ಶಿವಣ್ಣನ ಸಿನಿಮಾ ಪ್ರೀತಿಗೆ 32 ವರ್ಷದ ಸಂಭ್ರಮ
Recommended Video

ಕನ್ನಡ ಸಿನಿಮಾರಂಗದ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಡಬಲ್ ಸಂಭ್ರಮ. ಇದೇ ಶುಕ್ರವಾರ ಶಿವರಾಜ್ ಕುಮಾರ್ ಅಭಿನಯದ ಭಾರಿ ನಿರೀಕ್ಷೆ ಮೂಡಿಸಿರುವ ಟಗರು ಚಿತ್ರ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ಶಿವರಾಜ್ ಕುಮಾರ್ ಕನ್ನಡ ಸಿನಿಮಾರಂಗಕ್ಕೆ ಬಂದು ಇಂದಿಗೆ 32 ವರ್ಷಗಳು ಪೂರೈಸುತ್ತಿದ್ದಾರೆ.
ಇಂದಿಗೂ ಕೂಡ ಚಿರ ಯುವಕನಂತಿರುವ ಶಿವರಾಜ್ ಕುಮಾರ್ ಅಭಿನಯದ ಇಲ್ಲಿಯರೆಗೂ 118 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 32ವರ್ಷ ಪೂರೈಸಿರುವ ಶಿವಣ್ಣ ಈ ವರ್ಷ ಚಿತ್ರರಂಗದಲ್ಲಿ ಹಾಗೂ ಅಭಿಮಾನಿಗಳಿಗೆ ರಂಜಿಸಲು ಬೇರೆ ಬೇರೆ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ.
ಹಾಗಾದರೆ ಶಿವಣ್ಣ ಈ ವರ್ಷ ಪ್ರೇಕ್ಷಕರನ್ನ ಯಾವ ಯಾವ ಸಿನಿಮಾಗಳ ಮೂಲಕ ರಂಜಿಸಲಿದ್ದಾರೆ? ಹಿರಿ ತೆರೆಯಲ್ಲಿ ಮಾತ್ರವಲ್ಲದೆ ಕಿರು ತೆರೆಯಲ್ಲೂ ಹ್ಯಾಟ್ರಿಕ್ ಹೀರೋ ಪ್ರೇಕ್ಷಕರ ಎದುರಾಗಲಿದ್ದಾರೆ. ಯಾವ ಚಿತ್ರಗಳು ಶಿವಣ್ಣನ ಖಾತೆಯಲ್ಲಿದೆ, ಶಿವಣ್ಣ ನಡೆಸಿಕೊಡುವ ಕಾರ್ಯಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಮುಂದೆ ಓದಿ

ಶಿವಣ್ಣನ ಸಿನಿಮಾ ಜರ್ನಿಗೆ 32 ವರ್ಷ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 32 ವರ್ಷಗಳು ತುಂಬಿದೆ. ಆನಂದ್ ಸಿನಿಮಾ ಮಹೂರ್ತ ಫೆಬ್ರವರಿ 19-1986ನಲ್ಲಿ ನಡೆದಿತ್ತು. ಅಂದಿನಿಂದ ಇಂದಿನ ವರೆಗೂ ಶಿವರಾಜ್ ಕುಮಾರ್ ಅಭಿಮಾನಿಗಳನ್ನ ರಂಜಿಸುತ್ತಲೇ ಇದ್ದಾರೆ.

ತೆರೆಗೆ ಬರ್ತಿದೆ ಟಗರು
ಆನಂದ್ ಸಿನಿಮಾದಿಂದ ಇದೇ ವಾರ ಬಿಡುಗಡೆ ಆಗುತ್ತಿರುವ ಟಗರು ಚಿತ್ರದ ವರೆಗೂ ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ಯಾವುದೇ ರೀತಿಯ ಬದಲಾವಣೆಗಳು ಕಾಣುತ್ತಿಲ್ಲ. ಬಣ್ಣ ಹಚ್ಚಲು ಪ್ರಾರಂಭ ಮಾಡಿ 32 ವರ್ಷವಾದರೂ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ರಿಯಾಲಿಟಿ ಶೋ ನಲ್ಲಿ ಶಿವಣ್ಣ
ಬೆಳ್ಳೆ ತೆರೆಯಲ್ಲೇ ಸದಾ ಬ್ಯುಸಿ ಆಗಿರುವ ಶಿವರಾಜ್ ಕುಮಾರ್ ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತೀರ ಕಡಿಮೆ. ಸಾಕಷ್ಟು ದಿನಗಳ ನಂತರ ಸುವರ್ಣ ವಾಹಿನಿಯಲ್ಲಿ ಟಾಕ್ ಶೋ ವನ್ನು ಶಿವರಾಜ್ ಕುಮಾರ್ ನಡೆಸಿಕೊಳ್ಳಲಿದ್ದಾರೆ.

ಅತೀ ಹೆಚ್ಚು ಸಿನಿಮಾಗಳನ್ನ ಹೊಂದಿರುವ ನಟ
ಶಿವರಾಜ್ ಕುಮಾರ್ ಅಭಿನಯದ 119ನೇ ಸಿನಿಮಾವಾಗಿ ಟಗರು ತೆರೆಗೆ ಬರುತ್ತಿದೆ. ಇವುಗಳ ಜೊತೆಯಲ್ಲಿ ದಿ ವಿಲನ್, ಕವಚ, ಎಸ್ ಆರ್ ಕೆ ಸಿನಿಮಾಗಳ ಚಿತ್ರೀಕರಣದಲ್ಲಿ ಶಿವರಾಜ್ ಕುಮಾರ್ ಭಾಗಿ ಆಗುತ್ತಿದ್ದಾರೆ.


Click it and Unblock the Notifications











