'ರಾಜಕುಮಾರ ಪಂಚಪದಿ ಬಿಡುಗಡೆ': ಅಣ್ಣಾವ್ರ ಮಕ್ಕಳ ಜೊತೆ ಸ್ಟಾರ್ ನಟರು ಸಾಥ್
ವರನಟ, ಕನ್ನಡದ ಕಂಠೀರವ ಡಾ ರಾಜ್ ಕುಮಾರ್ ಅಭಿನಯದ 209 ಚಲನಚಿತ್ರಗಳಿಗೆ ಸಂಬಂಧಿಸಿದಂತೆ ಅತ್ಯಂತ ವಿಭಿನ್ನವಾಗಿ ಪ್ರಕಟವಾಗಿರುವ "ರಾಜಕುಮಾರ ಪಂಚಪದಿ" ಕೃತಿಯನ್ನು ನಟ ಶಿವರಾಜ್ ಕುಮಾರ್ ಲೋಕಾರ್ಪಣೆ ಮಾಡಿದರು.
ಶನಿವಾರ ಮಧ್ಯಾಹ್ನ 2 ಗಂಟೆಗೆ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಶಿವಣ್ಣ, ಅಣ್ಣಾವ್ರ ವಿಶೇಷವಾದ ಕೃತಿಯನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. 'ರಾಜಕುಮಾರ ಪಂಚಪದಿ' ಕೃತಿಗೆ ಅಣ್ಣಾವ್ರ ಮಕ್ಕಳು ಹಾಗೂ ಕನ್ನಡ ಸಿನಿ ಇಂಡಸ್ಟ್ರಿಯ ಹಲವು ಕಲಾವಿದರು ಸಾಥ್ ನೀಡಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....

ಪುಸ್ತಕ ಬಿಡುಗಡೆ ಮಾಡಿದ ಶಿವಣ್ಣ
'ರಾಜಕುಮಾರ ಪಂಚಪದಿ' ಕೃತಿಯನ್ನು ನಟ ಶಿವರಾಜ್ ಕುಮಾರ್ ಲೋಕಾರ್ಪಣೆ ಮಾಡಿದ್ದಾರೆ. ಲೇಖಕ ಮಂಜುನಾಥ್ ಹಾಲುವಾಗಿಲು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಶುಭಕೋರಿದ ಪುನೀತ್
"ರಾಜಕುಮಾರ ಪಂಚಪದಿ" ಪುಸ್ತಕವನ್ನು ಇಂದು ಬಿಡುಗಡೆ ಮಾಡಲಾಗಿದೆ. ಲೇಖಕರಾದ ಮಂಜುನಾಥ್ ಹಾಲುವಾಗಿಲು ಹಾಗೂ ಪ್ರಕಾಶಕರಾದ ಸ್ನೇಹ ಬುಕ್ ಹೌಸ್ ರವರಿಗೆ ಅಭಿನಂದನೆಗಳು'' ಎಂದು ಟ್ವಿಟ್ಟರ್‌ನಲ್ಲಿ ವಿಶ್ ಮಾಡಿದ್ದಾರೆ.

ಅಭಿನಂದನೆ ತಿಳಿಸಿದ ಧ್ರುವ ಸರ್ಜಾ
''ಡಾ|| ರಾಜ್ ಕುಮಾರ್ ರವರ ಚಿತ್ರ ಜೀವನಕ್ಕೆ ಸಂಬಂಧಿಸಿದಂತೆ, ಅವರು ನಟಿಸಿರುವ ಮೊದಲನೇ ಚಿತ್ರ "ಬೇಡರ ಕಣ್ಣಪ್ಪ"ದಿಂದ ಹಿಡಿದು ಕೊನೆಯ ಚಿತ್ರ "ಶಬ್ದವೇದಿ"ಯವರೆಗಿನ 209 ಚಲನಚಿತ್ರಗಳಿಗೆ ಸಂಬಂಧಿಸಿದಂತೆ, 209 ಪಂಚಪದಿಗಳನ್ನು ರಚಿಸಿರುವ "ರಾಜಕುಮಾರ ಪಂಚಪದಿ" ಕೃತಿಯು ಲೋಕಾರ್ಪಣೆಯಾಗುತ್ತಿದೆ. ಜೈ ಆಂಜನೇಯ'' ಎಂದು ನಟ ಧ್ರುವ ಸರ್ಜಾ ಶುಭಕೋರಿದ್ದಾರೆ.

ಜಗ್ಗೇಶ್ ಸಂತಸ
'ರಾಜಕುಮಾರ ಪಂಚಪದಿ' ಕೃತಿ ಲೋಕಾರ್ಪಣೆ ಮಾಡಿದ್ದಕ್ಕೆ ಹಿರಿಯ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಫೋಟೋ ಹಂಚಿಕೊಂಡಿರುವ ಜಗ್ಗೇಶ್ ''ನಾನು ಭಾಗವಹಿಸಿದ ಕ್ಷಣ... ಧನ್ಯೋಸ್ಮಿ'' ಎಂದಿದ್ದಾರೆ.

ಯುವರಾಜ್ ಕುಮಾರ್ ಸಂತಸ
'ರಾಜಕುಮಾರ ಪಂಚಪದಿ' ಪುಸ್ತಕ ಬಿಡುಗಡೆಯಾದ ಬಳಿಕ ಅಣ್ಣಾವ್ರ ಮೊಮ್ಮಗ ಯುವರಾಜ್ ಕುಮಾರ್ ಪುಸ್ತಕವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Recommended Video

ರಾಘಣ್ಣ ಸಂತಸ
ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಜೊತೆಗೆ ರಾಘವೇಂದ್ರ ರಾಜ್ ಕುಮಾರ್ ಸಹ ಪುಸ್ತುಕ ಬಿಡುಗಡೆಗೆ ಕೈ ಜೋಡಿಸಿದ್ದಾರೆ. ‘ರಾಜಕುಮಾರ ಪಂಚಪದಿ' #NewBook release. ಅಭಿಮಾನಿ ದೇವರುಗಳಿಗೆ ಶುಭವಾಗಲಿ ನಿಮ್ಮ ಅಭಿಮಾನಕ್ಕೆ ನಾವು ಚಿರಋಣಿ'' ಎಂದು ಟ್ವೀಟ್ ಮಾಡಿದ್ದಾರೆ.


Click it and Unblock the Notifications











