟ್' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಶ್ರೀನಿ ನಿರ್ದೇಶನ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. ದಸರಾ ಸಂಭ್ರಮದಲ್ಲಿ ಅಕ್ಟೋಬರ್ 20ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ಬಂದ 'ಘೋಸ್ಟ್ OGM' ಹಿಟ್ ಆಗಿದೆ.
ಹಿಂದಿ ನಟ ಅನುಪಮ್ ಖೇರ್, ಮಲಯಾಳಂ ನಟ ಜಯರಾಮ್ ಚಿತ್ರದ ಮುಖ್ಯಭೂಮಿಕೆಯಲ್ಲಿದ್ದಾರೆ. ನಿಧಾನವಾಗಿ 'ಘೋಸ್ಟ್' ಸಿನಿಮಾ ಪ್ರಚಾರ ಆರಂಭಿಸಿದೆ ಚಿತ್ರತಂಡ. ಪ್ರಚಾರದ ಭಾಗವಾಗಿ ಶಿವಣ್ಣ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ #AskNimmaShivannna ಸೆಷನ್ ನಡೆಸುತ್ತಿದ್ದಾರೆ. ಹ್ಯಾಷ್‌ಟ್ಯಾಗ್‌ನಲ್ಲಿ 4 ದಿನಗಳ ಕಾಲ ಅಭಿಮಾನಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ. ಈಗಾಗಲೇ ಒಂದಷ್ಟು ಪ್ರಶ್ನೆಗಳಿಗೆ ಇಂಟ್ರೆಸ್ಟಿಂಗ್ ಉತ್ತರ ಕೊಟ್ಟಿದ್ದಾರೆ.

'ಐತಿಹಾಸಿಕ, ಪೌರಾಣಿಕ ಪಾತ್ರ ಸೇರಿದಂತೆ ಎಲ್ಲಾ ರೀತಿಯ ಪಾತ್ರ ಮಾಡಿದ್ದೀರಾ? ಬಾಂಡ್ ಶೈಲಿ ಸಿನಿಮಾ ಯಾವಾಗ? ಎನ್ನುವ ಅಭಿಮಾನಿ ಪ್ರಶ್ನೆಗೆ 'ಶೀಘ್ರದಲ್ಲೇ' ಎಂದು ಶಿವಣ್ಣ ಉತ್ತರಿಸಿದ್ದಾರೆ. 'ಒಂದು ಸಾಲಿನಲ್ಲಿ ನಿಮ್ಮ ಸಿನಿಜರ್ನಿಬಗ್ಗೆ ಹೇಳಿ ಎನ್ನುವ ಪ್ರಶ್ನೆಗೆ, 'ಆನಂದ.. ಆನಂದ.. ಆನಂದ' ಎಂದು ರಿಪ್ಲೇ ಮಾಡಿದ್ದಾರೆ.
ತಮಿಳು ನಟ ಧನುಷ್ ಅಭಿಮಾನಿಯೊಬ್ಬರು 'ಕ್ಯಾಪ್ಟನ್ ಮಿಲ್ಲರ್ ಬಗ್ಗೆ ಹೇಳಿ' ಎಂದು ಕೇಳಿದ್ದಾರೆ. 'ಇಡೀ ತಂಡದ ಜೊತೆ ಕೆಲಸ ಮಾಡಿದ್ದು ಖುಷಿ ಇದೆ. ಧನುಷ್ ಜೊತೆ ಕೆಲಸ ಮಾಡಿದ ಬಗ್ಗೆ ಸಂತಸ ಇದೆ' ಎಂದು ಶಿವಣ್ಣ ಉತ್ತರಿಸಿದ್ದಾರೆ. ಅಜಯ್ ನಾಯ್ಡು ಎಂಬುವವರು ನೀವು ಒಳ್ಳೆಯವರಾ, ಇಲ್ಲ ಕೆಟ್ಟವರಾ?? ಎಂದು ಕೇಳಿದ್ದಾರೆ. ಅದಕ್ಕೆ "ಅಜಯ್ ನಾಯ್ದು ಇಷ್ಟು ವರ್ಷ ಆದ್ರು ನನ್ನ ಕ್ಯಾರೆಕ್ಟರ್ ನೀವು ಅರ್ಥ ಮಾಡ್ಕೊಂಡಿಲ್ಲ. ನಾನು ಒಳ್ಳೆವ್ನ, ಕೆಟ್ಟವ್ನ ನನಗೆ ಗೊತ್ತಿಲ್ಲ, ನೀವೇ ಹೇಳಿ" ಎಂದಿದ್ದಾರೆ.
