»   » ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!

ಶಿವಣ್ಣನ ಮಗಳ ಮದುವೆಗೆ ಅಮಿತಾಬ್ ಬರ್ತಾರಂತೆ!

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ರವರ ವಿವಾಹ ಮಹೋತ್ಸವ ಆಗಸ್ಟ್ 31 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನೆರವೇರಲಿದೆ.

ಮಗಳ ಮದುವೆಗೆ ಸ್ಯಾಂಡಲ್ ವುಡ್, ಕಾಲಿವುಡ್, ಟಾಲಿವುಡ್ ಮತ್ತು ಬಾಲಿವುಡ್ ನ ಎಲ್ಲಾ ಟಾಪ್ ಸ್ಟಾರ್ ಗಳನ್ನ ಶಿವಣ್ಣ ಆಹ್ವಾನಿಸುತ್ತಿದ್ದಾರೆ. [ರಜನಿ, ಕಮಲ್ ಗೆ ಶಿವಣ್ಣನ ಮಗಳ ಮದುವೆಯ ಕರೆಯೋಲೆ]

Shivarajkumar invites Amitabh Bachchan for his Daughter's marriage

ಇತ್ತೀಚಿಗಷ್ಟೆ ಸೂಪರ್ ಸ್ಟಾರ್ ರಜಿನಿಕಾಂತ್, ಕಮಲ್ ಹಾಸನ್, ಧನುಷ್, ಪ್ರಭು ಸೇರಿದಂತೆ ಕಾಲಿವುಡ್ ನ ಪ್ರಮುಖ ನಟರ ಮನೆಗೆ ತೆರಳಿದ ಶಿವಣ್ಣ ದಂಪತಿ ಆತ್ಮೀಯ ಆಮಂತ್ರಣ ನೀಡಿತ್ತು. ಈಗ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಗೂ ತೆರಳಿ ತಮ್ಮ ಮಗಳ ಮದುವೆಗೆ ಮಮತೆಯ ಕರೆಯೋಲೆ ನೀಡಿ ಬಂದಿದ್ದಾರೆ. [ನೀವಂದುಕೊಂಡಂಗಿಲ್ಲ ಸುದೀಪ್-ಶಿವಣ್ಣ! ಅಚ್ಚರಿ ನೋಡಿ]

ನಿರುಪಮಾ-ದಿಲೀಪ್ ರ ಮದುವೆ ಆಮಂತ್ರಣ ಸ್ವೀಕರಿಸಿದ ಅಮಿತಾಬ್ ಬಚ್ಚನ್, ಖುದ್ದಾಗಿ ಬಂದು ಆಶೀರ್ವಾದ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಶಿವಣ್ಣ ಮತ್ತು ದಂಪತಿ ಫುಲ್ ಖುಷ್ ಆಗಿದ್ದಾರೆ.

English summary
Kannada Actor Shivarajkumar met Bollywood Actor Amitabh Bachchan recently and invited for his Daughter Nirupama's Wedding. Shivarajkumar's elder daughter Nirupama is tying wedlock on August 31st.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada