"ಮಫ್ತಿ ಬಗ್ಗೆ ಮೊದಲು ನಂಬಿಕೆ ಇರ್ಲಿಲ್ಲ": ಭೈರತಿ ರಣಗಲ್ ಪ್ರೀಕ್ವೆಲ್, ಸೀಕ್ವೆಲ್ ಬಗ್ಗೆ ಶಿವಣ್ಣ ಹೇಳಿದ್ದಿಷ್ಟು
ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ 'ವೇದ' ಸಿನಿಮಾ ತೆಲುಗಿಗೆ ಡಬ್ ಆಗಿ ರಿಲೀಸ್ ಆಗ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಚಿತ್ರದ ಪ್ರೀ ರಿಲೀಸ್ ಈವೆಂಟ್ ಕೂಡ ನಡೀತು. ನಟಸಿಂಹ ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇನ್ನು 'ವೇದ' ಸಿನಿಮಾ ತೆಲುಗು ವರ್ಷನ್ ಪ್ರಮೋಷನ್ ವೇಳೆ ಶಿವಣ್ಣ 'ಮಫ್ತಿ' ಸೀಕ್ವೆಲ್ ಬಗ್ಗೆ ಮಾತನಾಡಿದ್ದಾರೆ.
'ವೇದ' ಸಿನಿಮಾ ತೆಲುಗಿನಲ್ಲಿ 'ಶಿವ ವೇದ' ಹೆಸರಿನಲ್ಲಿ ಡಬ್ ಆಗಿದೆ. ಈಗಾಗಲೇ ತೆಲುಗು ವರ್ಷನ್ ಟ್ರೈಲರ್ ಕೂಡ ರಿಲೀಸ್ ಆಗಿ ಸದ್ದು ಮಾಡ್ತಿದೆ. ಎ. ಹರ್ಷ ನಿರ್ದೇಶನದ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಡಿಸೆಂಬರ್ 23ಕ್ಕೆ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು. ಜೀ ಸ್ಟುಡಿಯೋಸ್ ಜೊತೆ ಜಂಟಿಯಾಗಿ ಗೀತಾ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸ್ವತಃ ಗೀತಾ ಶಿವರಾಜ್‌ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದರು. ಗಾನವಿ ಲಕ್ಷ್ಮಣ್, ಅದಿತಿ ಅರುಣ್ ಸಾಗರ್, ಉಮಾಶ್ರೀ, ಶ್ವೇತಾ ಚೆಂಗಪ್ಪ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ವಿತರಕ ವಿ ಆರ್ ಕೃಷ್ಣ ಮಂಡಿಪಾಟಿ 'ವೇದ' ಚಿತ್ರವನ್ನು ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಇನ್ನು ಶಿವಣ್ಣ ಚಿತ್ರದ ಪ್ರಮೋಷನ್ ಭಾಗವಾಗಿ ತೆಲುಗು ಚಾನಲ್‌ಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಸಾಕಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ನರ್ತನ್ ಅವರನ್ನೇ ಕೇಳಬೇಕು
ಸಂದರ್ಶನವೊಂದರಲ್ಲಿ 'ಮಫ್ತಿ' ಚಿತ್ರದಲ್ಲಿದ್ದ ಡ್ರೆಸ್ಸಿಂಗ್ ಸ್ಟೈಲ್ ಕೊಂಚ 'ವೇದ' ಚಿತ್ರದಲ್ಲೂ ಇದೆ. 'ಕಾಲಾ' ಚಿತ್ರದಲ್ಲಿ ರಜನಿಕಾಂತ್, 'ವೀರಸಿಂಹ ರೆಡ್ಡಿ' ಬಾಲಕೃಷ್ಣ ಕೂಡ ಇದೇ ರೀತಿ ದರ್ಶನ ಕೊಟ್ಟಿದ್ದರು. ಈ ಡ್ರೆಸ್ಟ್ ವಿಚಾರದಲ್ಲಿ ಏನಾದರೂ ಸೆಂಟಿಮೆಂಟ್ ಇದ್ಯಾ ಎನ್ನುವ ಪ್ರಶ್ನೆಗೆ ಶಿವಣ್ಣ "ಅದನ್ನು ಮಫ್ತಿ ಸಿನಿಮಾ ನಿರ್ದೇಶಕ ನರ್ತನ್ ಅವರನ್ನೇ ಕೇಳಬೇಕು" ಎಂದಿದ್ದಾರೆ.