ತೆಲುಗು ನಟ ಮಹೇಶ್ ಬಾಬು, ಕ್ರಿಕೆಟಿಗ ಧೋನಿ, ತಮಿಳು ನಟ ಸೂರ್ಯ ಅಭಿಮಾನಿಗಳ ಪ್ರಶ್ನೆಗಳಿಗೆ ಸೆಂಚುರಿ ಸ್ಟಾರ್ ಉತ್ತರಿಸಿದ್ದಾರೆ. 'ಘೋಸ್ಟ್' ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿದೆ. ಶಿವಣ್ಣನ ಅಭಿಮಾನಿಯಾಗಿರುವ ಶ್ರೀನಿ ತಮ್ಮ ನೆಚ್ಚಿನ ನಟನನ್ನು ತೆರೆಮೇಲೆ ಬಹಳ ವಿಭಿನ್ನವಾಗಿ ತೋರಿಸುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್, ಟೀಸರ್, OGM ರಿಲೀಸ್ ಆಗಿ ಗಮನ ಸೆಳೆದಿದೆ.
ಸಂದೇಶ್ ನಾಗರಾಜ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಪೆನ್ ಸ್ಟುಡಿಯೋ ಸಂಸ್ಥೆ 'ಘೋಸ್ಟ್' ಚಿತ್ರದ ವಿತರಣಾ ಹಕ್ಕನ್ನು ಪಡೆದುಕೊಂಡಿದೆ. ಕನ್ನಡ, ತಮಿಳು ಹಾಗೂ ಮಲೆಯಾಳಂ ಭಾಷೆಗಳನ್ನು ಹೊರೆತು ಪಡಿಸಿ ಮಿಕ್ಕೆಲ್ಲಾ ಭಾಷೆಗಳಲ್ಲಿ 'ಘೋಸ್ಟ್' ಚಿತ್ರವನ್ ಇದೇ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ ಸಿನಿಮಾ ಸದ್ದು ಮಾಡುವ ಸುಳಿವು ಸಿಗುತ್ತಿದೆ.
ಬಹುತೇಕ ಸೆಟ್‌ಗಳಲ್ಲೇ 'ಘೋಸ್ಟ್' ಸಿನಿಮಾ ಚಿತ್ರೀಕರಣ ನಡೆದಿದೆ. 3 ಕೋಟಿ ವೆಚ್ಚದಲ್ಲಿ 15 ಸೆಟ್‌ಗಳನ್ನು ನಿರ್ಮಿಸಿ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಬೆಂಗಳೂರಿನ ಮಿನರ್ವ ಮಿಲ್ ಹಾಗೂ ಮೈಸೂರಿನಲ್ಲಿ ಸೆಟ್‌ಗಳನ್ನು ನಿರ್ಮಿಸಿದ್ದರು. ಶ್ರೀನಿ ಕಥೆ, ಚಿತ್ರಕಥೆ ಬರೆದಿದ್ದು ಮಾಸ್ತಿ ಹಾಗೂ ಪ್ರಸನ್ನ ಸಂಭಾಷಣೆಯಿದೆ. ಅರ್ಜುನ್ ಜನ್ಯ ಸಂಗೀತ ಹಾಗೂ ಮಹೇಂದ್ರ ಸಿಂಹ ಛಾಯಾಗ್ರಹಣ 'ಘೋಸ್ಟ್' ಚಿತ್ರಕ್ಕಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಇದಕ್ಕೆ ಚಿತ್ರರಂಗ ಕೂಡ ಬೆಂಬಲ ಸೂಚಿಸಿದೆ. ಶಿವಣ್ಣ ಸೇರಿದಂತೆ ಸ್ಯಾಂಡಲ್‌ವುಡ್ ತಾರೆಯರು ಪ್ರತಿಭಟನೆಯಲ್ಲಿ ಭಾಗಿ ಆಗುವ ಸಾಧ್ಯತೆಯಿದೆ.


Click it and Unblock the Notifications











