'RX ಸೂರಿ' ಚಿತ್ರ ನೋಡಿ ಸೀಟಿ ಹೊಡೆದ ಶಿವಣ್ಣ
ದುನಿಯಾ ವಿಜಯ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'RX ಸೂರಿ' ಇವತ್ತು ಅದ್ದೂರಿಯಾಗಿ ರಿಲೀಸ್ ಆಗಿದೆ. ಬೆಂಗಳೂರಿನ ಕಪಾಲಿ ಚಿತ್ರಮಂದಿರ ಸೇರಿದಂತೆ ರಾಜ್ಯಾದಂತ್ಯ 'RX ಸೂರಿ' ಅದ್ದೂರಿ ಪ್ರದರ್ಶನ ಕಾಣ್ತಿದೆ.
'RX ಸೂರಿ' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಲು ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಅಪಾರ ಅಭಿಮಾನಿಗಳು ನೆರೆದಿದ್ದರು. ಅಭಿಮಾನಿಗಳೊಂದಿಗೆ ದುನಿಯಾ ವಿಜಯ್, ತಮ್ಮ ಪತ್ನಿ ಸಮೇತರಾಗಿ ಥಿಯೇಟರ್ ಗೆ ಆಗಮಿಸಿ ಚಿತ್ರವನ್ನ ವೀಕ್ಷಿಸಿದರು.

ವಿಶೇಷ ಅಂದ್ರೆ, ಇವತ್ತು ದುನಿಯಾ ವಿಜಯ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಕಪಾಲಿ ಚಿತ್ರಮಂದಿರಕ್ಕೆ ಆಗಮಿಸಿ ಅಭಿಮಾನಿಗಳೊಂದಿಗೆ ಕೂತು 'RX ಸೂರಿ' ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಂಡರು. [ದುನಿಯಾ ವಿಜಿ ಜತೆ ಆರ್ ಎಕ್ಸ್ ಸೂರಿ ನೋಡಲಿರುವ ಶಿವಣ್ಣ]
'RX ಸೂರಿ' ಚಿತ್ರದಲ್ಲಿ ದುನಿಯಾ ವಿಜಯ್ ಆಕ್ಟಿಂಗ್ ನೋಡಿ ಶಿವಣ್ಣ ಫುಲ್ ಖುಷ್ ಆಗಿದ್ದಾರೆ. ದುನಿಯಾ ವಿಜಯ್ ಫೈಟ್ ಮತ್ತು ಪಂಚಿಂಗ್ ಡೈಲಾಗ್ಸ್ ನೋಡಿದ ಶಿವಣ್ಣ 'RX ಸೂರಿ' ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. [ದುನಿಯಾ ವಿಜಯ್ ಆರ್ ಎಕ್ಸ್ ಸೂರಿ ಏಕೆ ನೋಡ್ಬೇಕು?]
'RX ಸೂರಿ' ಉತ್ತಮ ಚಿತ್ರ ಅಂತ ಹೇಳಿದ ಶಿವಣ್ಣ ಯುವ ನಿರ್ದೇಶಕ ಶ್ರೀ ಜೈ ಅವರ ಬೆನ್ನು ತಟ್ಟಿದರು. ರೌಡಿಸಂ ಸುತ್ತ ಹೆಣೆದಿರುವ ಸಿನಿಮಾ 'RX ಸೂರಿ'. ದುನಿಯಾ ವಿಜಯ್ ಜೊತೆ ಆಕಾಂಕ್ಷ ನಟಿಸಿರುವ ಈ ಚಿತ್ರಕ್ಕೆ ಸುರೇಶ್ ಬಂಡವಾಳ ಹಾಕಿದ್ದಾರೆ.


Click it and Unblock the Notifications