'ಮಫ್ತಿ' ಬಗ್ಗೆ ಗೀತಾಗೆ ಡೌಟ್ ಇತ್ತು
"ಭೈರತಿ ರಣಗಲ್ ಪಾತ್ರ ನೆಗೆಟಿವ್ ಅನ್ನಿಸಿತ್ತು. ಆದರೆ ಆತನ ಹಾರ್ಟ್ ತುಂಬಾ ಪಾಸಿಟಿವ್, ಆ ಪಾತ್ರದಲ್ಲಿ ಸಾಕಷ್ಟು ನೋವು ಇರುತ್ತದೆ. ಅದಕ್ಕೆ ಆ ಡ್ರೆಸ್‌ಕೋಡ್, ಆ ಲುಕ್, ಭೈರತಿ ರಣಗಲ್ ಆ ರೀತಿ ಕಾಣಿಸಿದ್ದ. ನಾನು ಕೂಡ ನಿರೀಕ್ಷಿರಲಿಲ್ಲ. ಕಥೆ ಕೇಳಿದ್ದಾಗ ನಮ್ಮ ಪತ್ನಿ ಕೇಳುತ್ತಿದ್ದಳು, ನೀವು ಇಂಟರ್‌ವಲ್ ಆದ್ಮೇಲೆ ಬರ್ತೀರಾ, ಹೇಗ್ ಮಾಡ್ತೀರಾ ಎನ್ನುತ್ತಿದ್ದರು. ಜನ ಹೇಗೆ ಒಪ್ಪಿಕೊಳ್ಳುತ್ತಾರೆ ಎನ್ನುತ್ತಿದ್ದಳು. ಬಹಳ ಡೌಟ್‌ಫುಲ್ ಆಗಿ ಇದ್ದಳು"

ರವಿ ಬಸ್ರೂರು ಹೇಳಿದಾಗ ನಂಬಲಿಲ್ಲ
ಕೇಳೋಕೆ ಚೆನ್ನಾಗಿದೆ. ನರ್ತನ್ ಹಾಗೂ ಸೂರಿ ಮಾತ್ರ ನಮ್ಮಿಬ್ಬರಿಗೆ ಕಥೆ ಹೇಳಿರೋದು. ವೇದ ಕೂಡ ನಾನು ಮಾತ್ರ ಕೇಳಿದ್ದೆ. ಕಥೆ ಹೇಳಿದ ಮೇಲೆ ನೋಡೊಣ ಎಂದಳು. ಮುರಳಿ ನನ್ನ ಮಾವನ ಮಗ. ಸಿನಿಮಾ ಮುಗಿದ್ಮೇಲೆ ಸಂಗೀತ ನಿರ್ದೇಶನ ರವಿಬಸ್ರೂರು ಫೋನ್ ಮಾಡಿ ಹೇಳಿದರು. ಅಣ್ಣಾ ನಿಮ್ಮ ಪರ್ಫಾರ್ಮೆನ್ಸ್ ಬಗ್ಗೆ ಏನು ಹೇಳುವುದು ಗೊತ್ತಾಗುತ್ತಿಲ್ಲ ಎಂದರು. ನಾನು ಏಯ್ ಜೋಕ್ ಮಾಡ್ಬೇಡ ಅಂದೆ. ಇಲ್ಲ ಅಣ್ಣ ಅದ್ಭುತ ಅಂದರು. ಆಗ ಸ್ವಲ್ಪ ಓಕೆ, ಚೆನ್ನಾಗಿರಬಹುದೇನೋ ಅನ್ನಿಸಿತ್ತು.

ಭೈರತಿ ರಣಗಲ್ ಸೀಕ್ವೆಲ್, ಪ್ರೀಕ್ವೆಲ್
ಸಿನಿಮಾ ರಿಲೀಸ್ ಆದ್ಮೇಲೆ ಆ ಪಾತ್ರವನ್ನು ತೆಗೆದುಕೊಂಡ ರೀತಿ ಅದ್ಭುತವಾಗಿತ್ತು. ಆ ಪಾತ್ರದಲ್ಲಿ ಸಾಕಷ್ಟು ಎಮೋಷನ್ ಇತ್ತು. ಪ್ರೇಕ್ಷಕರು ಒಪ್ಪಿಕೊಂಡರು. ನಾವು ಆ ಸಿನಿಮಾ ಸೀಕ್ವೆಲ್ ಕೂಡ ಮಾಡುತ್ತಿದ್ದೇವೆ. ಸೀಕ್ವೆಲ್ ಜೊತೆ ಪ್ರೀಕ್ವೆಲ್ ಕೂಡ ಮಾಡುತ್ತೇವೆ. ಹೆಸರು ಭೈರತಿ ರಣಗಲ್. ಅದೇ ಟೈಟಲ್‌ನಲ್ಲಿ ಸಿನಿಮಾ ಬರುತ್ತದೆ" ಎಂದು ಶಿವರಾಜ್‌ಕುಮಾರ್ ವಿವರಿಸಿದ್ದಾರೆ.


Click it and Unblock the Notifications











